ಸನ್ಮಾರ್ಗ ವಾರ್ತೆ
ತೊಕ್ಕೊಟ್ಟು, ಎಪ್ರಿಲ್ 1- ನಿನ್ನೆ ಗಿಜಿ ಗುಟ್ಟಿದ್ದ ತೊಕ್ಕೊಟ್ಟು ಇವತ್ತು ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಶಾಂತವಾಗಿದೆ. ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಇಲ್ಲ. ತರಕಾರಿ ಅಂಗಡಿ, ಕೋಳಿ ಅಂಗಡಿ ಮತ್ತು ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ತೀರ ಸಹಜ ವಾತಾವರಣವಿತ್ತು. ಅಂಗಡಿಗಳಲ್ಲಿ ವಸ್ತುಗಳ ಕೊರತೆ ಒಂದೆಡೆಯಾದರೆ ನಿನ್ನೆ ಮುಗಿಬಿದ್ದು ಖರೀದಿಸಿ ಕೊಂಡೊಯ್ದದ್ದು ಇನ್ನೊಂದು ಕಡೆ. ಯಾವಾಗ ಮರಳಿ ಜಿಲ್ಲಾ ಬಂದ್ ಘೋಷಣೆಯಾಗುತ್ತದೋ ಅನ್ನುವ ಭೀತಿಯಿಂದ ಜನರು ನಿನ್ನೆ ಮುಗಿಬಿದ್ದು ಖರೀದಿಸಿದ್ದರು. ಇವತ್ತು ಬಹುತೇಕ ಅಗತ್ಯ ವಸ್ತುಗಳ ಕೊರತೆ ತೊಕ್ಕೊಟ್ಟಿನಲ್ಲಿ ಕಂಡುಬಂದಿದೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












