ಸನ್ಮಾರ್ಗ ವಾರ್ತೆ
ಉತ್ತರಾಖಂಡ: ಭಾರತಕ್ಕೆ ಕೆಲಸಕ್ಕಾಗಿ ನೇಪಾಳದಿಂದ ಬಂದಿರುವ ನೂರಾರು ವಲಸೆ ಕಾರ್ಮಿಕರು ಇಂಡೊ-ನೇಪಾಳ ಗಡಿಯಲ್ಲಿ ಸಿಲುಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಗಡಿನಗರ ದರ್ಬುಚೂಲ್ನಲ್ಲಿ ಇವರೆಲ್ಲ ಪ್ರತಿಬಂಧಿಸಲ್ಪಟ್ಟಿದ್ದಾರೆ. ಭಾರತದಲ್ಲಿ ಲಾಕ್ ಡೌನ್ ಆಗಿದ್ದರಿಂದ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಬಂದಿದ್ದಾರೆ. ಗಡಿಯನ್ನು ಮುಚ್ಚಿ ಜನರು ಅತ್ತಿತ್ತ ಅಡ್ಡಾಡಬಾರದೆಂದು ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿತ್ತು. ಇದು ದಿನಗೂಲಿಗಳಿಗೆ ತೀರ ಕಷ್ಟವನ್ನು ತಂದೊಡ್ಡಿದೆ. ನೇಪಾಳಕ್ಕೆ ಮರಳಲು ಅವರು ಕಾತರಿಸುತ್ತಿದ್ದಾರೆ.
ಕೊರೊನ ವೈರಸ್ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಕೂಡ ಎಪ್ರಿಲ್ ಏಳರವರೆಗೆ ಲಾಕ್ ಡೌನ್ ಇದೆ. ನೇಪಾಳದಲ್ಲಿ ಐವರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












