ಚಳಿಗಾಲದಲ್ಲಿ ಕೊರೊನಾ ಹೆಚ್ಚು ಹಾನಿ ಮಾಡಲಿದೆ- ಅಮೆರಿಕ

0
775

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 23: ಮುಂಬರುವ ಚಳಿಗಾಲದಲ್ಲಿ ಕೊರೊನ ವೈರಸ್ ಅಮೆರಿಕದಲ್ಲಿ ಹೆಚ್ಚು ಆತಂಕ ಸೃಷ್ಟಿಸಲಿದೆ ಎಂದು ಅಮೆರಿಕದ ಪಬ್ಲಿಕ್ ಹೆಲ್ತ್ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಸೆನಟರ್ಸ್ ಫಾರ್ ಡೀಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್‍ಶನ್ (ಸಿಡಿಸಿ) ಮುಖ್ಯಸ್ಥ ರಾಬರ್ಟ್ ರೆಡ್‍ಫೀಲ್ಡ್ ಈ ಮುನ್ನೆಚ್ಚರಿಕೆ ನೀಡಿದ್ದಾರೆ. ಚಳಿಗಾಲದ ಅಂಟು ರೋಗ ಸೀಝನ್ ಬರುತ್ತಿದೆ. ಇದರೊಂದಿಗೆ ಕೊರೊನಕ್ಕೆ ಇನ್ನೊಂದು ಹಂತಕ್ಕೆ ದಾಟಲು ಸಾಧ್ಯವಾಗಬಹುದು. ಇದು ಈಗಿನ ವೈರಸ್ ಪ್ರತಿರೋಧ ಚಟುವಟಿಕೆಗಳನ್ನು ಹೆಚ್ಚು ತೊಂದರೆಗೊಳಪಡಿಸಬಹುದು ಎಂದು ಅವರು ಹೇಳಿದ್ದಾರೆ.

ಒಂದೇ ಸಮಯದಲ್ಲಿ ಅಂಟುರೋಗ, ಕೊರೊನಾ ಇವೆರಡನ್ನು ಒಟ್ಟಿಗೆ ಪ್ರತಿರೋಧಿಸುವ ಪರಿಸ್ಥಿತಿ ಬರಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಎರಡು ಅನಾರೋಗ್ಯ ಒಂದೇ ಸಮಯದಲ್ಲಿ ಉಂಟಾಗುವುದು. ಹೀಗಾದರೆ ಆರೋಗ್ಯ ವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಜನರು ಗುಂಪುಗೂಡಿ ಪ್ರತಿಭಟಿಸುವುದು ಕೊರೊನಾ ಪ್ರತಿರೋಧ ಚಟವಟಿಕೆಗೆ ಬಾಧೆಯಾಗಲಿದೆ ಎಂದು ರಾಬರ್ಟ್ ರೆಡ್‍ಫೀಲ್ಡ್ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.