ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಸಹಿತ ನಾಗರಿಕರನ್ನು ರಷ್ಯ ಬಂದಿಯಾಗಿಸಿದೆ: ಉಕ್ರೇನ್

0
204

ಸನ್ಮಾರ್ಗ ವಾರ್ತೆ

ಕೀವ್: ರಷ್ಯದ ಜೈಲುಗಳಲ್ಲಿ ಹಲವು ನಾಗರಿಕರನ್ನು ಕೈದಿಯಾಗಿರಿಸಲಾಗಿದೆ ಎಂದು ಉಕ್ರೇನ್ ಉಪಪ್ರಧಾನಿ ಐರಿನ ವೆರೊಸ್‍ಚುಕ್ ಹೇಳಿದ್ದಾರೆ. ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಸಹಿತ ಹಲವು ಜನಸಾಮಾನ್ಯರನ್ನು ಈ ರೀತಿ ಕೈದಿಯಾಗಿಸಲಾಗಿದೆ.

ಕುರಸ್ಕ, ಬ್ರಾಯಾನ್ಸಕ್, ರೊಸ್‍ತೊವ್ ಮುಂತಾದ ರಷ್ಯದ ಪ್ರದೇಶಗಳಲ್ಲಿ ಹಲವು ಜನರನ್ನು ಬಂಧನದಲ್ಲಿರಿಸಲಾಗಿದ್ದು, ಅವರಲ್ಲಿ ಪತ್ರೆಕರ್ತರು, ಹೋರಾಟಗಾರರು ಸಹಿತ ಇದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ಮೇಯರ್‌ಗಳು, ಪಾದ್ರಿಗಳು ಕೂಡ ರಷ್ಯದ ಸೆರೆಯಲ್ಲಿದ್ದಾರೆ. ಜನಸಾಮಾನ್ಯರನ್ನು ಕೂಡ ಬಲವಂತದಿಂದ ಎತ್ತಿಕೊಂಡು ಬಂದಿಯಾಗಿರಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಆದರೆ ನಾಗರಿಕರನ್ನು ಕೈದಿಯಾಗಿಸಲಾಗಿದೆ ಎಂಬ ವಾದವನ್ನು ರಷ್ಯ ನಿರಾಕರಿಸಿದೆ.

ಇದೇ ವೇಳೆ ಉಕ್ರೇನಿನ ಈಶಾನ್ಯ ನಗರವಾದ ಕಾರ್ಕಿಕ್‍ನಲ್ಲಿ ರಷ್ಯದ ಸೇನೆ ವ್ಯಾಪಕವಾಗಿ ಗಣಿ ಬಾಂಬ್‌ಗಳನ್ನು ಹುಗಿದಿದ್ದು, ಉಕ್ರೇನಿಯನರು ಹೊರಗೆ ಬರಬಾರದೆಂದು ಸರಕಾರ ಮನವಿಮಾಡಿಕೊಂಡಿದೆ ಹಾಗೂ ಸೇನೆ ಈ ಕುರಿತು ಮುನ್ನೆಚ್ಚರಿಕೆ ನೀಡಿದೆ.