ಪಶ್ಚಿಮ ದಂಡೆ: 4,560 ಮನೆಗಳಿಗೆ ಅನುಮತಿ ನೀಡಲಿದೆ ಇಸ್ರೇಲ್

0
493

ಸನ್ಮಾರ್ಗ ವಾರ್ತೆ

ಪಶ್ಚಿಮ ದಂಡೆ: ಅಮೆರಿಕದ ವಿರೋಧವನ್ನು ಕಡೆಗಣಿಸಿ ಇಸ್ರೇಲ್ ಪಶ್ಚಿಮ ದಂಡೆಯಲ್ಲಿ ವಲಸಿಗರಿಗೆ 4560 ಮನೆಗಳಲ್ಲಿ ವಾಸ್ತವ್ಯ ಹೂಡಿಸುವುದಕ್ಕೆ ಮುಂದಾಗಿದ್ದೂ ಮುಂದಿನ ವಾರ ನಡೆಯುವ ಸುಪ್ರೀಂ ಪ್ಲಾನಿಂಗ್ ಕೌನ್ಸಿಲ್ ಅನುಮತಿ ನೀಡಲಿದೆ ಎಂದು ಉನ್ನತ ಮೂಲಗಳನ್ನು ಉದ್ಧರಿಸಿ ಮಾಧ್ಯಮಗಳು ವರದಿ ಮಾಡಿದೆ.

ಇಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಲಸಿಗರನ್ನು ವಾಸ್ತವ್ಯ ಹೂಡಿಸುವ ಯೋಜನೆ ಕೈಬಿಡಬೇಕೆಂದು ಅಮೆರಿಕ ಇಸ್ರೇಲಿಗೆ ತಿಳಿಸಿತ್ತು.

1,332 ಮನೆಗಳಿಗೆ ಅಂತಿಮ ಅನುಮತಿ ಲಭಿಸಲು ಬಾಕಿಯಿದೆ. ಇವು ಪ್ರಾಥಮಿಕ ಕ್ಲಿಯರೆನ್ಸ್ ಹಂತದಲ್ಲಿವೆ. ಇಸ್ರೇಲಿನ ಬೆಂಜಮಿನ್ ನೆತನ್ಯಾಹು ಸರಕಾರ ವಲಸಿಗರನ್ನು ವ್ಯಾಪಕಗೊಳಿಸುವ ನೀತಿಯನ್ನು ಮುಂದುವರಿಸಿದೆ. ಅದು ಸರಕಾರದ ಘೋಷಿತ ಕಾರ್ಯಕ್ರಮವಾಗಿದೆ.

7000ಕ್ಕೂ ಹೆಚ್ಚು ಮನೆಗಳ ಯುನಿಟ್ ಗಳಿಗೆ ಹೊಸ ಸರಕಾರ ಅನುಮತಿ ನೀಡಿದ್ದು ಇದರಲ್ಲಿ ಪಶ್ಚಿಮ ದಂಡೆಯಲ್ಲಿ ಹೆಚ್ಚು ಮನೆಗಳು ನಿರ್ಮಾಣವಾಗಲಿದೆ. ವಲಸಿಗರಿಗೆ ವಾಸ್ತವ್ಯವನ್ನು ಮಾಡಿಕೊಡುವುದು ಮತ್ತು ಇಸ್ರೇಲಿನ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ ಎಂದು ಹಣಕಸು ಸಚಿವ ಬೆಸಲಿಸ್ ಸ್ಮಾಟೊರಿಚ್ ತಿಳಿಸಿದರು.

ಪಶ್ಚಿಮ ದಂಡೆಯಲ್ಲಿ ಇಸ್ರೇಲಿನ ವಲಸಿಗರನ್ನು ಹೆಚ್ಚಿಸುವುದು ಅನಧಿಕೃತವೆಂದು ಹೆಚ್ಚಿನ ದೇಶಗಳ ನಿಲುವಾಗಿದ್ದರೂ ಇಸ್ರೇಲ್ ಕಿವಿಕೊಡುತ್ತಿಲ್ಲ. ಫೆಲಸ್ತೀನ್ ಇಸ್ರೇಲ್ ಸಮಸ್ಯೆಯ ಆಧಾರದಲ್ಲಿ ಇಸ್ರೇಲ್ ವಲಸಗಿರಿಗಾಗಿ ಫೆಲಸ್ತೀನಿನ ಜಮೀನು ಅತಿಕ್ರಮಿಸುತ್ತಿದೆ. ಫೆಲಸ್ತೀನ್ ಶಾಂತಿ ಚರ್ಚೆ 2014ರಿಂದ ಸ್ಥಗಿತವಾಗಿದೆ.

ಘರ್ಷಣೆ ನಡೆಯುವಾಗ ಯಾವಾಗಲಾದರೊಮ್ಮೆ ಚರ್ಚೆ ನಡೆದರೂ ಅದಕ್ಕೆ ಎಲ್ಲ ವಿಭಾಗಗಳು ಬೆಂಬಲ ನೀಡಿಲ್ಲ. ಇಸ್ರೇಲ್ ವಲಸೆಗಾರರು ಫೆಲಸ್ತೀನಿಗಳ ನಡುವೆ ಘರ್ಷಣೆ ವ್ಯಾಪಕವಾಗಿ ನಡೆಯುತ್ತಿಲ್ಲ. 2000 ನಂತರ ಅತ್ಯಂತ ದೊಡ್ಡ ಘರ್ಷಣೆಯ ಸ್ಥಿತಿಯನ್ನು ಪ್ರದೇಶ ಎದುರಿಸುತ್ತಿದ್ದು ಪಶ್ಚಿಮ ದಂಡೆಯಲ್ಲಿ ಫೆಲಸ್ತೀನ್ ಅಥಾರಿಟಿಯ ಆಡಳಿತ ವ್ಯಾಪ್ತಿ ಪರಿಮಿತವಾಗಿದೆ. ಪಶ್ಚಿಮ ದಂಡೆಯಲ್ಲಿ ಇಸ್ರೇಲಿನ ವಲಸಿಗರಿಗೆ ಮನೆ ಕಟ್ಟಿಕೊಡುವ ಯೋಜನೆಯನ್ನು ಹಮಾಸ್ ಖಂಡಿಸಿದ್ದು ಫೆಲಸ್ತೀನಿಯರು ಎಲ್ಲ ರೀತಿಯಿಂದಲೂ ಪ್ರತಿರೋಧಿಸಬೇಕೆಂದು ಕರೆ ನೀಡಿದೆ.