ಯಹೂದಿಯರ ಯಶಸ್ಸಿನಲ್ಲಿ ನಮಗಿರುವ ಪಾಠವೇನು?

0
434

ಸನ್ಮಾರ್ಗ ವಾರ್ತೆ

✍️ ಅಬ್ದುಸ್ಸಲಾಮ್ ವಾಣಿಯಂಬಲಮ್

ಇಂದು ಜಗತ್ತನ್ನು ತಮ್ಮ ಅಧೀನದಲ್ಲಿರಿಸಿಕೊಂಡು ಆಳುತ್ತಿರುವವರು ಯಾರು? ಅದು ಝಿಯೋನಿಸ್ಟರು ಎಂಬುದರಲ್ಲಿ ಸಂಶಯವಿಲ್ಲ. ಅಮೇರಿಕ, ಚೀನ ಮತ್ತು ರಷ್ಯಾ ಜಗತ್ತನ್ನು ನಿಯಂತ್ರಿಸುತ್ತಿದೆ ಎಂಬುದು ಭ್ರಮೆಯಾಗಿದೆ. ನಿಜವಾಗಿ ಜಗತ್ತನ್ನು ನಿಯಂತ್ರಿಸುತ್ತಿರುವವರು ಝಿಯೋನಿಸ್ಟರಾಗಿದ್ದಾರೆ.

ಹಾಗಾದರೆ ಜಗತ್ತಿನಲ್ಲಿ ಯಹೂದಿಗಳ ಜನಸಂಖ್ಯೆ ಎಷ್ಟಿದೆ? ಹೆಚ್ಚೆಂದರೆ ಹದಿನಾರು ಮಿಲಿಯನ್ ಇರಬಹುದು. ಅದೇ ವೇಳೆ ಇಲ್ಲಿ 200 ಕೋಟಿ ಮುಸ್ಲಿಮರೂ 238 ಕೋಟಿ ಕ್ರೈಸ್ತರೂ ಇದ್ದಾರೆ. ವಿಶ್ವ ಜನಸಂಖ್ಯೆಯಲ್ಲಿ 31.2% ಮಂದಿ ಕ್ರೈಸ್ತರು. ಮುಸ್ಲಿಮರು ಶೇಕಡಾ 24.1 ಇದ್ದಾರೆ. ಯಹೂದಿಗಳು ಶೇಕಡಾ 0.2 ದಷ್ಟಿದ್ದಾರೆ. ಇಸ್ರೇಲ್ ಎಂಬ ಝಿಯೋನಿಸ್ಟ್ ದೇಶದಲ್ಲಿ ಒಟ್ಟು ಜನಸಂಖ್ಯೆ 65 ಲಕ್ಷ ಮಾತ್ರವೇ ಇದೆ. ಅಂದರೆ ಕೇರಳದಲ್ಲಿರುವ ಮುಸ್ಲಿಮರಿಗಿಂತ ಕಡಿಮೆ. ಇಸ್ರೇಲ್‌ನ ವಿಸ್ತೀರ್ಣ 22,145 ಚದರ ಕಿಲೋ ಮೀಟರ್ ಮಾತ್ರವೇ ಇದೆ. ಈ ಪುಟ್ಟ ರಾಷ್ಟ್ರವು ಜಗತ್ತನ್ನೇ ನಿಯಂತ್ರಿಸುವ ಸಾಮರ್ಥ್ಯ ಹೇಗೆ ಗಳಿಸಿಕೊಂಡಿತು?

ತಮ್ಮ ಪ್ರಯತ್ನ ತಂತ್ರಗಳ ಮುಖಾಂತರ ವ್ಯವಸ್ಥಿತ ಯೋಜನೆಯ ಮೂಲಕ ಅವರು ಅದನ್ನು ಗಳಿಸಿಕೊಂಡರು. ಹಲವು ದೇಶಗಳಿಂದ ಹೊರದಬ್ಬಲ್ಪಟ್ಟ ಒಂದು ಸಮುದಾಯವು 1898ರಲ್ಲಿ ಸ್ವಿಝ್ಝರ್‌ಲ್ಯಾಂಡ್‌ನ ಬಾಲ್ ನಗರದಲ್ಲಿ ಥಿಯೋಡರ್ ಹಡ್ಸಲ್‌ನ ನೇತೃತ್ವದಲ್ಲಿ ಸಭೆ ಸೇರಿ ಫೆಲೆಸ್ತೀನಿನಲ್ಲಿ ಒಂದು ದೇಶವನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡದ್ದನ್ನು ಜಗತ್ತು ನೋಡಿತು. ಸಭೆ ಮುಗಿದು ಹೊರ ಬಂದ ಹಡ್ಸಲ್ ಜೊತೆ ಪತ್ರಕರ್ತನೊಬ್ಬ ಭೇಟಿಯಾಗಿ “ಒಂದಿಂಚು ಭೂಮಿ ಕೂಡಾ ಇಲ್ಲದೇ ಇರುವವರು ಮತ್ತೊಂದು ದೇಶದಲ್ಲಿ ಅದು ಹೇಗೆ ರಾಷ್ಟ್ರ ಸ್ಥಾಪಿಸುವಿರಿ?” ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಹಡ್ಸಲ್, “ಕಾದು ನೋಡಿ, ಮುಂದಿನ ಐವತ್ತು ವರ್ಷಗಳಲ್ಲಿ ಒಂದು ಹೊಸ ರಾಷ್ಟ್ರ ಉದಯಿಸಲಿದೆ” ಎಂದರು.

ಸರಿಯಾಗಿ ಐವತ್ತು ವರ್ಷಗಳಾಗುವಾಗ 1948ರಲ್ಲಿ ಇಸ್ರೇಲ್ ಹುಟ್ಟಿತು! 1848ರ ನಿರ್ಧಾರದನುಸಾರ ಬಹಳ ಯೋಜನಾ ಬದ್ಧವಾಗಿ ಫೆಲೆಸ್ತೀನ್‌ಗೆ ಯಹೂದಿಗಳು ನುಸುಳ ತೊಡಗಿದರು. ಮಾತ್ರವಲ್ಲ ವಿಶ್ವದ ರಾಷ್ಟ್ರಗಳನ್ನು ತಮ್ಮ ಪರವಾಗಿಸಿಕೊಳ್ಳಲು ಶಕ್ತರಾದರು.

1917ರಲ್ಲಿ ಬಾಲ್‌ಫರ್ ಘೋಷಣೆ ಮಾಡುವಾಗ ಫೆಲೆಸ್ತೀನಿನಲ್ಲಿ ಕೇವಲ ಶೇಕಡಾ ನಾಲ್ಕರಷ್ಟು ಮಾತ್ರ ಯಹೂದಿಯರಿದ್ದರು. 1948 ಆಗುವಾಗ ಅದು ಶೇಕಡಾ 31ಕ್ಕೇರಿತು. 1948ರಲ್ಲಿ ಜಗತ್ತಿನ ಪ್ರಬಲ ರಾಷ್ಟ್ರಗಳ ಸಹಕಾರದಿಂದ ಇಸ್ರೇಲ್ ದೇಶ ಸ್ಥಾಪನೆಗೊಂಡಿತು. ನಂತರ 1967 ಹಾಗೂ 1971ರಲ್ಲಿ ನೆರೆಯ ರಾಷ್ಟ್ರಗಳ ಜೊತೆ ಯುದ್ಧ ಮಾಡಿ ಸಿನಾ ಮರುಭೂಮಿ, ಗಾಝಾ, ಪಶ್ಚಿಮ ದಂಡೆ ಮತ್ತು ಜುಲಾನ್ ಪರ್ವತವನ್ನು ವಶಪಡಿಸಿಕೊಂಡಿತು. ಹಾಗೆಯೇ ಯಹೂದಿ ರಾಷ್ಟ್ರ ಸ್ಥಾಪಿಸಿ ಅಭಿವೃದ್ದಿಪಡಿಸಿ ಅದು ಈಗ ಜಗತ್ತಿನ ಪ್ರಬಲ ರಾಷ್ಟ್ರಗಳ ಸಾಲಿಗೆ ಸೇರಿತು. ಇಂದು ಆ ದೇಶವು ನೂರಾರು ಅಣ್ವಸ್ತ್ರ ಇರುವ ರಾಷ್ಟ್ರವಾಗಿದೆ.

ಶಸ್ತ್ರಾಸ್ತ್ರಗಳಲ್ಲಿ ವಿಶ್ವದಲ್ಲಿ ಏಳನೇ ಅತೀ ಬಲಿಷ್ಠ ರಾಷ್ಟ್ರವಾಗಿದೆ. ಅವರು ಮುಸ್ಲಿಮ್ ರಾಷ್ಟ್ರಗಳೊಂದಿಗೆ ಮಾಡಿದ ಎಲ್ಲಾ ಯುದ್ಧಗಳಲ್ಲಿಯೂ ಜಯ ಕಂಡವರು. ದಶಕಗಳ ಕಾಲ ತಮ್ಮ ವಿರುದ್ಧ ದಿಗ್ಬಂಧನ ವಿಧಿಸಿದ ಮುಸ್ಲಿಮ್ ರಾಷ್ಟ್ರಗಳು ಕ್ರಮೇಣ ಅಧೀನಕ್ಕೆ ಬರುವಂತೆ ಮಾಡಿದವರು.

ಕೊನೆಯದಾಗಿ ಮುಸ್ಲಿಮ್ ರಾಷ್ಟ್ರಗಳು ಶಾಂತಿಯ ಒಪ್ಪಂದಕ್ಕಾಗಿ ಇಸ್ರೇಲ್‌ನ ಬಾಗಿಲ ಬಳಿ ಕ್ಯೂ ನಿಲ್ಲುವಂತೆ ಮಾಡಿದವರು. ಅಮೇರಿಕ ಮಾತ್ರವಲ್ಲ, ಇಂದು ಅನೇಕ ಮುಸ್ಲಿಮ್ ರಾಷ್ಟ್ರಗಳಲ್ಲಿ ಯಾರು ಅಧಿಕಾರದಲ್ಲಿರಬೇಕೆಂದೂ ಯಾರು ಸೇನಾಧಿಕಾರಿಯಾಗಿರಬೇಕೆಂದೂ ತೀರ್ಮಾನಿಸುವವರೂ ಅವರೇ. ಅಷ್ಟೇ ಏಕೆ? ಇಸ್ಲಾಮೀ ವಿದ್ವಾಂಸರನ್ನು, ಮುಸ್ಲಿಮ್ ಬುದ್ಧಿಜೀವಿಗಳನ್ನೂ ಹಣ ಕೊಟ್ಟು ಖರೀದಿಸಿದವರು! ಅವರ ಈ ಸಾಮರ್ಥ್ಯ ಮತ್ತು ಗಳಿಕೆಯನ್ನು ಕುತಂತ್ರ, ನಿಗೂಢ, ತಂತ್ರ ಎಂಬ ಮಾತಿನಲ್ಲಿ ಟೀಕಿಸಿ ವಿವರಿಸಲಾಗದು. ವಾಸ್ತವದಲ್ಲಿ ಸ್ಟ್ರಾಟಜಿಯು ಅವರನ್ನು ಯಶಸ್ವಿಗೊಳಿಸಿದೆ. ಅದೇ ವೇಳೆ ಮುಸ್ಲಿಮರಲ್ಲಿ ಅಂತಹಾ ಸ್ಟ್ರಾಟಜಿಯ ಕೊರತೆ ಸೋಲಿಗೆ ಕಾರಣವಾಯಿತು.

ವಿಜಯಿಯಾಗಲು ನಾವು ಮಾಡುವ ವ್ಯವಸ್ಥಿತವಾದ ಯೋಜನೆಗೆ ಸ್ಟ್ರಾಟಜಿ ಎನ್ನುತ್ತಾರೆ. ಅತ್ಯಂತ ಹೆಚ್ಚಾಗಿ ಈ ವಿಷಯದಲ್ಲಿ ತರಬೇತಿ ಪಡೆದವರು ಮುಸ್ಲಿಮರಾಗಿದ್ದಾರೆ. ಕುರ್‌ಆನ್ ಬಹಳ ಹಿಂದೆಯೇ ಈ ಮಾತನ್ನು ಹೇಳಿದೆ.
“ನೀವು ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಶಕ್ತಿಯನ್ನು ಹಾಗೂ ಸಾಕಿ ಸಿದ್ಧಗೊಳಿಸಿದ ಕುದುರೆಗಳನ್ನು ಅವರೊಡನೆ ಹೋರಾಟ ನಡೆಸಲಿಕ್ಕಾಗಿ ಅಣಿಗೊಳಿಸಿಕೊಳ್ಳಿರಿ. ಇದರ ಮೂಲಕ ಅಲ್ಲಾಹನ ಶತ್ರು, ನಿಮ್ಮ ಶತ್ರು ಮತ್ತು ನಿಮಗೆ ಅರಿವಿಲ್ಲದ ಹಾಗೂ ಅಲ್ಲಾಹನಿಗೆ ಅರಿವಿರುವ ಇತರ ಶತ್ರುಗಳನ್ನು ಭೀತಿಗೊಳಿಸಲಿಕ್ಕಾಗಿ. ಅಲ್ಲಾಹನ ಮಾರ್ಗದಲ್ಲಿ ನೀವು ಏನೆಲ್ಲಾ ಖರ್ಚು ಮಾಡುವಿರೋ ಅದರ ಸರ್ವ ಸಂಪೂರ್ಣ ಪ್ರತಿಫಲವನ್ನು ನಿಮಗೆ ಮರಳಿಸಲಾಗುವುದು ಮತ್ತು ನಿಮ್ಮೊಂದಿಗೆ ಎಷ್ಟು ಮಾತ್ರಕ್ಕೂ ಅನ್ಯಾಯ ಮಾಡಲಾಗದು.”
(ಅಲ್ ಅನ್‌ಫಾಲ್: 60)

ಶಕ್ತಿ ಆರ್ಜಿಸಿಕೊಳ್ಳಿರಿ ಎಂದರೆ ಕೇವಲ ಶಸ್ತ್ರಾಸ್ತ್ರ ಸಂಗ್ರಹಿಸುವುದಲ್ಲ. ವಿವೇಕ ಚಿಂತನೆಯಿಂದ ಕೂಡಿದ ಪೂರ್ವ ಸಿದ್ಧತೆ ಎಂಬುದು ಈ ವಚನದ ಪರಿಧಿಗೆ ಒಳಪಡುತ್ತದೆ ಎಂದು ಮುಫಸ್ಸಿರ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.
[ಸಶೇಷ]