ಅಮಿತ್ ಶಾರನ್ನು ಭೇಟಿಯಾದ ಮುಸ್ಲಿಂ ಸಂಘಟನೆಗಳ ನಿಯೋಗ: NRC ಬಗ್ಗೆ ಭಯ ಬೇಡ ಎಂದ ಷಾ

0
956

ಸನ್ಮಾರ್ಗ ವಾರ್ತೆ-

ದೆಹಲಿ; ಸೆ. 24- ತಮ್ಮನ್ನು ಭೇಟಿಯಾದ ನಿಯೋಗದೊಂದಿಗೆ ಮಾತಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು NRC ಯ ವಿಷಯದಲ್ಲಿ ಅನಗತ್ಯ ಭಯ ಬೇಡ. ಧರ್ಮದ ಕಾರಣಕ್ಕಾಗಿ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಜಮಿಯತೆ ಉಲೆಮಾ-ಎ-ಹಿಂದ್ ಮತ್ತು ಜಮಿಯತೆ ಅಹ್ಲೆ ಹದೀಸ್ ಇವುಗಳ ಜಂಟಿ ನಿಯೋಗವು ಷಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು. ಎಲ್ಲಾ ಮುಸ್ಲಿಂ ಸಂಘಟನೆಗಳೊಂದಿಗೆ ಮುಕ್ತ ಹೃದಯದಿಂದ ಮಾತನಾಡಲು ಸರ್ಕಾರ ಸಿದ್ಧವಾಗಿದೆ ಎಂದು ಗೃಹ ಸಚಿವರು ಹೇಳಿದರು.

ಜಮಿಯತೆ ಉಲೆಮಾ-ಎ-ಹಿಂದ್ ಪ್ರಧಾನ ಕಾರ್ಯದರ್ಶಿ ಮೆಹಮೂದ್ ಮದನಿ ನಮಗೆ ಹಲವಾರು ವಿಷಯಗಳಲ್ಲಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯವಿದೆ. ಆದರೆ ರಾಷ್ಟ್ರೀಯ ಹಿತಾಸಕ್ತಿಯಗಳಲ್ಲಿ ನಾವು ಸರಕಾರದ ಜೊತೆ ಇದ್ದೇವೆ ಎಂದು ಜಮಿಯತೆ ಉಲೆಮಾ-ಎ-ಹಿಂದ್ ಪ್ರಧಾನ ಕಾರ್ಯದರ್ಶಿ ಮೆಹಮೂದ್ ಮದನಿ ಹೇಳಿದರು.

‘ಕಾಶ್ಮೀರಿ ಸಂಸ್ಕೃತಿಗೆ ಯಾವುದೇ ಬೆದರಿಕೆ ಇಲ್ಲ’

ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಪಡಿಸುವುದರಿಂದ ಕಾಶ್ಮೀರಿ ಸಂಸ್ಕೃತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಷಾ ನಿಯೋಗಕ್ಕೆ ಭರವಸೆ ನೀಡಿದರು ಎಂದು ಹೇಳಿಕೆ ತಿಳಿಸಿದೆ.

“ಯಾರೂ ಎನ್‌ಆರ್‌ಸಿ ಬಗ್ಗೆ ಭಯಪಡಬಾರದು. ಅಸ್ಸಾಂಗೆ ಸಂಬಂಧಿಸಿದಂತೆ, ಅಂತಿಮ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಜನರಿಗೆ ನಾವು ಉಚಿತ ಕಾನೂನು ನೆರವು ನೀಡುತ್ತೇವೆ ಎಂದು ಹೇಳಿದ್ದೇವೆ” ಎಂದು ಷಾ ತಿಳಿಸಿರುವುದಾಗಿ ಹೇಳಿಕೆ ತಿಳಿಸಿದೆ.