ಶಿಕ್ಷಣ ಮೊಟಕುಗೊಳಿಸಿ ಅಪ್ರಾಪ್ತ ಪುತ್ರಿಯನ್ನು ಬಾರ್‌ನಲ್ಲಿ ಕೆಲಸಕ್ಕೆ ಸೇರಿಸಿದ ತಾಯಿ: ಪ್ರಕರಣ ದಾಖಲು

0
225

ಸನ್ಮಾರ್ಗ ವಾರ್ತೆ

ಮುಂಬೈ: ಅಪ್ರಾಪ್ತ ವಯಸ್ಸಿನ ಮಗಳ ವಿದ್ಯಾಭ್ಯಾಸ ಮೊಟಕುಗೊಳಿಸಿ ಬಾರ್‌ನಲ್ಲಿ ಕೆಲಸಕ್ಕೆ ಕಳುಹಿಸಿದ ಆರೋಪದಲ್ಲಿ ತಾಯಿ ಮತ್ತು ಆಕೆಯ ಪ್ರಿಯಕರನ ಮೇಲೆ ಮುಂಬೈ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಾಗಿದ್ದು, ಕುಟುಂಬ ಸಾಕಲು ಬಾರ್‌ನಲ್ಲಿ ಕೆಲಸಕ್ಕೆ ಸೇರಬೇಕೆಂದು ತಾಯಿ ಮತ್ತು ಆಕೆಯ ಪ್ರೇಮಿ ಒತ್ತಡ ಹೇರುತ್ತಿರುವುದಾಗಿ 17 ವರ್ಷದ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ತಾಯಿ ಮತ್ತು ಆಕೆಯ ಪ್ರಿಯಕರ ನಿರಂತರ ಕಿರುಕುಳದಿಂದ ಕಳೆದ ತಿಂಗಳು ಹುಡುಗಿ ಮನೆಯಿಂದ ತಪ್ಪಿಸಿಕೊಂಡಿದ್ದಳು. ನಂತರ ಅವಳನ್ನು ಪತ್ತೆ ಹಚ್ಚಿ ಮನೆಯವರಿಗೆ ಒಪ್ಪಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಬಾಂದ್ರಾದ ತನ್ನ ಮನೆಗೆ ಕಳುಹಿಸುವ ವೇಳೆ ತನ್ನ ಮೇಲಾದ ದೌರ್ಜನ್ಯ ಹಾಗೂ ಕಿರುಕುಳದ ಕುರಿತು ಪೊಲೀಸರಲ್ಲಿ ಹೇಳಿಕೊಂಡಿದ್ದಳು.

ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್323 ಪ್ರಕಾರ ಹಾಗೂ ಜುವೈನಲ್ ಜಸ್ಟಿಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.