ಕುವೈಟ್ ವಿತ್ತ ಸಚಿವರ ಭ್ರಷ್ಟಾಚಾರ: ತನಿಖೆಗೆ ನೋಟಿಸು

0
431

ಕುವೈಟ್ ಸಿಟಿ,ಮೇ 30: ವಿತ್ತ ಸಚಿವ ಡಾ. ನಾಯಿಫ್ ಅಲ್ ಹಝ್ರುಫ್ ವಿರುದ್ಧ ಇರುವ ಆರ್ಥಿಕ ಅಕ್ರಮದ ವಿಚಾರಣೆಗೆ ಸಂಸತ್ತು ನೋಟಿಸು ಜಾರಿ ಮಾಡಿದೆ. ಸಚಿವರ ವಿರುದ್ಧ ಸಂಸದರಾದ ರಿಯಾದ್ ಅಲ್ ಅದಸಾನಿ, ಬದರ್ ಅಲ್‍ಮುಲ್ಲ ಆರೋಪ ಹೊರಿಸಿ ನೋಟಿಸು ನೀಡಿದ್ದರು. ಜೂನ್ 11ಕ್ಕೆ ಸೇರವು ಪಾರ್ಲಿಮೆಂಟಿನಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಈಸಾ ಅಲ್ ಕಿಂದಿರಿ ಹೇಳಿದರು. ಪೆನ್ಶನ್ ಫಂಡ್ ಅಜಾಗರೂಕ ನಿರ್ವಹಣೆ, ಬಜೆಟ್ ನಿರ್ಣಯಕ್ಕಿಂತ ಹೆಚ್ಚು ಖರ್ಚು, ವಿದೇಶದ ಹೂಡಿಕೆಯಲ್ಲಿ ಭಾರೀ ನಷ್ಟ ಇವು ಸಚಿವರ ವಿರುದ್ಧ ಪ್ರಧಾನ ಆರೋಪಗಳಾಗಿವೆ. ತಪ್ಪು ತೀರ್ಮಾನದಿಂದಾಗಿ ಕುವೈಟ್ ಇನ್‍ವೆಸ್ಟ್‌ಮೆಂಟ್ ಅಥಾರಿಟಿ, ಸೊವರಿನ್ ವೆಲ್ತ್ ಫಂಡ್‍ಗೆ ಕೊಟ್ಯಂತರ ದಿನಾರ್ ನಷ್ಟ ಆಗಿದೆ ಎಂದು ಸಂಸದರಿಬ್ಬರು ಆರೋಪಿಸಿದ್ದಾರೆ. ಕೆಲವೇ ವರ್ಷದ ಹಿಂದೆ 600 ದಶ ಲಕ್ಷ ಯುರೊ ಫ್ರೆಂಚ್ ನ್ಯೂಕ್ಲಿಯರ್ ಕಂಪೆನಿಗೆ ಹೂಡಲಾಯಿತು. ನಂತರ 83 ಲಕ್ಷ ಯುರೋಗೆ ಮಾರಲಾಯಿತು. ಹೀಗೆ 517 ದಶಲಕ್ಷ ಯುರೋ ನಷ್ಟ ಆಯಿತು. ವಿತ್ತ ಸಚಿವಾಲಯದ ಅಧೀನದ ಟೂರಿಸ್ಟಿಕ್ ಎಂಟರ್‌ಪ್ರೈಸಸ್‍ಗೆ 290 ದಶಲಕ್ಷ ದೀನಾರ್ ನಷ್ಟವೂಆಗಿದೆ.