ಉತ್ತರ ಬಾರತದ ದಲಿತರ ಪ್ರತಿಭಟನೆ ಕರ್ನಾಟಕದ ಚುನಾವಣೆಯ ಮೇಲೆ ಪ್ರಭಾವ ಬೀರುವುದೇ?

0
1117

:ಸಲೀಮ್ ಬೋಳಂಗಡಿ
ದಲಿತರು ನಡೆಸುತ್ತಿರುವ ಪ್ರತಿಭಟನೆಗಳು ರಾಜ್ಯದ ಚುನಾವಣಾ ಪಲಿತಾಂಶದ ಮೇಲೆ ಪ್ರಭಾವ ಬೀರಿದರೂ ಅಚ್ಚರಿಯಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಮಾತ್ರ ಈ ಅವಕಾಶ ಬಳಸುವುದರಲ್ಲಿ ಎಡವಿದೆಯೇ ಎಂದನಿಸುತ್ತಿದೆ. ಸುಪ್ರೀಮ್ ಕೋರ್ಟು ತೀರ್ಪು ಬಿಜೆಪಿ ವಲಯದಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ನಿರಂತರ ನಡೆಯುತ್ತಿರುವ ದೌರ್ಜನ್ಯವು ದಲಿತರನ್ನು ಕೆರಳಿಸಿದೆ. ಕೇಂದ್ರ ಸರಕಾರ ದಲಿತರಿಗಾಗಿ ಏನೂ ಮಾಡಿಲ್ಲ. ನಾನು ಸಂಸದನಾಗಿದ್ದು ಕೂಡಾ ಮೀಸಲಾತಿಯ ಕಾರಣದಿಂದ ಹೊರತು ಬಿಜೆಪಿಯ ಕೃಪೆಯಿಂದಲ್ಲ ಎಂಬರ್ಥದ ಮಾತುಗಳನ್ನು ಪ್ರದಾನಿಗೆ ಬರೆದ ಪತ್ರದಲ್ಲಿ ಬಿಜೆಪಿ ಸಂಸದ ಯಶ್ವಂತ್ ಸಿಂಗ್ ಸೂಚಿಸಿದ್ದೂ ಸುದ್ದಿಯಾಗುತ್ತಿದೆ. ಈ ಹಿಂದೆ ಚೋಟೆ ಲಾಲ್ ಕರ್ವಾರ್ ಎಂಬ ಬಿಜೆಪಿ ಸಂಸದ ಕೂಡಾ ಯೋಗಿ ಅದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ದಲಿತರನ್ನು ತೀವ್ರ ಹೀನಾಯವಾಗಿ ಕಾಣಲಾಗುತ್ತಿದೆ ಎಂದು ಪ್ರದಾನಿಗೆ ಪತ್ರ ಬರೆದು ದೂರಿತ್ತದ್ದನ್ನು ಇಲ್ಲಿ ಸ್ಮರಿಸಬಹುದು.

ದಲಿತ ಸಮುದಾಯದ ಸದಸ್ಯರು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ‘ಭಾರತ್ ಬಾಂದ್’ ಸಮಯದಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆ  (ಅರವಿಂದ ಯಾದವ್ / ಎಚ್ಟಿ ಫೈಲ್ ಫೋಟೋ)

ಹಾಗೆಯೇ ಈ ವಷದಾರಂಭದಲ್ಲಿ ಮಹಾರಾಷ್ಟ್ರದ ಪಣೆಯಲ್ಲಿ ಸಂಘಟಿಸಿದ ದ;ಇತ ಮಹರ್ ಸಮುದಾಯದ ಕಾರ್ಯಕರ್ತರ ಮೇಲೆ ಸವರ್ಣೀಯರು ದಾಳಿ ನಡೆಸಿ ದೌರ್ಜನ್ಯವೆಸಗಿದ್ದು ಕೂಡಾ ಹಸಿರಾಗಿಯೇ ಇದೆ.ಮೇಲ್ಜಾತಿಯವರ ಕಿರುಕುಳದಿಂದ ಬೇಸತ್ತು ಅಂಬೇಡ್ಕರ್ ರವರು ನಿಮ್ಮ ಈ ಕಿರುಕುಳ ನಿಲ್ಲಿಸದಿದ್ದರೆ ಬೌದ್ದ ಮತ ಸ್ವೀಕರಿಸುವುದಾಗಿ 1935ರಲ್ಲಿ ಹೇಳಿದ್ದರು. ಆದರೆ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡು ಬರದಿದ್ದಾಗ 1956ರಲ್ಲಿ ಬೌದ್ದ ಮತ ಸ್ವೀಕರಿಸಿದ್ದರು. ಇದೇ ರೀತಿಯಲ್ಲಿ ಇತ್ತೀಚೆಗೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಯವರು ಬೆದರಿಕೆಯಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಇಲ್ಲಿ ದಲಿತ ದೌರ್ಜನ್ಯ ಮಿತಿ ಮೀರುತ್ತಿದೆ, ಪ್ರತಿಭಟನೆಗಳನ್ನು ಹತ್ತಿಕ್ಕುವ ಶ್ರಮಗಳೂ ನಡೆಯುತ್ತಿವೆ ಜಿಗ್ನೆಶ್ ಮೇವಾನಿಯಂತಹವರನ್ನು ಹದ್ದುಬಸ್ತಿನಲ್ಲಿಡುವ ಶ್ರಮಗಳು ನಡೆಯುತ್ತಿವೆ, ಅವರ ಮೇಲೆ ಹೂಡಿದ ಮೊಕದ್ದಮೆಗಳು ಇದನ್ನು ಸ್ಪಷ್ಟಪಡಿಸುತ್ತಿವೆ, ಜಿಗ್ನೆಶ್ ಮೇವಾನಿಯ ಭಯ ಬಿಜೆಪಿ ವಲಯದಲ್ಲಿ ನಡುಕ ಹುಟ್ಟಿಸಿದೆ. ದಲಿತರ ಮನೆಗೆ ಚುನಾವಣೆಯ ಸಂದರ್ಭ ತೆರಳಿ ಊಟ ಮಾಡಿ ಮಂಕು ಮರುಳು ಮಾಡಿ ಓಟು ಗಿಟ್ಟಿಸುವ ತಂತ್ರವನ್ನು ದಲಿತರು ಅರ್ಥೈಸಬೇಕು.

ಕೇಂದ್ರ ಸಚಿವನಾದ ಬಳಿಕ ಅಡ್ಡಾದಿಡ್ಡಿಯಾಗಿ ನಾಲಗೆ ಹೊರಳಿಸುತ್ತಿರುವ ಅನಂತಕುಮಾರ್ ಹೆಗಡೆ ಕೂಡಾ “ಕಾಲಕಾಲಕ್ಕನುಗುಣವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು” ಎನ್ನುವ ಮುಖಾಂತರ ಅಂಬೇಡ್ಕರ್‍ ಗೆ ಅವಮಾನ ಮಾಡಿದ್ದನ್ನೂ ಇಲ್ಲಿ ಸ್ಮರಿಸಲು ದಲಿತರು ಮುಂದಾದರೆ ಬಿಜೆಪಿಯ ಯಾವ ಆಟವೂ ಕೆಲಸ ಮಾಡದು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಾಂಗ್ರೇಸ್ ಗೆಲುವನ್ನು ಸುಗಮಗೊಳಿಸಬಹುದು. ಆದರೆ ಬಿಜೆಪಿ ಮಾತ್ರ ದಲಿತರನ್ನು ಬಿಜೆಪಿಯ ವಿರುದ್ದ ಎತ್ತಿಕಟ್ಟಲು ವಿರೋಧ ಪಕ್ಷಗಳು ಶ್ರಮಿಸುತ್ತಿವೆ ಎಂಬ ಆರೋಪಿಸುತ್ತಾ ಇರುವುದನ್ನು ನೋಡಿದಾಗ ಅವರ ಒಡಲು ಆಂತರಿಕ ಭಯದಿಂದ ಒದ್ದಾಡುತ್ತಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ದಲಿತರ ಪ್ರತಿಭಟನೆಗಳು ಆರ್‍ಜೆಡಿ, ಬಿಎಸ್ಪಿ, ಎಸ್ಪಿ ಮುಂತಾದ ಪಕ್ಷಗಳ ಮೈತ್ರಿಗೆ ವೇದಿಕೆಯಾಗುವ ಸೂಚನೆಗಳು ಗೋಚರಿಸುತ್ತಿವೆ. ಅಧು ರಾಜಕೀಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ. ಮಂಡಲ್ ವರದಿ ಜಾರಿಯಾದ ಸ೦ದರ್ಭವನ್ನು ಇದು ನೆನಪಿಸುತ್ತಿದೆ. ರಾಜ್ಯದ ಕಾಂಗ್ರೆಸ್ ಈ ಅವಕಾಶ ಬಳಸಿದರೆ ಬಿಜೆಪಿಗೆ ಪೆಟ್ಟು ಬೀಳುವುದು ಶತಸ್ಸಿದ್ದ. ರಾಜ್ಯದಲ್ಲಿ ಶೇಕಡಾ ಹದಿನೆಂಟರಷ್ಟಿರುವ ದಲಿತರ ಮನ ಗೆಲ್ಲಲು ಕಾಂಗ್ರೆಸ್‍ಗೆ ಸುಲಭ ಅವಕಾಶವಿದೆ. ಉತ್ತರ ರಾಜ್ಯಗಳಲ್ಲಿ ಎದ್ದಿರುವ ಪ್ರತಿಭಟನೆಯ ಅಲೆಯ ಗಾಳಿ ಕರ್ನಾಟಕದಲ್ಲಿ ಬೀಸಲಿದೆಯೇ ಎಂಬುದನ್ನು ಕಾದು ನೋಡೋಣ.