ಗೋದ್ರಾ ರೈಲು ದುರಂತದ ಹಿಂದೆ ಬಿಜೆಪಿ ಕೈವಾಡ ! ಪಾಟೀದಾರ್ ನಾಯಕರಿಂದ ಸ್ಪೋಟಕ ಮಾಹಿತಿ ಬಹಿರಂಗ

0
9823

ಅಹ್ಮದಾಬಾದ್: ಗುಜರಾತಿನ ಪಾಟೀದಾರ್ ಸಮಿತಿಯ ನಾಯಕರಾದ ರಾಹುಲ್ ದೇಸಾಯಿ ಹಾಗೂ ಲಾಲ್ ಭಾಯ್ ಪಟೇಲ್‍ರವರು ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇದುವರೆಗೆ ಬಿಜೆಪಿಯ ಪರವಾಗಿದ್ದ ಪಟೀದಾರ್ ಸಮಿತಿಯು ಬಿಜೆಪಿಯ ವಿರುದ್ಧ ತಿರುಗಿ ನಿಂತಿದ್ದು ಅದರ ಕಾರ್ಯ ಚಟುವಟಿಕೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ. “ಬಿಜೆಪಿ ಮೂಲಭೂತವಾಗಿ ಕೋಮುವಾದಿ ರಾಜಕೀಯ ಪಕ್ಷವಾಗಿದ್ದು ಮುಸ್ಲಿಮ್ ವಿರೋಧಿ ಸಿದ್ಧಾಂತಗಳನ್ನು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದೆ. ಒಂದು ವೇಳೆ 2002ರಲ್ಲಿ ಗೋದ್ರಾ ರೈಲು ದುರಂತ ಕೃತ್ಯವನ್ನು ಹೆಣೆಯದಿದ್ದಲ್ಲಿ ಮೋದಿ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿ ಮರು ಆಯ್ಕೆಗೊಳ್ಳುತ್ತಿರಲಿಲ್ಲ ಎಂದು ನಾನು ನಿಖರವಾಗಿ ಹೇಳಬಲ್ಲೆ” ಎಂದು ರಾಹುಲ್ ದೇಸಾಯಿ ತಿಳಿಸಿದ್ದಾರೆ.
2002ರಲ್ಲಿ ಸಂಭವಿಸಿದ ಸಬರ್ಮತಿ ಎಕ್ಸ್‍ಪ್ರೆಸ್‍ನಲ್ಲಿ 59 ಹಿಂದೂ ಕರಸೇವಕರು ಅಗ್ನಿಗಾಹುತಿಯಾದರು. ಈ ಕೃತ್ಯದಲ್ಲಿ 31 ಮಂದಿ ಮುಸ್ಲಿಮರನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಆದರೆ ಗುಜರಾತಿನಲ್ಲಿ ಸಂಭವಿಸಿದ ಗೋದ್ರಾ ರೈಲು ದುರಂತದಲ್ಲಿ 2000 ಜನರು ಮೃತರಾಗಿದ್ದರು. ಆದರೆ ಗೋದ್ರೋತ್ತರ ಗಲಭೆಯಲ್ಲಿ ರೈಲನ್ನು ಬೆಂಕಿಗಾಹುತಿ ಮಾಡಿದುದು ಬಿಜೆಪಿಯ ಪೂರ್ವ ನಿಯೋಜಿತ ರಾಜಕೀಯ ಕೃತ್ಯವಾಗಿತ್ತು. ಇದು ಚುನಾವಣೆಯನ್ನು ಗೆಲ್ಲುವುದರ ಏಕೈಕ ಉದ್ದೇಶವಿರಿಸಿಯೇ ನಡೆಸಿದ ಕೃತ್ಯ ಎಂಬುದು ನನಗೆ ತಿಳಿದು ಬಂತು ಎಂದು ದೇಸಾಯಿ ಹೇಳಿಕೆ ನೀಡಿದ್ದಾರೆ.
“ಮುಸ್ಲಿಮರು ನಮ್ಮ ವಿರುದ್ಧ ತಂತ್ರ ಹೂಡುತ್ತಾರೆ. ಗಲಭೆ ನಡೆಸುತ್ತಾರೆ ಎಂದು ಬಿಜೆಪಿ ಹೇಳುತ್ತದೆ. ಅವರು ಅಂತಹ ಕೃತ್ಯಗಳನ್ನು ಎಸಗದಿದ್ದರೂ ಬಿಜೆಪಿ ಅವರನ್ನು ಅದರತ್ತ ಸೆಳೆಯಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ವರ್ಗ ಗಳಲ್ಲಿ ಮೇಲ್ಜಾತಿಯವರನ್ನು ಸೇರಿಸುವ ಕಾಂಗ್ರೆಸ್ ಬೇಡಿಕೆಯಿಂದ ಸಂತೋಷವಿದೆಯಾದರೆ ಇದರಿಂದ ಮೇಲ್ಜಾತಿ ಯವರಿಗೆ ಗರಿಷ್ಠ ಲಾಭ ಲಭಿಸುವು ದಲ್ಲದೆ ನಮಗೇನೂ ಲಭಿಸದು ಎಂದು ಲಾಲ್ಜಿ ತಿಳಿಸಿದ್ದಾರೆ. ಈ ಮೊದಲು ಪಾಟೀದಾರ್ ರವರೊಂದಿಗೆ ಸಭೆ ನಡೆಸುತ್ತಿದ್ದ ಮೋದಿಯವರು ಇದೀಗ ನಮ್ಮನ್ನು ತಿರುಗಿಯೂ ನೋಡುತ್ತಿಲ್ಲ. ಕಾಂಗ್ರೆಸ್ ಸರಕಾರದಿಂದ ಲಭಿಸುತ್ತಿರುವ ಆಶ್ವಾಸನೆಗಳ ಮೇಲೆ ಪಾಟೀದಾರರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆಂದು ವರದಿಗಳು ತಿಳಿಸುತ್ತಿವೆ. ಅಂತೂ ಮುಂಬರುವ ನವೆಂಬರ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸಲು ಪಾಟೀದಾರರು ಜಾಲ ಹೆಣೆಯುತ್ತಿದ್ದು ಏನು ಸಂಭವಿಸುವುದೆಂಬುದನ್ನು ಕಾದು ನೋಡಬೇಕಿದೆ.