ಮಸೀದಿಯ ಅಗತ್ಯವಿದೆಯೇ?

0
1020

ಸಂಗ್ರಹ: ಎನ್.ಎಂ. ಪಡೀಲ್

ಅಬೂಹುರೈರ(ರ)ರಿಂದ ವರದಿಯಾಗಿದೆ: ಪ್ರವಾದಿ(ಸ)ರು ಹೇಳಿದರು: ನನ್ನ ಆತ್ಮದ ಒಡೆಯ ನಾಣೆ, ತುಂಬಾ ಕಟ್ಟಿಗೆಯನ್ನು ಶೇಖರಿಸಲು  ಆದೇಶಿಸುವುದು, ಅದು ಸಿದ್ಧವಾದ ಬಳಿಕ ನಮಾಝ್‍ಗಾಗಿ ಅದಾನ್ ಕೊಡಲು ಹೇಳುವುದು, ಬಳಿಕ ನನ್ನ ಬದಲಿಗೆ ಒಬ್ಬನನ್ನು ಇಮಾಮ್ ಆಗಿ ನೇಮಿಸುವುದು, ನಂತರ ನಾನು ಮಸೀದಿಗೆ ನಮಾಝ್‍ಗೆ ಬಾರದವರ ಮನೆಗೆ ತೆರಳಿ ಅವರ ಮನೆಗೆ ಬೆಂಕಿ ಹಾಕಿ ಉರಿಸುತ್ತೇನೆ-  ಹೀಗೆ ಮಾಡಿದರೆ ಹೇಗೆ? ಎಂಬ ಆಲೋಚನೆ ನನಗೆ ಬಂತು. (ಬುಖಾರಿ, ಮುಸ್ಲಿಮ್)

ಸಂಘಟಿತ ನಮಾಝ್‍ಗಾಗಿ ಮಸೀದಿಗೆ ಹೋಗಲು ಉದಾಸೀನತೆ ತೋರುವವರಿಗೆ ಕಠಿಣ ಎಚ್ಚರಿಕೆಯನ್ನು ಈ ಪ್ರವಾದಿ ವಚನವು ನೀಡುತ್ತದೆ. ಒಂದು ಇರುವೆಯನ್ನೂ ಉಪ್ರದವಿಸದ, ದಯಾಳುವೂ, ಮೃದು ಮನಸ್ಕರೂ ಆದ ಪ್ರವಾದಿ ವರ್ಯರು(ಸ) ಇಷ್ಟೊಂದು  ರೋಷಾಕುಲರಾಗಲು ಕಾರಣವೇನಿರಬಹುದು? ಅಲ್ಲಾಹನು ತನ್ನ ಸೃಷ್ಟಿಗಳೂ, ದಾಸರೂ, ಅವನಿಗೆ ಶರಣಾಗಿದ್ದೇವೆಂದು ಘೋಷಿಸಿದ  ಮುಸ್ಲಿಮರನ್ನು ತನ್ನ ಭವನಕ್ಕೆ ಕರೆಯು ವಾಗ ಕರೆಯನ್ನು ನಿರ್ಲಕ್ಷಿಸಿ, ಸ್ವಂತ ಮನೆಯಲ್ಲೇ ಉಳಿಯುವುದು ಅವರನ್ನೂ, ಅವರ  ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಡುವಂತಹ ಧಿಕ್ಕಾರವಾಗಿದೆ ಎಂದು ಅರ್ಥ.

ಇತ್ತೀಚೆಗೆ ನ್ಯಾಯಾಲಯವೊಂದು ನೀಡಿದ ತೀರ್ಪನ್ನು ನೋಡಿ ಆಶ್ಚರ್ಯವಾಯಿತು. ಅದು ಮಸೀದಿಯನ್ನು ಕೆಡವಿದ ವಿಷಯಕ್ಕೆ ಸಂಬಂಧಪಟ್ಟ ತೀರ್ಪಾಗಿತ್ತು. ಮುಸ್ಲಿಮರಿಗೆ ನಮಾಝ್ ಮಾಡಲು ಮಸೀದಿಯ ಅಗತ್ಯವಿಲ್ಲ. ಅವರಿಗೆ ಇಡೀ ಭೂಮಿಯೇ ಮಸೀದಿಯಾಗಿದೆ- ಮಸೀದಿಯನ್ನು ಕೆಡವಿದ ಸ್ಥಳದಲ್ಲಿ ಬೇರೆ ಏನನ್ನೋ ನಿರ್ಮಿಸುವು ದನ್ನು ನ್ಯಾಯೀಕರಿಸಲು ಹೀಗೆ ಹೇಳಲಾಗಿದೆ.
ಮಸೀದಿ ಅಥವಾ ನೀರು ಯಾವುದೂ ಇಲ್ಲದ ಒಂದು ಸ್ಥಳಕ್ಕೆ ಓರ್ವ ಮುಸ್ಲಿಮ್ ಪ್ರಯಾಣಿಕ ತಲುಪಿ, ಪ್ರಯಾಣಿಕನಿಗೆ ನೀಡಲಾದ  ರಿಯಾಯಿತಿಯ ಸಮಯವೂ ಕಳೆದು ಹೋಗಿ, ನಮಾಝ್ ಮಾಡಲು ಸಾಧ್ಯವಾಗದಿದ್ದರೆ ಅವನು ಮನಸ್ಸು ಹೇಗೆ ಪರಿತಪಿಸಬಹುದು.

ಇಂತಹ ಸಂದರ್ಭಗಳಲ್ಲಿ ಪ್ರವಾದಿ(ಸ)ರ ಈ ವಚನ ಸಾಂತ್ವನ ಒದಗಿಸುತ್ತದೆ: “ಭೂಮಿಯು ಸಂಪೂರ್ಣವಾಗಿ ಮಸೀದಿಯೂ, ಅದರಲ್ಲಿರುವ  ಒಳ್ಳೆಯ ವಸ್ತುಗಳು ಶುದ್ಧೀಕರಿಸಲು ಯೋಗ್ಯವಾಗಿದೆ.” ನಮಾಝ್ ನಿರ್ವಹಿಸಲು ಮಸೀದಿಯಿಲ್ಲದೆ, ವುಝೂ ಮಾಡಲು ನೀರಿಲ್ಲದೆ ಕಡ್ಡಾಯ  ಕರ್ಮವನ್ನು ನಿರ್ವಹಿಸಲು ಸಾಧ್ಯವಾಗದೆ ಹೋಗುವ ಸಂದರ್ಭದಲ್ಲಿ ಧರ್ಮವು ಕೆಲವು ರಿಯಾಯಿತಿಯನ್ನು ನೀಡುತ್ತದೆ. ಇದರಿಂದ ಅಲ್ಲಾಹನು ನೀಡಿರುವ ರಿಯಾಯಿತಿಯನ್ನು ಉಪಯೋಗಿಸಿ, ತನ್ನ ಕಡ್ಡಾಯ ಕರ್ಮವನ್ನು ನೆರವೇರಿಸಿದ ಸಂತೃಪ್ತಿ ದೊರೆಯುತ್ತದೆ.

ನೀರು  ಸಿಗದಾಗ ಶುದ್ಧ ಮಣ್ಣಿನಿಂದ ವುಝೂ ಮಾಡಲು ಸೂಚಿಸಿರುವ ನಿಯಮವನ್ನು ನೀರಿರುವ ಸಂದರ್ಭಗಳಲ್ಲೂ ರಿಯಾಯಿತಿಯನ್ನು  ಉಪಯೋಗಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವೇ? ಆದ್ದರಿಂದಲೇ ಮಸೀದಿಯ ಕುರಿತು ಹೇಳಿದ ಮಾತುಗಳು ಎಷ್ಟು ಬಾಲಿಶವೆಂದು  ವ್ಯಕ್ತವಾಗುತ್ತದೆ. ಈ ಪ್ರವಾದಿ ವಚನವು ಮಸೀದಿಯ ಅನಿವಾರ್ಯತೆಯನ್ನು ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.

ಮಸೀದಿಯ ಪ್ರಾಧಾನ್ಯತೆಯನ್ನು ಮನವರಿಕೆ ಮಾಡಲು ಇತಿಹಾಸದೆಡೆಗೆ ದೃಷ್ಟಿ ಹಾಯಿಸಬೇಕು. ಮಾನವ ಆರಂಭದೊಂದಿಗೆ ಮಸೀದಿಯನ್ನು  ಆರಂಭಿಸಲಾಗಿದೆಯೆಂದು ಕುರ್‍ಆನ್ ಹೇಳುತ್ತದೆ; “ನಿಶ್ಚಯವಾಗಿಯೂ ಮಾನವರಿಗಾಗಿ ನಿರ್ಮಿಸ ಲ್ಪಟ್ಟ ಪ್ರಥಮ ಆರಾಧನಾಲಯವು ಮಕ್ಕಾದಲ್ಲಿ ರುವುದೇ ಆಗಿರುತ್ತದೆ.” (ಆಲಿ ಇಮ್ರಾನ್ 96)

ನದಿ ತೀರದಲ್ಲಿ ಮಾನವನು ಸಮೂಹವಾಗಿ ಬೆಳೆಯಲಾರಂಭಿಸಿದನು. ಅಲ್ಲಿಗೆ ಪ್ರವಾದಿಗಳನ್ನು ನಿಯೋಗಿಸಿ, ಆರಾಧನಾಲಯಗಳನ್ನು  ನಿರ್ಮಿಸಲಾ ಗಿತ್ತು ಎಂದು ಇತಿಹಾಸದ ಪುಟಗಳಿಂದ ವ್ಯಕ್ತವಾಗುತ್ತದೆ. ಇಬ್ರಾಹೀಮ್(ಅ)ರು ಅಲ್ಲಾಹನ ಆದೇಶದಂತೆ ಅವನು ನಿಶ್ಚಯಿಸಿದ  ಸ್ಥಳದಲ್ಲಿ ಕಅಬಾಲಯವನ್ನು ನಿರ್ಮಿಸಿದರು. ಇದರೊಂದಿಗೆ ವಿಶ್ವದಲ್ಲಿರುವ ಹಾಗೂ ಅಂತ್ಯದಿನದವರೆಗೆ ನಿರ್ಮಿಸ ಲಾಗುವ ಎಲ್ಲಾ ಮಸೀದಿ ಗಳ ಕೇಂದ್ರ ಕಅಬವಾಗಿದೆ. ಭೂಗೋಳದ ಯಾವುದೇ ಮೂಲೆಯಲ್ಲಿಯೂ ಎಷ್ಟೇ ಸಣ್ಣ ಮಸೀದಿ ನಿರ್ಮಿಸಿದರೂ ಅದು ಕಅಬಾಕ್ಕೆ  ಅಭಿಮುಖವಾಗಿರಬೇಕು. ಯಾವ ಭಾಗದಿಂದ ಹೊರಟರೂ ಹಜ್ಜ್‍ಗಾಗಿ ಕಅಬಾದ ಪರಿಸರಕ್ಕೆ ತಲುಪಬೇಕು. ಪ್ರವಾದಿ ಇಬ್ರಾಹೀಮ್(ಅ)ರ  ಕಾಲಾನಂತರ ಫೆಲೆಸ್ತೀನನ್ನು ಕೇಂದ್ರವಾಗಿಸಿ ದಾವೂದ್(ಅ) ಇಸ್ಲಾಮೀ ರಾಷ್ಟ್ರ ವನ್ನು ಸ್ಥಾಪಿಸಿದ ಬಳಿಕ ಬೈತುಲ್ ಮಕ್ದಿಸ್ ಮಧ್ಯ ಅವಧಿಯ  ನಮಾಝ್‍ನ ಕೇಂದ್ರವಾಗಿತ್ತು.

ಮಾನವರು ವಿಶ್ವಾದ್ಯಂತ ಒಂದೇ ಸಮೂಹ ವಾದಾಗ, ಲೋಕಕ್ಕೆ ಅಂತಿಮ ಪ್ರವಾದಿಯಾಗಿ ಮುಹಮ್ಮದ್(ಸ)ರನ್ನು ನಿಯೋಗಿಸಿದ ಬಳಿಕ  ಕಅಬಾವು ಏಕೈಕ ಕೇಂದ್ರವಾಯಿತು. ವಿಶ್ವದಲ್ಲಿರುವ ಎಲ್ಲಾ ಮಸೀದಿಗಳೂ, ಅದರ ಶಾಖೆಗಳು ಎಲ್ಲವೂ `ಬೈತುಲ್ಲಾಹ್’ (ಅಲ್ಲಾಹನ ಭವನ) ಆಗಿದೆ. ಅದು ಮುಸ್ಲಿಮರ ಕೇಂದ್ರ ವಾಗಿದೆ. ಸಮಾಜದ ಎಲ್ಲಾ  ಚಟುವಟಿಕೆಗಳು ಮಸೀದಿ ಕೇಂದ್ರಿತವಾಗಿ ನಡೆದರೆ ಅದು ಖಂಡಿತಾ ಪ್ರಭಾವಪೂರ್ಣವಾಗಿರುತ್ತದೆ. ನಮಾಝ್ ನಿರ್ವಹಿಸಲು ಮಸೀದಿ ಅ ನಿವಾರ್ಯವೂ, ಅತ್ಯಗತ್ಯವೂ ಆಗಿದೆ. ನಮಾಝ್ ನಿರ್ವಹಿಸಲು ಮಸೀದಿಗೆ ಹೋಗದವರಿಗೆ ಪ್ರವಾದಿ(ಸ)ರು ನೀಡಿದ ಸ್ಪಷ್ಟ ಎಚ್ಚರಿಕೆಯನ್ನು  ಈ ಪ್ರವಾದಿ ವಚನ ಎತ್ತಿ ತೋರಿಸುತ್ತದೆ.