ವಾಯುಮಾಲಿನ್ಯ: ಭಾರತದಲ್ಲಿ 1.25ಲಕ್ಷ ಮಕ್ಕಳ ಸಾವು

0
1494

ಹೊಸದಿಲ್ಲಿ: ವಾಯುಮಾಲಿನ್ಯ ಭೀಕರ ಸ್ವರೂಪ ಪಡೆದುಕೊಂಡಿದ್ದು 2016ರಲ್ಲಿ ಭಾರತದಲ್ಲಿ ಐದು ವರ್ಷ ವಯೋಮಾನದ 1.25 ಲಕ್ಷ  ಮಕ್ಕಳು ಅಕಾಲಿಕವಾಗಿ ಸಾವೀಗೀಡಾದರೆಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ತಿಳಿಸಿದೆ.

2016ರಲ್ಲಿ ಐದು ವರ್ಷ ವಯೋಮಾನದ  ಮಕ್ಕಳು ವಾಯು ಮಾಲಿನ್ಯದಿಂದಾಗಿ ಮೃತಪಟ್ಟಿದ್ದಾರೆಂದು ವಿಶ್ವಾರೋಗ್ಯ ಸಂಘಟನೆಯ ಸಮೀಕ್ಷಾ ವರದಿ ತಿಳಿಸಿದ್ದು ಮಕ್ಕಳ ಸಾವಿನ ದರ ದಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಐದನೆ ಸ್ಥಾನವನ್ನು ಹೊಂದಿದೆ.

ವಾಯು ಮಾಲಿನ್ಯದಿಂದ  ಆರೋ ಗ್ಯಕ್ಕೆ ಸಂಚಕಾರ ಎಂಬ ವಿಷಯದಲ್ಲಿ ವಿಶ್ವ ಆರೋಗ್ಯ ಸಂಘಟನೆಯು ಸಂಘಟಿಸಿದ ಪ್ರಥಮ  ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸಮೀಕ್ಷಾ ವರದಿ ಯನ್ನು ಮಂಡಿಸಲಾಗಿದೆ. “ಏರ್ ಪೊಲ್ಯುಶನ್ ಆಂಡ್ ಚೈಲ್ಡ್ ಡೆತ್: ಪ್ರಿಸ್‍ಕ್ರೈಬಿಂಗ್  ಕ್ಲೀನ್ ಏರ್” ಎಂಬ ತಲೆಬರಹದಲ್ಲಿ ವರದಿಯಿದ್ದು ತಳಮಟ್ಟ ಮತ್ತು ಮಧ್ಯಂತರ ಆದಾಯ ಇರುವ ದೇಶಗಳ ಮಕ್ಕಳ ಆರೋಗ್ಯಕ್ಕೆ ವಾಯು  ಮಲಿನೀಕರಣ ಪ್ರತಿಕೂಲವಾಗಿ ಪರಿಣಮಿಸುವುದು ಹೇಗೆ ಎಂಬುದು ಅಧ್ಯಯನದ ವಿಷಯವಾಗಿದೆ.

2016ರಲ್ಲಿ ಕಲ್ಲಿದ್ದಲು ಸಹಿತ ಜೈವಿಕ ಇಂಧನಗಳಿಂದ ವಾಯುಮಾಲಿನ್ಯ ದಿಂದಾಗಿ ಐದು ವರ್ಷಕ್ಕಿಂತ ಕೆಳಗಿನ ವಯೋಮಾನದ 67,000  ಮಕ್ಕಳು ಮೃತಪಟ್ಟಿದ್ದಾರೆ. ವಾಹನದಿಂದಾದ ವಾಯು ಮಾಲಿನ್ಯದಲ್ಲಿ 61,000 ಮಕ್ಕಳು ಮೃತಪಟ್ಟಿದ್ದಾರೆ.

ವಿಷದ ಅಂಶಗಳಿರುವ ವಾಯು ಹತ್ತುಲಕ್ಷಕ್ಕೂ ಹೆಚ್ಚು ಮಕ್ಕಳ ಜೀವನಕ್ಕೆ ಬೆದರಿಕೆಯಾಗಿದೆ ಎಂದು ಡಬ್ಲ್ಯು.ಎಚ್.ಒ. ಡೈರಕ್ಟರ್ ಜನರಲ್  ಡಾ. ತೆಡ್ರೊಸ್ ಅದನೋಂ ಗೆಬ್ರಿಯೆಸಸ್ ಹೇಳಿದರು. ಮಕ್ಕಳ ಬೆಳವಣಿಗೆಗೆ ಶುದ್ಧಗಾಳಿ ಅನಿವಾರ್ಯ ವಾಗಿದೆ ಎಂದು ಗೆಬ್ರಿಯೆಸಸ್ ತಿಳಿ ಸಿದರು.

ಸಮೀಕ್ಷಾ ವರದಿ ಪ್ರಕಾರ ಹೊರಗಿನ ವಾಯು ಮಾಲಿನ್ಯದಿಂದಾಗಿ ಐದು ವರ್ಷಕ್ಕಿಂತ ಕೆಳ ವಯೋಮಾನದ ಮಕ್ಕಳ ಸಾವಿನ ಸಂಖ್ಯೆಯಲ್ಲಿ  ಭಾರತ ಪ್ರಥಮ ಸ್ಥಾನದಲ್ಲಿದೆ. ಮನೆಯೊಳಗಿನ ವಾಯು ಮಲೀನೀಕರಣದಿಂದಾಗಿ ಮೃತಪಡುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ನೈಜೀರಿಯ  ಎರಡನೆ ಸ್ಥಾನದಲ್ಲಿದೆ.