ಉತ್ತರ ಪ್ರದೇಶದ ರಾಜಕೀಯದಲ್ಲಿ ಮೋದಿ ವಿರುದ್ಧ ಇನ್ನೊಂದು ಟ್ವಿಸ್ಟ್: ವಾರಣಾಸಿಯಿಂದ ತಾನು ಯಾಕೆ ಸ್ಪರ್ಧಿಸಬಾರದು ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ

0
1129

ಹೊಸದಿಲ್ಲಿ,ಮಾ.29: ಉತ್ತರ ಪ್ರದೇಶದ ರಾಜಕೀಯದಲ್ಲಿ ಅನಿರೀಕ್ಷಿತ ತಿರುವುಗಳು ಕಾಣಿಸಿಕೊಂಡಿದ್ದು, ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಈ ಸಲವೇ ಚುನಾವಣಾಕಣಕ್ಕಿಳಿಯಲಿದ್ದಾರೆ ಎಂಬ ವದಂತಿಯ ನಡುವೆ ಸ್ವಯಂ ಪ್ರಿಯಾಂಕಾ ಈ ಪ್ರಶ್ನೆಯನ್ನು ಕೇಳಿ ಎಲ್ಲೆಡೆ ಉತ್ಸಾಹ ಮತ್ತು ಕುತೂಹಲವನ್ನು ಕೆರಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾರನ್ನು ರಾಯ್‍ಬರೇಲಿಯಿಂದ ಸ್ಪರ್ಧಿಸುವಂತೆ ಮನವ ಮಾಡಿದಾಗ ಅನಿರೀಕ್ಷಿತವಾಗಿ ಪ್ರಿಯಾಂಕಾ ತಾನು ಮೋದಿಯ ವಿರುದ್ಧವೇ ಸ್ಪರ್ಧಿಸಿದರೆ ಹೇಗೆ ಎಂದು ಬಿಟ್ಟು ಆಶ್ಚರ್ಯ ಸೃಷ್ಟಿಸಿದರು. ಇದೇವೇಳೆ, ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಕ್ಷೇತ್ರ ರಾಯ್‍ಬರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುವೆ ಎಂದು ಕಾರ್ಯಕರ್ತರಿಗೆ ಪ್ರಿಯಾಂಕ ಭರವಸೆ ನೀಡಿದರು.

ಚುನಾವಣಾ ಘೋಷಣೆಯಾಗಿದ್ದರೂ ಸೋನಿಯಾ ಗಾಂಧಿ ರಾಯ್‍ಬರೇಲಿಯ ಪ್ರಚಾರದಲ್ಲಿ ಇನ್ನೂ ಸಕ್ರಿಯವಾಗಿಲ್ಲ.ಪಾರ್ಟಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೇಳಿದರೆ ಖಂಡಿತಾ ಸ್ಪರ್ಧಿಸುವೆ ಎಂದು ಪ್ರಿಯಾಂಕ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಈ ಸಲವೂ ಪ್ರಧಾನಿ ಮೋದಿ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ. ವಾರಣಾಸಿ ಸಹಿತ ಪೂರ್ವ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ ಪ್ರಿಯಾಂಕಾರದ್ದಾಗಿದೆ. ಪ್ರಿಯಾಂಕಾರ ಮೂಲಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ ಪುನಶ್ಚೇತನದ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.