ಮಾಟಗಾತಿ ಎಂದು ಆರೋಪಿಸಿ ವೃದ್ಧೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಬಂಧನ

0
17

ಸನ್ಮಾರ್ಗ ವಾರ್ತೆ

ಜಾರ್ಖಂಡ್: ಮಾಟಗಾತಿ ಎಂದು ಆರೋಪಿಸಿ 60 ವರ್ಷದ ವೃದ್ಧೆಗೆ ಬೆಂಕಿ ಹಚ್ಚಿದ ಘಟನೆ ಜಾರ್ಖಂಡಿನ ಸಿಂಡೆಗ ಜಿಲ್ಲೆಯ ದೀಪಟೊಲಿ ಗ್ರಾಮದಲ್ಲಿ ನಡೆದಿದೆ‌. ಶೇ.40ರಷ್ಟು ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ವರದಿಯಾಗಿದೆ.

ಜರಿಯೊ ದೇವಿಯ ಮೇಲೆ ಐದು ಮಂದಿ ಸೇರಿ ಹಲ್ಲೆ ನಡೆಸಿ ಬೆಂಕಿ ಹಚ್ಚಿದರು. ಇದರಲ್ಲಿ ನೆರೆಮನೆಯ ವ್ಯಕ್ತಿ ಫ್ಲೋರೆನ್ಸ್ ಎಂಬಾತ ಭಾಗಿಯಾಗಿದ್ದಾನೆ. ಈತನ ಪತ್ನಿಯ ಮರಣಾನಂತರ ಕರ್ಮದಲ್ಲಿ ಜರಿಯೊ ದೇವಿ ಭಾಗವಹಿಸಿದ್ದರು. ಇದೇವೇಳೆ ಫ್ಲೋರೆನ್ಸ್ ಜಾರಿಯೊ ದೇವಿಯ ಮಾಟದ ಪ್ರಭಾವದಿಂದ ತನ್ನ ಪತ್ನಿ ಮೃತಪಟ್ಟಿರುವುದೆಂದು ಆರೋಪಿಸಿದ್ದಾನೆ. ಫ್ಲಾರೆನ್ಸ್ ಸಹಿತ ಐದು ಮಂದಿ ಜರಿಯೊದೇವಿಗೆ ಹೊಡೆದು ಬೆಂಕಿ ಹಚ್ಚಿದ್ದರೆಂದು ಪೊಲೀಸರು ತಿಳಿಸಿದರು. ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂದು ಮಹಿಳೆಯನ್ನು ರಕ್ಷಿಸಿದರು. ಘಟನೆಯಲ್ಲಿ ಫ್ಲೋರೆನ್ಸ್ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here