ಮದ್ಯದ ಅಮಲಿನಲ್ಲಿ ತಾಯಿಗೆ ಕ್ರೂರವಾಗಿ ಥಳಿಸಿದ ಸೈನಿಕನ ಬಂಧನ

0
20

ಸನ್ಮಾರ್ಗ ವಾರ್ತೆ

ಆಲಪ್ಪುಝ: ಮದ್ಯದ ಅಮಲಿನಲ್ಲಿ ತಾಯಿಗೆ ಕ್ರೂರವಾಗಿ ಹೊಡೆದ ಸುಭೋದ್ ಎಂಬ 37 ವರ್ಷದ ಸೈನಿಕನನ್ನು ಹರಿಪ್ಪಾಡ್ ಜ್ಯುಡಿಶಿಯಲ್ ಒಂದನೇ ಮ್ಯಾಜಿಸ್ಟ್ರೇಟ್ ಕೋರ್ಟು ರಿಮಾಂಡ್‍ಗೆ ವಿಧಿಸಿದೆ. ಬೆಂಗಳೂರಿನಲ್ಲಿ ಟ್ರೇಡ್ಸ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ ಈತನ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಸೇನೆಗೆ ಕಳುಹಿಸಲಾಗಿದೆ.

ಎಪ್ಪತ್ತು ವರ್ಷದ ತಾಯಿ ಶಾರದಾರನ್ನು ಸುಬೋಧ್ ಅತ್ಯಂತ ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯಗಳು ಹೊರಬಂದ ಬಳಿಕ ಕೇರಳದ ಹರಿಪ್ಪಾಡ್ ಪೊಲೀಸರು ಕ್ರಮ ಜರುಗಿಸಿದರು. ರಜೆಯಲ್ಲಿ ಈತ ಊರಿಗೆ ಬಂದಿದ್ದ. ನಿನ್ನೆ ಎಲ್ಲಿಯೋ ಮೂಗಿನವರೆಗೆ ಕುಡಿದಿದ್ದ ಈತ ರಾತ್ರೆ ಮನೆಗೆ ಮರಳಿದ್ದ. ಮದ್ಯದ ಅಮಲಿನಲ್ಲಿ ತಾಯಿಯ ಸರ ಮತ್ತು ಬಳೆಯನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಇದನ್ನು ತಾಯಿ ವಿರೋಧಿಸಿದಾಗ ಹೊಡೆದಿದ್ದಾನೆ. ತಾಯಿಯನ್ನು ನೆಲಕ್ಕೆ ಕೆಡವಿ ತುಳಿಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈತನ ಸಹೋದರ ದೃಶ್ಯಗಳನ್ನು ಚಿತ್ರಿಸಿ ಸಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದನೆನ್ನಲಾಗಿದೆ.

LEAVE A REPLY

Please enter your comment!
Please enter your name here