ಶಾಲಾ ಪ್ರಾರಂಭೋತ್ಸವ: 21 ದಿನಗಳವರೆಗೆ ಶೂನ್ಯ ಕೋವಿಡ್ ಪ್ರಕರಣ ವರದಿಗೆ ಆಗ್ರಹಿಸುತ್ತಿರುವ ಪೋಷಕರು- ಸಮೀಕ್ಷಾ ವರದಿ

0
645

ಸನ್ಮಾರ್ಗ ವಾರ್ತೆ

ನವದೆಹಲಿ: ಕನಿಷ್ಠ 21 ದಿನಗಳವರೆಗೆ ಶೂನ್ಯ ಕೋವಿಡ್ ಪ್ರಕರಣಗಳು ವರದಿಯಾಗುವವರೆಗೆ ಶಾಲೆಗಳನ್ನು ಪುನಃ ತೆರೆಯಲು ಭಾರತೀಯ ಪೋಷಕರಲ್ಲಿ ಹೆಚ್ಚಿನವರು ಬಯಸುವುದಿಲ್ಲ ಎಂದು ಹೊಸ ಸಮೀಕ್ಷೆಯೊಂದು ವರದಿ ಮಾಡಿದೆ.

ಶನಿವಾರ ಪ್ರಕಟವಾದ ಸಮೀಕ್ಷೆಯ ಪ್ರಕಾರ, “ಶೇಕಡಾ 73 ರಷ್ಟು ಜನರು ತಮ್ಮ ರಾಜ್ಯಗಳು, ಜಿಲ್ಲೆಗಳು ಮತ್ತು ದೇಶದಲ್ಲಿಯೇ 21 ದಿನಗಳವರೆಗೆ ಶೂನ್ಯ ಕೋವಿಡ್ ಪ್ರಕರಣಗಳು ವರದಿ ಮಾಡದ ಹೊರತು ಶಾಲೆಗಳು ಪುನಃ ತೆರೆಯಲ್ಪಡುವುದನ್ನು ಬಯಸುವುದಿಲ್ಲ” ಎಂದಿದೆ.

21 ದಿನಗಳವರೆಗೆ ಆಯಾ ರಾಜ್ಯಗಳಲ್ಲಿ ಹೊಸ ಪ್ರಕರಣಗಳಿಲ್ಲದ ನಂತರವೇ ಶಾಲೆಗಳನ್ನು ಪುನಃ ತೆರೆಯಬೇಕು ಎಂದು ಶೇಕಡಾ 16 ರಷ್ಟು ಜನರು ಹೇಳಿದ್ದರೆ, ಶೇಕಡಾ 37 ರಷ್ಟು ಜನರು ತಮ್ಮ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳಿಲ್ಲದ 21 ದಿನಗಳ ನಂತರ ಮತ್ತ 20 ಕಿ.ಮೀ. ಅಂತರದಲ್ಲಿ ಇರಬೇಕೆಂದರೇ, ಶೇಕಡಾ 20 ರಷ್ಟು ಜನರು ದೇಶದಲ್ಲಿ ಮೂರು ವಾರಗಳವರೆಗೆ ಹೊಸ ಪ್ರಕರಣಗಳಿಲ್ಲದಾದಾಗ ಮಾತ್ತ ಶಾಲೆಗಳನ್ನು ತೆರೆಯಬೇಕು ಎಂದು ಬಯಸುತ್ತಾರೆ.

ಲೋಕಲ್ ಸರ್ಕಲ್ಸ್ ನಡೆಸಿದ ಈ ಸಮೀಕ್ಷೆಯು ಆಡಳಿತ, ಸಾರ್ವಜನಿಕ ಮತ್ತು ಗ್ರಾಹಕರ ಹಿತಾಸಕ್ತಿಗಳ ಕುರಿತಾದ ಮತದಾನ ವೇದಿಕೆಯಾಗಿದ್ದು , ದೇಶದ 220 ಜಿಲ್ಲೆಗಳಿಂದ 18,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿದೆ.

ಇದಲ್ಲದೆ, ಕೋವಿಡ್ ಲಸಿಕೆ ಹೊರಬಂದ ನಂತರವೇ ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶೇಕಡಾ 13 ರಷ್ಟು ಜನರು ಹೇಳಿದ್ದಾರೆ. ಅಲ್ಲದೇ, ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಿದಂತೆ ಶಾಲೆಗಳು ಪುನರಾರಂಭಿಸಬೇಕೆಂದು ಶೇಕಡಾ 11 ರಷ್ಟು ಜನರು ಹೇಳಿದ್ದಾರೆ.

ಗೃಹ ಸಚಿವಾಲಯ ಹೊರಡಿಸಿರುವ ‘ಅನ್ಲಾಕ್ 1.0’ ಮಾರ್ಗಸೂಚಿಗಳ ಪ್ರಕಾರ, ಎರಡನೇ ಹಂತ ಅನ್ಲಾಕ್‌ನಲ್ಲಿ , ಎರಡು ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಶಾಲೆಗಳನ್ನು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರ ತೀರ್ಮಾನಿಸಲಾಗುವುದು ಎಂದಿದೆ

ಮಾರ್ಚ್ 25 ರಂದು ಲಾಕ್ ಡೌನ್ ಜಾರಿಗೆ ಬಂದಾಗಿನಿಂದ ದೇಶದ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.