ದುಬೈಯಿಂದ ಊರಿಗೆ ಬರಲು ಸುಪ್ರೀಂಕೋರ್ಟಿನ ಮೊರೆ ಹೋದ ಗರ್ಭಿಣಿ

0
779

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 23: ಲಾಕ್ ಡೌನ್‍ನಿಂದ ಊರಿಗೆ ಬರಲು ಸಾಧ್ಯವಾಗದ ದುಬೈಯಲ್ಲಿ ಸಿಕ್ಕಿಬಿದ್ದಿರುವ ಗರ್ಭಿಣಿ ಮಹಿಳೆ ತನಗೆ ಊರಿಗೆ ಮರಳಲು ಅವಕಾಶ ಮಾಡಿಕೊಡಬೇಕೆಂದು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ. ಆದಿರಾ ಗೀತಾ ಶಶೀಂದ್ರನ್ ಅವರು ದುಬೈಯಲ್ಲಿ ಇಂಜಿನಿಯರ್ ಆಗಿದ್ದು, ಊರಿಗೆ ಬರಲು ಆಗದೆ ಕಷ್ಟಪಡುತ್ತಿದ್ದಾರೆ. ಅವರು ಪತಿಯೊಂದಿಗೆ ದುಬೈಯಲ್ಲಿ ವಾಸಿಸುತ್ತಿದ್ದಾರೆ.

ಜುಲೈಯಲ್ಲಿ ಅವರಿಗೆ ಹೆರಿಗೆ ಆಗಲಿದ್ದು ಅವರ ಪತಿ ಕಟ್ಟಡ ನಿರ್ಮಾಣ ಕಂಪೆನಿಯ ಉದ್ಯೋಗಿಯಾಗಿದ್ದಾರೆ. ಪತಿಗೆ ರಜೆ ಸಿಕ್ಕಿರಲಿಲ್ಲ. ಆದ್ದರಿಂದ ಆದಿರಾರೊಂದಿಗೆ ಊರಿಗೆ ಬರಲು ಸಾಧ್ಯವೂ ಇಲ್ಲ. ಕೊರೊನಾ ಲಾಕ್ ಡೌನ್ ಇದೆ. ವಿಮಾನ ಯಾನವೂ ಇಲ್ಲ. ಈ ಪರಿಸ್ಥಿತಿಯಲ್ಲಿ ಅವರು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ. ಜುಲೈಯಲ್ಲಿ ಹೆರಿಗೆ ಸಮಯ. ಆದ್ದರಿಂದ ಅವರಿಗೆ ಮೇ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಊರಿಗೆ ಬರಬೇಕಾಗಿದೆ. ವೈರಸ್ ವ್ಯಾಪಿಸಿರುವುದರಿಂದ ಹೆಚ್ಚು ಉಪಚಾರದ ಅಗತ್ಯವೂ ಇದೆ. ಆದ್ದರಿಂದ ಊರು ತಲುಪುವುದು ಅನಿವಾರ್ಯವಾಗಿದೆ. ಈಗ ಕೇಂದ್ರ ಸರಕಾರ ಅನಿವಾಸಿಗಳು ಊರಿಗೆ ಬರಲು ಯಾವ ಸೌಕರ್ಯವನ್ನೂ ಒದಗಿಸಿಲ್ಲ. ಮಹಿಳೆ ಮತ್ತು ಹೊಟ್ಟೆಯಲ್ಲಿರುವ ಮಗುವಿನ ಪರಿಸ್ಥಿತಿ ಅಪಾಯದಲ್ಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.