ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ: ರೋಚಕ ಜಯದ ಮೂಲಕ ಸರಣಿ ಗೆದ್ದ ಟೀಮ್ ಇಂಡಿಯಾ

0
563

ಸನ್ಮಾರ್ಗ ಕ್ರೀಡಾಲೋಕ

ಬ್ರಿಸ್ಬೇನ್: ಆಸ್ಟ್ರೇಲಿಯ ವಿರುದ್ಧ ಇಂದು ಮುಕ್ತಾಯವಾದ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಮೂರು ವಿಕೆಟ್ ಗಳ ರೋಚಕ ಜಯ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಭಾರತವು ಬ್ರಿಸ್ಬೇನ್ ನ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾದ 32 ವರ್ಷಗಳ ಅಜೇಯ ಗೆಲುವನ್ನು ಕೊನೆಗೊಳಿಸಿದೆ. ಆ ಮೂಲಕ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.

ಭಾರತವು 328 ರ ಗುರಿಯನ್ನು 97 ಓವರ್ ಗಳಲ್ಲಿ ಬೆನ್ನಟ್ಟಿತು. ಇದು ಗಬ್ಬಾದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಆಗಿದೆ. ಗಬ್ಬಾದಲ್ಲಿ ಈ ಹಿಂದೆ ನಡೆದ ಅತ್ಯಂತ ಯಶಸ್ವಿ ರನ್ ಚೇಸ್ ನವೆಂಬರ್ 1951 ರಲ್ಲಿ ಬಂದಿತ್ತು. ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ವಿರುದ್ಧ 236 ರನ್ ಗಳಿಸಿತ್ತು.

ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ ರಿಶಬ್ ಪಂಥ್ ಹೀರೋ ಎನಿಸಿಕೊಂಡಿದ್ದಾರೆ. ಪಂಥ್ 138 ಎಸೆತಗಳಲ್ಲಿ 89 ರನ್ ಗಳಿಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 369 ರನ್ ಗಳಿಸಿತ್ತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಶಾರ್ದುಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಅಮೋಘ ಜೊತೆಯಾಟದ ನೆರವಿನಿಂದ 336 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸಿನಲ್ಲಿ 33 ರನ್ನುಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ ತಂಡವು ಮುಹಮ್ಮದ್ ಸಿರಾಜ್ ರವರ ಉತ್ತಮ ಬೌಲಿಂಗ್ ನಿಂದಾಗಿ 294 ರನ್ ಗಳಿಗೆ ಅಲ್ ಔಟ್ ಆಗಿತ್ತು. ಭಾರತಕ್ಕೆ ಕೊನೆಯ ದಿನದಾಟದಲ್ಲಿ 324 ರನ್ ಗಳ ಅವಶ್ಯಕತೆ ಇತ್ತು.

ಕೊನೆಯ ಟೆಸ್ಟ್ ಪಂದ್ಯವು ಟಿ20 ಮಾದರಿಯಲ್ಲಿ ಸಾಗಿದ್ದರಿಂದ ರೋಚಕವಾಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ನಡೆಸಿದ ಶುಭ ಮನ್ ಗಿಲ್ 91 ರನ್ ಗಳಿಸಿ ಔಟಾದ್ದರಿಂದ ಶತಕ ವಂಚಿತರಾದರು. ಮೂರನೇ ಟೆಸ್ಟ್ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತ್ತು.

ಆಸ್ಟ್ರೇಲಿಯಾ: 369 & 294

ಭಾರತ: 336 & 329/7