ಭಾರತಕ್ಕೆ ಹೋಗುವುದು ನಿಲ್ಲಿಸಬೇಕು ಎಂದ ಅಮೆರಿಕ: ಲೆವೆಲ್-4 ಪಟ್ಟಿಯಲ್ಲಿ ಭಾರತ!

0
8044

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕೊರೋನ ಹರಡುವ ಹಿನ್ನೆಲೆಯಲ್ಲಿ ಭಾರತಕ್ಕೆ ಹೋಗುವದನ್ನು ನಿಲ್ಲಿಸಬೇಕೆಂದು ತನ್ನ ಪ್ರಜೆಗಳಿಗೆ ಅಮೆರಿಕ ಸೂಚಿಸಿದೆ. ಒಂದು ವೇಳೆ ಪ್ರಯಾಣ ಹೋಗದಿರಲು ಸಾಧ್ಯವಿಲ್ಲವೆಂದಾದರೆ ಪ್ರತಿರೋಧ ವ್ಯಾಕ್ಸಿನ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಮೆರಿಕನ್ ಹೆಲ್ತ್ ಏಜೆನ್ಸಿ ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್ ಸೆಂಟರರ್ಸ್ ಫಾರ್ ಡೀಸಿಸ್ ಕಂಟ್ರೋಲ್ ಆಂಡ್ ಪ್ರಿವೆನ್ಸ್(ಸಿಡಿಸಿ) ಸೂಚನೆ ಇದಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಆರಡಿ ಅಂತರ ಪಾಲಿಸಬೇಕು. ಕೈತೊಳೆಯಬೇಕು. ಜನರ ಗುಂಪಿಗೆ ಹೋಗಿ ಸೇರಬಾರದು ಎಂಬಿತ್ಯಾದಿ ಮಾರ್ಗಸೂಚಿಯನ್ನು ಸಿಡಿಸಿ ಹೊರಡಿಸಿದೆ.

ಭಾರದಲ್ಲಿ ಕೊರೋನ ದೃಢಪಟ್ಟವರ ಸಂಖ್ಯೆ 2.7 ಲಕ್ಷಕ್ಕೇರಿಕೆಯಾಗಿದೆ. ಇದರೊಂದಿಗೆ ಕೊರೋನ ಪ್ರತಿರೋಧದ ಕ್ರಮವನ್ನು ಸರಕಾರ ಬಲಪಡಿಸಿತ್ತು. ದೇಶದಲ್ಲಿ ದಿಲ್ಲಿಯಂತಹ ನಗರಗಳಲ್ಲಿ ಲಾಕ್‍ಡೌನ್, ಕರ್ಫ್ಯೂ ಇತ್ಯಾದಿ ನಿಯಂತ್ರಣಗಳು ಘೋಷಣೆಯಾಗಿವೆ. ಕೊರೋನ ಹರಡುವಿಕೆಯಿಂದಾಗಿ ರೋಗಿಗಳಿಗೆ ಅಗತ್ಯವಾದ ಹಾಸಿಗೆ, ಆಕ್ಸಿಜನ್, ಅಗತ್ಯ ಔಷಧಿಗಳ ಕೊರತೆ ತಲೆದೋರಿದೆ. ಮೇ ಒಂದರಿಂದ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಪಡೆಯಬೇಕೆಂದು ಕೇಂದ್ರ ಸರಕಾರ ಘೋಷಿಸಿದೆ.