ಭಗಿನಿ ಸಮಾಜದ ಮಕ್ಕಳಿಗೆ ಶೋಯೆಬ್ ಮೈಸೂರುರವರಿಂದ ಶಾಲಾ ಸಾಮಗ್ರಿ ವಿತರಣೆ: ಅತಿಥಿಯಾಗಿ ಭಾಗವಹಿಸಿದ ಎಡಿಜಿಪಿ ಭಾಸ್ಕರ್ ರಾವ್

0
423

ಸನ್ಮಾರ್ಗ ವಾರ್ತೆ

ಮಂಗಳೂರು: ಸಮಾಜ ಸೇವಕ ಶೋಯೆಬ್ ಮೊಹಮ್ಮದ್ ಮೈಸೂರು ಇವರ ವತಿಯಿಂದ ಮಂಗಳೂರಿನ ಭಗಿನಿ ಸಮಾಜದ ಮಕ್ಕಳಿಗೆ ಶಾಲಾ ಸಾಮಾಗ್ರಿ ವಿತರಣೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇಂದು ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಎಡಿಜಿಪಿ ಭಾಸ್ಕರ್ ರಾವ್ ಅವರು ಶಾಲಾ ಸಾಮಗ್ರಿಗಳ ಕಿಟ್‌ನ್ನು ಮಕ್ಕಳಿಗೆ ಹಸ್ತಾಂತರಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಭಾಸ್ಕರ್ ರಾವ್ , ಕೊರೋನಾ ಸಂಕಷ್ಟ ಕಾಲದಲ್ಲಿ ಮೈಸೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳಿ ಜನರಿಗೆ ತನ್ನಿಂದಾದ ಸಹಾಯವನ್ನು ಮಾಡುತ್ತಿರುವ ಶೋಯೆಬ್ ಮೊಹಮ್ಮದ್ ಮೈಸೂರು ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಸಮಾಜ ಸೇವಕ, ದಾನಿ ಶೋಯೆಬ್ ಮೊಹಮ್ಮದ್ ಮೈಸೂರು ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳ ಜನರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸಿ ನೆರವು ನೀಡುವ ಕಾರ್ಯ ಮಾಡುತ್ತಿದ್ದೇವೆ. ಇಂದು ಭಗಿನಿ ಸಮಾಜದಲ್ಲಿ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಣೆ, ದೈನಂದಿನ ಬಳಕೆಯ ವಸ್ತು ಹಾಗೂ ಮಧ್ಯಾಹ್ನದ ಊಟದ ಕಿಟ್‌ಗಳನ್ನು ವಿತರಿಸಿದ್ದೇವೆ ಎಂದು ವಿವರ ಒದಗಿಸಿದರು.

ಸದಸ್ಯರಾದ ಮನ್ಸೂರ್ ಮೊಹಮ್ಮದ್ ಮೈಸೂರು, ಉಸ್ಮಾನ್ ಮೈಸೂರು, ಟೀಂ ಟೈಗರ್ಸ್ ಮಂಗಳೂರು ಅಧ್ಯಕ್ಷ ನಿಶಾದ್ ಅಹಮದ್, ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಅಧ್ಯಕ್ಷ ರವೂಫ್ ಬಂದರ್, ಸಲಾಂ ಎಮ್ಮೆಕೆರೆ ಮತ್ತಿತರರು ಉಪಸ್ಥಿತರಿದ್ದರು.