ಬಿಹಾರದ ಮೊದಲ ಮುಸ್ಲಿಮ್ ಮಹಿಳಾ ಡಿಎಸ್ಪಿಯಾಗಿ ರಝಿಯಾ ಸುಲ್ತಾನ

0
1368

ಸನ್ಮಾರ್ಗ ವಾರ್ತೆ

ಪಾಟ್ನಾ: ಬಿಹಾರದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮೊದಲ ಬಾರಿಗೆ ಡಿಎಸ್ಪಿಯಾಗಿ ಅಧಿಕಾರಕ್ಕೆ ಬಂದಿದ್ದಾರೆ. ರಝಿಯಾ ಸುಲ್ತಾನ 64ನೇ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪೂರ್ಣಗೊಳಿಸಿದ್ದು ಡೆಪ್ಯೂಟಿ ಪೊಲೀಸ್ ಸೂಪರಿಡೆಂಟ್ ಆಗಿದ್ದಾರೆ. ಗೋಪಾಲ ಗಂಜ್ ಜಿಲ್ಲೆಯ ಹಾತುವದ 27 ವರ್ಷದ ಮಹಿಳೆ ಇವರು.

ಝಾರ್ಕಂಡಿನ ಬೊಕಾರೊ ಸ್ಟೀಲ್ ಪ್ಲಾಂಟಿನಲ್ಲಿ ಸ್ಟೆನೊಗ್ರಾಫರ್ ಆಗಿದ್ದ ಮುಹಮ್ಮದ್ ಅಸ್ಲಂ ಅನ್ಸಾರಿಯವರ ಏಳು ಮಕ್ಕಳಲ್ಲಿ ಕಿರಿಯವಳಾದ ರಝಿಯಾ ಬೊಕೊರೊದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ್ದರು. ನಂತರ ಜೋಧಪುರದಲ್ಲಿ ಇಲೆಕ್ಟ್ರಿಕ್ ಇಂಜಿನಿಯರಿಂಗ್ ಬಿಟೆಕ್ ಮಾಡಿದರು. 2016ರಲ್ಲಿ ತಂದೆ ಮೃತಪಟ್ಟಿದ್ದರು.

ತನ್ನ ಕನಸು ಈಡೇರಿತೆಂದು ರಝಿಯಾ ಇಂಡಿಯ ಟುಡೆ ಟಿವಿಗೆ ಹೇಳಿದ್ದಾರೆ. ಕೆಲವು ಸಲ ಜನರಿಗೆ ನ್ಯಾಯ ಸಿಗದ ಪರಿಸ್ಥಿತಿ ಇರುತ್ತದೆ. ವಿಶೇಷ ಮಹಿಳೆಯರಿಗೆ ಹೀಗಾಗುತ್ತದೆ. ತಮ್ಮ ಮೇಲೆ ನಡೆಯುವ ಅಪರಾಧ ಕೃತ್ಯಗಳನ್ನು ಮಾನಕ್ಕಂಜಿ ಮಹಿಳೆಯರು ಹೇಳಿಕೊಳ್ಳುವುದಿಲ್ಲ. ಇದರಲ್ಲಿ ಒಂದು ಬದಲಾವಣೆಗೆ ತಾನು ಯತ್ನಿಸುವೆ ಎಂದು ರಝಿಯಾ ಸುಲ್ತಾನ ಹೇಳಿದ್ದಾರೆ.

ಬಾಲಕಿಯರ ಶಿಕ್ಷಣಕ್ಕೆ ಆದ್ಯತೆ ಕೊಡಬೇಕೆಂದು ಹೇಳಿದ ಅವರು ಹಿಜಾಬ್, ಬುರ್ಕಾ ಧರಿಸುವುದು ನಿಯಂತ್ರಣವಲ್ಲವೆಂದು ಹೇಳಿದರು. ಯಾವ ಕೆಲಸವನ್ನು ಮಾಡಲು ನಮ್ಮಿಂದ ಸಾಧ್ಯವಿದೆ ಎಂದಿದ್ದಾರೆ.