✍️ ಶಾಝಿಲ್ ಉಸ್ಮಾನ್
ಸುಲೈಮಾನ್ ಅಲ್ ಉಬೈದ್-ಫೆಲಸ್ತೀನಿಯರ ಪಾಲಿಗೆ ಪೆಲೆ ಆಗಿದ್ದರು. ಗಾಝದ ಬೀಚ್ನಲ್ಲಿ ಮರಳಿನಲ್ಲಿ ಚೆಂಡು ಕುಟ್ಟಿ ಆಡಿ ಬೀಚ್ ಸರ್ವಿಸಸ್ ಕ್ಲಬ್ನಲ್ಲಿ ಆರಂಭಿಸಿ ಗಾಝ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದದರು. ನೂರಕ್ಕೂ ಹೆಚ್ಚು ಗೋಲು ಹೊಡೆದ ಕ್ರೆಡಿಟ್ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸುಲೈಮಾನ್ 2010ರಲ್ಲಿ ಮಧ್ಯ ಪ್ರಾಚ್ಯದಲ್ಲಿ ನಡೆದ ಚಾಂಪಿಯನ್ ಶಿಪ್ನಲ್ಲಿ ಯಮನ್ ವಿರುದ್ಧ ಗಳಿಸಿದ ಸೀಸರ್ ಕಿಕ್ ಗೋಲಿನ ಮೂಲಕ ಪೇಲೆ ಎಂಬ ಹೆಸರನ್ನು ಗಳಿಸಿದ್ದರು. ಸೆಲೆಬ್ರಿಟಿ ಆದರೂ ಊರಿನ ಮಕ್ಕಳಿಗೆ ಕೋಚ್ ಆದರು.
24 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಫೆಲಸ್ತೀನಿನ ಪರ ಆಡಿದ್ದರು. ಹೀಗಿದ್ದರೂ ಏನು ಮಾಡುವುದು? ಹುಟ್ಟಿದ್ದು ಗಾಝದಲ್ಲಿ. ಅಲ್ಲಿ ಇಸ್ರೇಲಿನ ರಣಕಿಂಕರರು ಸಾವನ್ನೇ ಕೊಡುತ್ತಿದ್ದಾರೆ. ಹೀಗೆ ಈಗ ಈ ಸುಲೈಮಾನ್ ಅಲ್ ಉಬೈದ್ ಇನ್ನಿಲ್ಲವಾಗಿದ್ದಾರೆ. ಇಸ್ರೇಲಿನ ಧೂರ್ತ ಕ್ರೌರ್ಯಕ್ಕೆ ಅವರು ಬಲಿಯಾದರು. ಒಂದು ತುತ್ತು ಅನ್ನ ತನ್ನ ಕುಟುಂಬಕ್ಕೆ ಸಿಕ್ಕಿತಾ ಎಂದು ಸಾಲಾಗಿ ನಿಂತಲ್ಲಿಗೆ ಇಸ್ರೇಲ್ ಶೂಟ್ ಮಾಡಿತು. ಅವರ ಪ್ರಾಣ ಪಕ್ಷಿ ಹಾರಿ ಹೋಯಿತು.
ಕಲೆ/ಕ್ರೀಡಾ ಪ್ರೇಮವೆಲ್ಲ ಮನುಷ್ಯತ್ವ ಇರುವವರಿಗೆ. ಇಸ್ರೇಲಿನ ಕ್ರೂರರಿಗೆ ಅದರಲ್ಲೇನಿದೆ? ಹಸಿವಿನ ಬಾಣಲೆಯಲ್ಲಿ ಬೇಯುತ್ತಿರುವ ಗಾಝದ ಮಕ್ಕಳನ್ನು ವಂಶೀಯ ಸ್ಯಾಡಿಸಂನ ಪಾತ್ರೆಯಲ್ಲಿ ಸುಡುತ್ತಿರುವ ಪೈಶಾಚಿಕ ಬೇತಾಳಗಳಿಗೆ ಫುಟ್ ಬಾಲ್ ಆಟ ಏನು? ಅವರಿಗೆ ಯಾರು ಏನಾಗಿದ್ದರೇನು? ಅವರಿಗೆ ಸುಲೈಮಾನ್ ಒಬ್ಬ ಗಾಝದ ವ್ಯಕ್ತಿ. ಹೀಗೆ ಕೊಲ್ಲುವುದಕ್ಕೆ ಇರುವ ವ್ಯಕ್ತಿಯಾದರು ಸುಲೈಮಾನ್. ಫುಟ್ಬಾಲರ್ ಸುಲೈಮಾನ್ ಕಳೆದ ಸೋಮವಾರವರೆಗೆ ಇಸ್ರೇಲ್ ಕೊಲ್ಲಲ್ಪಟ್ಟ 61400 ಫೆಲೆಸ್ತೀನಿಯರಲ್ಲಿ ಹೀಗೆ ಸೇರಿ ಹೋದರು.
ಫೆಲಸ್ತೀನಿನ ಸಹಸ್ರಾರು ಹುತಾತ್ಮರಂತೆ ಸುಲೈಮಾನ್ರಿಗೂ ಅವರ ಜೀವನಕ್ಕೆ ಒಂದು ಕನಸ್ಸಿತ್ತು. ಫುಟ್ಬಾಲ್ ಆಟಕ್ಕೆ ತನ್ನನ್ನು ಸಮರ್ಪಿಸಿ ಕೊಂಡಿದ್ದರು. ಗಾಝದ ಯುದ್ಧ ನೆಲಕ್ಕೆ ಅಲ್ಲಿನ ಆಕಾಶದಿಂದ ಇಸ್ರೇಲ್ ಸುರಿಸುತ್ತಿರುವ ಬಾಂಬು ಬೀಳುತ್ತಿರುವಾಗಲು ಫುಟ್ಬಾಲ್ ನಿಲ್ಲಿಸಲಿಲ್ಲ. ಆಡುತ್ತಿದ್ದರು. ಅವರಿಗೆ ಐವತ್ತು ವರ್ಷದವರೆಗೂ ಫುಟ್ಬಾಲ್ ಆಡಬೇಕೆಂದಿತ್ತು. ತನ್ನ ಕುಟುಂಬ ಮತ್ತು ಮಕ್ಕಳನ್ನು ಹೆಮ್ಮೆಯಿಂದ ಸಾಕಿ ಬೆಳೆಸಬೇಕು ಎಂಬ ಇನ್ನೊಂದು ಕನಸ್ಸಿತ್ತು. ಈಗ ಸಾಯುವಾಗ ಅವರಿಗೆ ನಲ್ವತ್ತೊಂದು ವರ್ಷ ವಯಸ್ಸಾಗಿತ್ತು.
ಮೊದಲೇ ಸೂಚಿಸಿದಂತೆ ಸುಲೈಮಾನ್ ಕುಟುಂಬಕ್ಕೆ ಅನ್ನಕ್ಕಾಗಿ ನಿರಾಶ್ರಿತರ ಶಿಬಿರದ ಹತ್ತಿರ ಇರುವ ಆಹಾರ ವಿತರಣಾ ಕೇಂದ್ರದಲ್ಲಿ ಸಾಲಾಗಿ ನಿಂತಿದ್ದರು. ಅಲ್ಲಿ ಝಿಯೊನಿಸ್ಟ್ ಸೇನಾ ಟ್ಯಾಂಕ್ ಶೆಲ್ ಹಾರಿಸಿ ಅವರನ್ನು ಕೊಂದಿತು. ಅದರೊಂದಿಗೆ ಅನ್ನಕ್ಕೆ ಓಡೋಡಿ ಬರುತ್ತಿದ್ದ ನಿರಾಶ್ರಿತರ ಮೇಲೆ ಮಿಸೈಲ್ ಹಾರಿಸಿ ಕೊಂದ 1500 ಜನರಲ್ಲಿ ಸುಲೈಮಾನ್ ಒಬ್ಬರಾಗಿಬಿಟ್ಟರು. ಇಸ್ರೇಲಿನ ಅಪರಾಧ ಕೃತ್ಯವನ್ನು ಹೇಳಬಾರದಲ್ವಾ. ಯುರೋಪಿನ ಫುಟ್ಬಾಲ್ ಅಸೋಸಿಯೇಷನ್(ಯುವೇಫ) ಉಪಚಾರಕ್ಕೆ ಅಥವಾ ಕಾಟಾಚರಕ್ಕೆ ಎರಡು ಸಾಲುಗಳ ಶೋಕ ಸಂದೇಶವನ್ನು ನೀಡಿತು.
“ಫೆಲಸ್ತೀನಿನ ಪೇಲೆ ಸುಲೈಮಾನ್ ಅಲ್ ಉಬೈದ್ಗೆ ವಿದಾಯದ ಕೋರುತ್ತೇವೆ. ಅಂಧಕಾರ ತುಂಬಿದ ಸಮಯದಲ್ಲಿ ಅಸಂಖ್ಯಾತ ಮಕ್ಕಳಿಗೆ ನಿರೀಕ್ಷೆ ಹುಟ್ಟಿಸಿದ್ದ ಪ್ರತಿಭಾಶಾಲಿ ಸುಲೈಮಾನ್ ಆಗಿದ್ದರು… ಹೀಗೆ ಎಕ್ಸ್ನಲ್ಲಿ ಫುಟ್ಬಾಲ್ ಫೆಡರೇಶನ್ ಪೋಸ್ಟ್ ಹಾಕಿತು.
ಆದರೆ ಸುಲೈಮಾನ್ರನ್ನು ಮತ್ತು ಗಾಝವನ್ನು ಪ್ರೀತಿಸಿದ್ದ ಹಾಗೂ ವಂಶಹತ್ಯೆಗೆ ಮನ ನೊಂದಿದ್ದ ಮನುಷ್ಯರಿಗೆ ಫೆಡರೇಶನ್ನ ವರ್ತನೆ ಸಹಿಸಲಾಗಲಿಲ್ಲ. ಸುಲೈಮಾನ್ ನಿವೃತ್ತರಾದುದಲ್ಲ. ಜೀವ ಹೋಗಿದೆ. ವಯಸ್ಸಾಗಿಯೂ ಸತ್ತದ್ದಲ್ಲ. ಸುಲೈಮಾನ್ರನ್ನು ಕೊಂದದ್ದು ಎಂದು ಜಗತ್ತು ಕೂಗಿ ಹೇಳಿತು. ಫೆಡರೇಶನ್ ಹೀಗೆ ಕೊಂದವರ ಹೆಸರನ್ನು ಕೂಡ ಉಚ್ಚರಿಸದ ಸಂದೇಶಕ್ಕೆ ನೊಂದ ಸಾವಿರಾರು ಮಂದಿಯಲ್ಲಿ ಮುಹಮ್ಮದ್ ಸಲಾಹ್ ಒಬ್ಬರು.
ಆಟದ ಮೈದಾನದಲ್ಲಿ ಗಾಯಗೊಂಡು ಮಲಗಿದಲ್ಲೇ ಆಗಿ ಸುಲೈಮಾನ್ ಮೃತಪಟ್ಟದ್ದೂ ಅಲ್ಲ. ಹಾಗಿದ್ದರೂ ಕೂಡ ಸುಲೈಮಾನ್ರನ್ನು ಕೊಂದ ಕೊಲೆಗಡುಕ ಇಸ್ರೇಲಿನ ಹೆಸರನ್ನು ಫೆಡರೇಶನ್ ಸೂಚಿಸಲಿಲ್ಲ ಎಂಬುದಕ್ಕೆ ಅವರಿಗೆ ಪ್ರತಿಕ್ರಿಯಿಸದಿರಲು ಸಾಧ್ಯವಾಗಲಿಲ್ಲ.. ಅಷ್ಟು ಕೂಡ ಸೋಮಾರಿತನ ಯಾಕೆ ಎಂದು ಎಲ್ಲರೂ ಒಕ್ಕೊರಲಿನಿಂದ ಕೇಳ ತೊಡಗಿದರು. ಫೆಲಸ್ತೀನಿನ ಆ ಆಕ್ರೋಶ, ನೋವು, ಸಂಪೂರ್ಣ ಹೊತ್ತುಕೊಂಡೇ ಲಿರ್ಪೂಲ್ಗೆ ಆಡುತ್ತಿರುವವರು ಈಜಿಪ್ಶಿಯನ್ ಫುಟ್ಬಾಲ್ ತಾರೆ ಈ ಮುಹಮ್ಮದ್ ಸಲಾಹ್. ಆದುದರಿಂದ ಫೆಡರೇಶನ್ ಮಾತ್ರ ಅಲ್ಲ ಅವರಂತೆ ನಿದ್ದೆ ಮಾಡಿದ ರೀತಿ ನಟಿಸುತ್ತಿರುವ ಸಂಪೂರ್ಣ ಲೋಕವನ್ನೇ ಟ್ರೋಲ್ ಮಾಡಿ ಬಿಟ್ಟರು.
“ಅವರು ಎಲ್ಲಿದ್ದಾರೆ? ಹೇಗೆ ಯಾಕೆ ಮೃತಪಟ್ಟರು ಎಂದು ನಮಗೆ ಹೇಳುತ್ತೀರಾ?” ನಿಮಿಷಗಳೊಳಗೆ ದಶಲಕ್ಷಕ್ಕೂ ಹೆಚ್ಚು ಜನರಿಗೆ ತಲುಪಿದ ಆ ಪ್ರಶ್ನೆಯ ಮೂಲಕ ಇಸ್ರೇಲಿನ ಒಂದು ಸಹಜ ಕೊಲೆಯು ಜಗತ್ತಿನ ನಿದ್ದೆಗೆಡಿಸುವ ಪ್ರಶ್ನೆಯಾಗಿ ಬದಲಾಯಿಸಿದರು ಸಲಾಹ್.
ಇದು ಮೊದಲ ಸಲ ಅಲ್ಲ, ಗಾಝದಲ್ಲಿ ಝಿಯೊನಿಸ್ಟ್ ಭಯೋತ್ಪಾದಕರು ಆರಂಭ ದಿನದಿಂದಲೂ ಫೆಲಸ್ತೀನಿಯರಿಗಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. 62,000ಕ್ಕೂ ಹೆಚ್ಚು ಮನುಷ್ಯರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದರೂ ರಕ್ತದಾಹ ತಣಿಯದ ಇಸ್ರೇಲ್ ಗಾಝದ ಮೇಲೆ ದಾಳಿಯನ್ನು ಮುಂದುವರಿಸುತ್ತಿದೆ. ಅದನ್ನು ತಡೆದು ನಿಲ್ಲಿಸಲು ಲೋಕಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಸಲಾಹ್ ಕೇಳುತ್ತಾರೆ.
ಒಂದು ಸಣ್ಣ ಗಾಝದಲ್ಲಿ ಯುದ್ಧದ ನಡುವೆ ಜೀವ ಕೈಯಲ್ಲಿ ಹಿಡಿದಿರುವಾಗ ಅದನ್ನು ಲೆಕ್ಕಮಾಡದೆ ಫುಟ್ಬಾಲಿನಲ್ಲಿ ಸಾಧನೆ ಮೆರೆದವರು ಗಾಝದವರು. ಫುಟ್ ಬಾಲ್ ಮಾತ್ರವಲ್ಲ ವೈದ್ಯಕೀಯ ತಜ್ಞರು, ಗಣನೀಯ ಅಕಾಡಮಿಶ್ಯನ್ಗಳು, ಅಂತಾರಾಷ್ಟ್ರೀಯ ಅಂಗೀಕಾರ ಗಳಿಸಿದ ಕಲಾವಿದರು, ಪತ್ರಕರ್ತರು, ಸಾವು ತಮ್ಮನ್ನು ಕಾಯುತ್ತಿದೆ ಎಂದು ಗೊತ್ತಿದ್ದರೂ ಫುಟ್ಬಾಲ್, ಅಥ್ಲೆಟಿಕ್ಸ್ ಇಷ್ಟವನ್ನು ಮುಂದುವರಿಸುತ್ತಾರೆ ಗಾಝದ ಜನರು.
ಹೀಗೆ ಈ ಜನರು ಒಂದು ಮಾನವ ಸಂಪನ್ಮೂಲವೇ ಆಗಿದ್ದಾರೆ. ಅವರು ಇದುವರೆಗೆ ಗಾಝದಲ್ಲಿ ಕೊಂದು ಹಾಕಿದವರಲ್ಲಿ 103 ಬಾಲ ಆಟಗಾರರು ಸಹಿತ 421 ಮಂದಿ ಫುಟ್ಬಾಲ್ರಗಳು ಆಗಿದ್ದಾರೆ. ದೊಡ್ಡ ಸ್ಟೇಡಿಯಂಗಳು ಸಣ್ಣ ಗ್ರೌಂಡ್ಗಳಲ್ಲಿ 268 ಆಟಗಳಲ್ಲಿ ಇವರು ವಿಜಯಭೇರಿ ಬಾರಿಸಿದ್ದಾರೆ. ಝಿಯೊನಿಸ್ಟ್ ಜನಾಂಗೀಯ ಭಯೋತ್ಪದನೆ ಗಾಝದ ಸಹಸ್ರಾರು ಜನರನ್ನು ಕೊಂದಿದೆ. ಆದರೂ ಇಸ್ರೇಲಿನ ವಿರುದ್ಧ ಬೆರಳೆತ್ತಲು ಧೈರ್ಯ ಇಲ್ಲದ ಜಾಗತಿಕ ನಾಯಕರು ತೋರಿಸುತ್ತಿರುವ ಕಪಟತನಕ್ಕೆ ಮುಹಮ್ಮದ್ ಸಲಾಹ್ ಪ್ರಶ್ನೆ ಎತ್ತಿದರು. ಈ ಪ್ರಶ್ನೆ ಎಲ್ಲರದೂ ಹೌದು.












