ಬಾಬರಿ ಜಮೀನು ಪ್ರಕರಣ: ಎರಡನೆ ಮಧ್ಯಸ್ಥಿಕೆ ಯತ್ನವೂ ವಿಫಲ

0
457

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಬಾಬರಿ ಜಮೀನು ಪ್ರಕರಣದಲ್ಲಿ ಅಂತಿಮ ವಾದ ಸಲ್ಲಿಕೆಗೆ ನಾಲ್ಕು ದಿವಸ ಮಾತ್ರ ಇದ್ದು ಸುಪ್ರೀಂಕೋರ್ಟಿನ ಸಮಿತಿ ನಡೆಸಿದ ಕೊನೆಯ ಮಧ್ಯಸ್ಥಿಕೆ ಯತ್ನವನ್ನೂ ಎರಡು ವಿಭಾಗಗಳು ತಳ್ಳಿಹಾಕಿವೆ. ಈ ತಿಂಗಳು ಹದಿನೆಂಟಕ್ಕೆ ಮುಗಿಯಬೇಕಾಗಿದ್ದ ಅಂತಿಮ ವಾದ ಆಲಿಕೆಯನ್ನು ಒಂದು ದಿವಸ ಮುಂಚಿತವಾಗಿ ಹದಿನೇಳರಂದೇ ಮುಗಿಸಲು ಸುಪ್ರೀಂಕೋರ್ಟು ತೀರ್ಮಾನಿಸಿದೆ. ಮೂವರ ಸದಸ್ಯರ ಸುಪ್ರೀಂಕೋರ್ಟಿನ ಮಧ್ಯಸ್ಥಿಕೆ ಸಮಿತಿ ದಿಲ್ಲಿಯಲ್ಲಿ ಸಭೆ ಕರೆದಿತ್ತು. ಎರಡನೆ ಮಧ್ಯಸ್ಥಿಕೆ ಸಮಿತಿಯನ್ನು ಹಿಂದೂ ಕಡೆಯವರು ವಿರೋಧಿಸಿದ್ದರೆ, ಚರ್ಚೆಗೆ ಆಮಂತ್ರಣವನ್ನು ಸುನ್ನಿ ವಕ್ಫ್ ಬೋರ್ಡ್ ತಳ್ಳಿಹಾಕಿತ್ತು.

ಹಿಂದೂಗಳ ರಾಮಲ್ಲಾ ಪ್ರತಿನಿಧಿಸುವ ವಕೀಲ ಸಿಎಸ್ ವೈದ್ಯನಾಥನ್‍ರು ಮಧ್ಯಸ್ಥಿಕೆ ಯತ್ನವನ್ನು ಸುಪ್ರೀಂಕೋರ್ಟಿನಲ್ಲಿಯೇ ವಿರೋಧಿಸಿದ್ದರು.

ಸುಪ್ರೀಂಕೋರ್ಟು ಮೊದಲ ಮಧ್ಯಸ್ಥಿಕೆ ಸೂಚನೆಯಲ್ಲಿ ಆಸಕ್ತಿ ತೋರಿಸಿದ್ದ ಸುನ್ನಿ ವಕ್ಫ್ ಬೋರ್ಡ್ ಅಂತಹ ಎರಡನೆ ಯತ್ನದಲ್ಲಿ ಆಸಕ್ತಿ ವಹಿಸಲಿಲ್ಲ.

ಹೊಸದಿಲ್ಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರಿನಲ್ಲಿ ಬುಧವಾರ ಕರೆದ ಮಧ್ಯಸ್ಥಿಕೆ ಚರ್ಚೆಗೆ ತಾವು ಬರುವುದಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡು ಸಮಿತಿಗೆ ತಿಳಿಸಿದೆ.

ಸುಪ್ರೀಂಕೋರ್ಟಿನಲ್ಲಿ ಅಂತಿಮ ವಾದ ಕೊನೆಗೊಳಿಸುವ ಕುರಿತು ವ್ಯಸ್ತವಾಗಿದ್ದೇವೆ ಆದ್ದರಿಂದ ಸಮಿತಿಯ ಮುಂದೆ ಹಾಜರಾಗಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ಮಧ್ಯಸ್ಥಿಕೆ ಸಮಿತಿಯಲ್ಲಿ ಜಸ್ಟಿಸ್ ಇಬ್ರಾಹೀಂ ಖಲೀಫುಲ್ಲ, ಶ್ರೀ ಶ್ರೀ ರವಿಶಂಕರ್, ವಕೀಲ ಶ್ರೀರಾಮ ಪಂಜು ಇದ್ದಾರೆ.