ಇಸ್ರೇಲಿಗೆ 5,363 ಕೋಟಿ ರೂ. ಆಯುಧ ಮಾರಾಟ ತಡೆಯಲು ಅಮೆರಿಕನ್ ಕಾಂಗ್ರೆಸ್‍ನಲ್ಲಿ ಬೆರ್ನಿ ಸ್ಯಾಂಡರ್ಸ್ ಯತ್ನ

0
371

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಗಾಝದ ಮೇಲೆ 11 ದಿನಗಳಲ್ಲಿ ಮಾರಕ ಬಾಂಬು ಸುರಿಸಿ ನಾಶನಷ್ಟ ಮಾಡಿದ ಇಸ್ರೇಲ್ ಇದೀಗ ಮತ್ತೆ ಹೊಸ ಆಯುಧಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಜೊ ಬೈಡನ್ ಆಡಳಿತ ಕೂಟದ ವಿರುದ್ಧ ಅಮೆರಿಕ ಪ್ರತಿನಿಧಿ ಸಭೆಯಲ್ಲಿ ಸೆನೆಟರ್ ಬೆರ್ನಿ ಸ್ಯಾಂಡರ್ಸ್ ಗೊತ್ತುವಳಿ ಮಂಡಿಸಿದ್ದಾರೆ.

ಇಸ್ರೇಲಿನೊಂದಿಗಿನ ಒಪ್ಪಂದವನ್ನು ತುರ್ತಾಗಿ ರದ್ದು ಪಡಿಸಬೇಕೆಂದು ಅವರು ಪ್ರಸ್ತಾವ ಮಂಡಿಸಿದರು. ಇಸ್ರೇಲಿಗೆ ಬೆಂಬಲ ನೀಡುವ ಒಪ್ಪಂದ ಕಳೆದ ದಿನ ರಿಪಬ್ಲಿಕ್ ಸೆನಟರ್ ರಿಕ್ ಸ್ಕಾಟ್ ಮಂಡಿಸಿದಕ್ಕೆ ಪ್ರತ್ಯುತ್ತರ ಎಂಬ ನಿಟ್ಟಿನಲ್ಲಿ ಸ್ಯಾಂಡರ್ಸ್ ಪ್ರಸ್ತಾವ ಮಂಡಿಸಿದ್ದು ಆಯುಧ ಒಪ್ಪಂದಕ್ಕೆ ಕಾಂಗ್ರೆಸ್ ಅಂಗೀಕಾರ ನೀಡಬಹುದೆಂದು ಖಚಿತವಿರುವುದರಿಂದ ಒಪ್ಪಂದ ರದ್ದು ಪಡಿಸುವ ಸಾಧ್ಯತೆ ವಿರಳವಾಗಿದೆ.

ಗಾಝದ ಮೇಲಿನ ಹೊಸ ದಾಳಿಯ ಬಗ್ಗೆ ಆಡಳಿತ ಪಾರ್ಟಿ ಡೆಮಕ್ರಾಟರ ನಡುವೆ ತೀವ್ರ ಭಿನ್ನಮತ ಇದೆ. ಪಾರ್ಟಿಯ ಪ್ರಗತಿ ಪರ ವಿಭಾಗ ಮತ್ತು ಸೆಂಟ್ರಿಸ್ಟ್‌ಗಳ ನಡುವೆ ಭಿನ್ನಮತ ಇದೆ. ಈ ಹಿಂದೆ ಅನುಮತಿ ನೀಡಿದ ಒಪ್ಪಂದ ಕಾಂಗ್ರೆಸ್‍ನಲ್ಲಿ ಮರುಪರಿಶೀಲನೆಗೊಳಪಡಿಸಲು ಮೇ ಐದಕ್ಕೆ ಕಾಂಗ್ರೆಸ್‍ಗೆ ಒಪ್ಪಿಸಲಾಗಿದೆ. ಈ ಬಾರಿ ಇದು ಅಡೆತಡೆಯಿಲ್ಲದೆ ಪಾಸಾಗುವುದು ಖಚಿತಗೊಂಡಿದೆ. ಕಾಂಗ್ರೆಸ್‍ನಲ್ಲಿ ಅಲಕ್ಸಾಂಡ್ರಿಯ ಒಕೊಶಿಯ ಕೋಟ್ರ್ಸ್, ಮಾಕ್ ಪೊಕನ್, ರಾಶಿದ ತುಲೈಬ್ ಬೆಂಬಲದಲ್ಲಿ ಸ್ಯಾಂಡರ್ಸ್ ಪ್ರಸ್ತಾವ ಮಂಡಿಸಿದ್ದಾರೆ.