ಇಂಗ್ಲೆಂಡ್: ಕೊರೋನದಿಂದಾಗಿ ಕೋಮಾದಲ್ಲಿದ್ದ ಭಾರತೀಯ ಮೂಲದ ವೈದ್ಯೆಯ ಆರೋಗ್ಯದಲ್ಲಿ ಚೇತರಿಕೆ

0
322

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಇಂಗ್ಲೆಂಡಿನಲ್ಲಿ ಕೊರೋನ ಪೀಡಿತರಾಗಿ ಕೋಮದಲ್ಲಿದ್ದ ಭಾರತೀಯ ಮೂಲದ ವೈದ್ಯೆ ಅದ್ಭುತ ರೀತಿಯಲ್ಲಿ ಚೇತರಿಸಿಕೊಂಡಿದ್ದು ಭಾರತ ಮೂಲದ ನಲ್ವತ್ತು ವರ್ಷ ವಯಸ್ಸಿನ ಡಾ.ಅನೂಷ ಗುಪ್ತರ ಆರೋಗ್ಯದಲ್ಲಿ ಅದ್ಭುತ ರೀತಿಯ ಈ ಚೇತರಿಕೆ ಕಂಡು ಬಂತು. ಎರಡು ತಿಂಗಳಿನಿಂದ ಇವರು ಕೋಮಕ್ಕೆ ತುತ್ತಾಗಿದ್ದರು.

ಎಕ್ಸ್‌ಟ್ರಾ ಕೊರ್ಪರಲ್ ಮೆಬ್ರೈನ್ ಆಕ್ಸಿಏನೇಶನ್ ಮೆಶಿನ್ ಸಹಾಯದಿಂದ ಇವರು ಇದ್ದರು. 35 ದಿವಸದವರೆಗೆ ಇವರು ಯಂತ್ರದ ಸಹಾಯದಲ್ಲಿ ಆಸ್ಪತ್ರೆಯಲ್ಲಿದ್ದರು. ಆರೋಗ್ಯ ಸ್ಥಿತಿ ಅತ್ಯಂತ ಬಿಗಡಾಯಿಸಿದವರಿಗೆ ಇಸಿಎಂಒ ಮೆಶಿನ್ ಲಗತ್ತಿಸಲಾಗುತ್ತದೆ.
ಕಳೆದ ವರ್ಷ ಮಾರ್ಚಿನಲ್ಲಿ ನಲ್ವತ್ತನೇ ಹುಟ್ಟುಹಬ್ಬ ಆಚರಿಸಿದ್ದರು. ಇದಾಗಿ ವಾರದಲ್ಲಿ ಅನೂಷರಿಗೆ ಕೊರೋನ ದೃಢಪಟ್ಟಿತ್ತು. ಹಠಾತ್ ಆಗಿ ಆರೋಗ್ಯ ಸ್ಥಿತಿ ಕೆಟ್ಟಿತು. ಆಕ್ಸಿಜನ್ ಪ್ರಮಾಣ 80ಕ್ಕಿಂತ ಕೆಳಗಿಳಿಯಿತು.

ಒಬ್ಬ ಐಸಿಯು ಕನ್ಸಲ್ಟ್ ನನ್ನ ಬಳಿಗೆ ಬಂದರು. ವೆಂಟಲೇಟರ್ ಹಾಕಿಸಿಕೊಳ್ಳುವಂತೆ ಹೇಳಿದರು. ಆಗ ಪತಿಯನ್ನು ಕರೆದು ಮಗಳನ್ನು ನೋಡಬೇಕೆಂದು ಹೇಳಿದೆ. ಹದಿನೆಂಟು ತಿಂಗಳು ಮಾತ್ರ ವಯಸ್ಸು ಅವಳಿಗಾಗಿತ್ತು. ನಂತರ ನನ್ನನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಅಲ್ಲಿಂದ ಇಸಿಎಂಒಎಗೆ ಎಂದು ಅನೂಷ ಹೇಳಿದರು.

ಮ್ಯಾಂಚೆಸ್ಟರ್‌ನ ಆಸ್ಪತ್ರೆಯಲ್ಲಿ 150 ದಿವಸ ಅನೂಷ ಚಿಕಿತ್ಸೆಯಲ್ಲಿದ್ದರು. ಈಗ ನಿಲ್ಲಲು ನಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದು ಹಂತದಲ್ಲಿ ತನ್ನ ಪತಿ, ಮಗಳು ಜೊತೆಗಿದ್ದರು ಎಂದು ಅನೂಷಾ ಹೇಳಿದ್ದಾರೆ.