ಬ್ರಿಟನ್: 8 ಮಕ್ಕಳನ್ನು ಕೊಲೆ ಮಾಡಿದ ನರ್ಸ್ ಬಂಧನ

0
480

ಸನ್ಮಾರ್ಗ ವಾರ್ತೆ

ಲಂಡನ್, ನ.12: ಒಂದೇ ವರ್ಷದಲ್ಲಿ ಎಂಟು ಮಕ್ಕಳನ್ನು ಕೊಲೆಮಾಡಿದ ಘಟನೆಯಲ್ಲಿ ಬ್ರಿಟನಿನ ಚೆಸ್ಟರ್ ಎಂಬಲ್ಲಿ 30 ವರ್ಷದ ದಾದಿ ಲೂಸಿ ಲೆಟ್‍ಬಿ ಎಂಬಾಕೆಯನ್ನು ಮಂಗಳವಾರ ಬ್ರಿಟನ್ ಪೊಲೀಸರು ಬಂಧಿಸಿದ್ದಾರೆ.

2015 ಜೂನ್‌ನಿಂದ 2016 ಜೂನ್‍ವರೆಗೆ ಒಂದು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಕ್ಕಳು ಕೊಲೆಯಾಗಿದ್ದರು. ಹತ್ತು ಮಕ್ಕಳ ಹತ್ಯೆಯ ಯತ್ನವೂ ನಡೆದಿತ್ತು. ಆಸ್ಪತ್ರೆಯಲ್ಲಿ ನಿರಂತರ ನವಜಾತ ಶಿಶು ವಾರ್ಡಿನಲ್ಲಿ ಹಲವು ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿವರ ಹೊರಬಂದ ನಂತರ ಆಸ್ಪತ್ರೆ ಅಧಿಕಾರಿಗಳ ಮೇಲೆ ಸಂದೇಹ ತಲೆದೋರಿತ್ತು. ನಂತರ ತನಿಖೆ ನಡೆಸಿದಾಗ ನರ್ಸ್ ಲೂಸಿ ಸಿಕ್ಕಿಬಿದ್ದಿದ್ದಾಳೆ.

ಗುರುವಾರ ಲೂಸಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗುತ್ತಿದೆ. 2018-19ರ ಕಾಲಾವಧಿಯಲ್ಲಿ ಲೂಸಿಯನ್ನು ಬಂಧಿಸಲಾಗಿತ್ತು. ಆದರೆ ಸಾಕ್ಷ್ಯವಿಲ್ಲದ್ದರಿಂದ ಖುಲಾಸೆಗೊಂಡಿದ್ದಳು.