ಈಶಾನ್ಯ ರಾಜ್ಯಗಳು ಪ್ರಕ್ಷುಬ್ದ: ಹೆಚ್ಚಿನ ಸೇನೆಯನ್ನು ನಿಯೋಜಿಸಿದ ಕೇಂದ್ರ ಸರಕಾರ

0
481

ಸನ್ಮಾರ್ಗ ವಾರ್ತೆ

ಗುವಾಹಟಿ, ಡಿ.13: ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ಮಸೂದೆಯ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು ಅಸ್ಸಾಮಿನಲ್ಲಿ ಪ್ರತಿಭಟನಾಕಾರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಅಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು ಹಲವು ಕಡೆ ನಿಷೇಧಾಜ್ಞೆ ವಿಧಿಸಲಾಗಿದೆ. ಮೊಬೈಲ್, ಇಂಟರ್‍ನೆಟ್ ನಿಷೇಧ ಹೇರಲಾಗಿದೆ. ಮತ್ತಷ್ಟು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.

ಇವನ್ನೆಲ್ಲ ಗಮನಿಸಿ ಕೇಂದ್ರ ಸರಕಾರ ಅಸ್ಸಾಂಗೆ 20 ತುಕಡಿ ಸೇನೆಯನ್ನು ರವಾನಿಸಿದೆ. ಅರುಣಾಚಲ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಾಜಭವನಕ್ಕೆ ರಾಲಿ ಮಾಡಿದರು. ಅಸ್ಸಾಮ್‍ನ ದಿಬ್ರುಗಡದಲ್ಲಿ ಶುಕ್ರವಾರ ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಒಂದೂವರೆ ವರೆಗೆ ಕಫ್ರ್ಯೂ ಸಡಿಲಿಕೆ ಮಾಡಲಾಗಿತ್ತು. ಮೇಘಾಲಯದಲ್ಲಿ ಮೊಬೈಲ್ ಇಂಟರ್‍ನೆಟ್ ಎಸ್‍ಎಂಎಸ್ ಎರಡು ದಿವಸ ನಿಷೇಧಿಸಲಾಗಿದೆ. ರಾಜಧಾನಿ ಶಿಲ್ಲಾಂಗ್‍ನಲ್ಲಿ ಅನಿರ್ದಿಷ್ಟಾವಧಿ ಕಫ್ರ್ಯೂ ಘೋಷಿಸಲಾಗಿದೆ.