6 ಮಂದಿಯಲ್ಲಿ ಸೋಂಕು ಪತ್ತೆ: 5 ದಿನಗಳಲ್ಲಿ 90 ಲಕ್ಷ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಮುಂದಾದ ಚೀನಾ

0
376

ಸನ್ಮಾರ್ಗ ವಾರ್ತೆ

ಬೀಜಿಂಗ್,ಅ.12: ಚೀನದ ಚಿಂಗ್‌‌ತಾವೊದಲ್ಲಿ ಆರು ಮಂದಿಯಲ್ಲಿ ಕೊರೋನ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಗರದ ಎಲ್ಲರನ್ನೂ ಐದು ದಿನಗಳಲ್ಲಿ ಕೊರೋನ ಪರೀಕ್ಷೆಗೆ ಗುರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಂಗ್‌ತಾವೊದಲ್ಲಿ 94ಲಕ್ಷ ಮಂದಿ ಜನರು ವಾಸಿಸುತ್ತಿದ್ದಾರೆ. ಇವರನ್ನು ಅತ್ಯಂತ ವೇಗವಾಗಿ ರೋಗ ಹರಡದಂತೆ ತಡೆಯುವ ಉದ್ದೇಶದಿಂದ ಪರೀಕ್ಷೆಗೊಳಪಡಿಸಲಾಗುತ್ತಿದೆ.

ಚಿಂಗ್‌ತಾವೊದ ಐದು ಜಿಲ್ಲೆಗಳನ್ನು ಮೂರು ದಿನಗಳಲ್ಲಿ ಮತ್ತು ಸಂಪೂರ್ಣ ನಗರವನ್ನು ಐದು ದಿನಗಳಲ್ಲಿ ಪರೀಕ್ಷಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈರಸ್ ಉದ್ಭವ ಕೇಂದ್ರವೆಂದು ತಿಳಿಯಲಾಗಿದ್ದ ಚೀನದ ಬಹುತೇಕ ರೋಗ ವ್ಯಾಪನದಿಂದ ಮುಕ್ತವಾಗಿದೆ. ಹೊಸ ಪ್ರಕರಣಗಳನ್ನು ಅತ್ಯಂತ ಎಚ್ಚರಿಕೆಯಿಂದ ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ.

ಚೀನದಲ್ಲಿ 85,578 ಮಂದಿಗೆ ವೈರಸ್ ತಗಲಿತ್ತು. ಕಳೆದ ದಿವಸ 21 ಪ್ರಕರಣಗಳು ಇಡೀ ದೇಶದಿಂದ ವರದಿಯಾಗಿತ್ತು. 4634 ಮಂದಿ ಕೊರೋನದಿಂದ ಇಲ್ಲಿ ಮೃತಪಟ್ಟಿದ್ದಾರೆ. ಈಗ ಕೇವಲ 230 ಮಂದಿ ಕೊರೋನಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.