ಚೀನದ ಆಪ್‍ಗಳ ನಿಷೇಧವನ್ನು ಸ್ವಾಗತಿಸಿದ ಕಾಂಗ್ರೆಸ್

0
399

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.30: ಚೀನದ 59 ಆಪ್‍ಗಳನು ನಿಷೇಧಿಸಿದ ಕೇಂದ್ರ ಸರಕಾರದ ಕ್ರಮವನ್ನು ಕಾಂಗ್ರೆಸ್ ಸ್ವಾಗತಿಸಿದೆ. ಇದೇ ವೇಳೇ, ಚೀನಾದ ವಿರುದ್ಧ ಹೆಚ್ಚು ಫಲಪ್ರದವಾದ ಮತ್ತು ಬಲವಾದ ಕ್ರಮಗಳನ್ನು ಜರಗಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್ ಮತ್ತು ಮನೀಷ್ ತಿವಾರಿ ನಿಷೇಧವನ್ನು ಬೆಂಬಲಿಸಿದ್ದಾರೆ.

ಚೈನೀಸ್ ಆ‌ಪ್‍ಗಳನ್ನು ನಿಷೇಧಿಸುವ ತೀರ್ಮಾನವನ್ನು ಬೆಂಬಲಿಸುತ್ತೇವೆ. ಇದು ಚೀನದ ಅತಿಕ್ರಮಣವನ್ನು ಮತ್ತು ಭಾರತದ ಸೈನಿಕರನ್ನು ಆಕ್ರಮಿಸಿದ್ದಕ್ಕೆ ಪ್ರತ್ಯುತ್ತರವಾಗಿದೆ. ಇನ್ನೂ ಹೆಚ್ಚಿನ ಮತ್ತು ಬಲವಾದ ಕ್ರಮಗಳನ್ನು ಚೀನಾದ ವಿರುದ್ಧ ಸರಕಾರ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ಅಹ್ಮದ್ ಪಟೇಲ್ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಚೀನದ ಆಪ್‍ಗಳ ನಿಷೇಧ ಉತ್ತಮ ಆಶಯವಾಗಿದೆ. ಇದೇ ವೇಳೆ, ಪಿಎಂ ಕೇರ್ಸ್ ಫಂಡಿಗೆ ಚೀನಾದ ಕಂಪೆನಿಗಳು ನೀಡಿದ ದೇಣಿಗೆಯ ಕುರಿತು ಸರಕಾರ ಏನು ಹೇಳುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದರು.

ಗಡಿಯ ಘರ್ಷಣೆಯಿಂದಾಗಿ ಕಳೆದ ದಿವಸ ಭಾರತ ಸರಕಾರ ಚೀನದ 59 ಆಪ್‍ಗಳನ್ನು ನಿಷೇಧಿಸಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.