ಕೊರೋನ: ಕತರ್‌ನಲ್ಲಿ ಜುಲೈ 1ರಿಂದ ಹೊಸ ನಿಯಮ; ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ

0
996

ಸನ್ಮಾರ್ಗ ವಾರ್ತೆ

ದೋಹ,ಜೂ.30: ಕೊರೋನ ದಿಂದಾಗಿ ಕತರ್ ಹೇರಿದ ನಿಯಂತ್ರಣಗಳು ಜುಲೈ ಒಂದರಿಂದ ತೆರವುಗೊಳಿಸುತ್ತಿದೆ. ಹೊಸ ನಿಯಂತ್ರಣ ನಿಯಮಗಳಂತೆ ಒಂದೆಡೆ ಐದು ಮಂದಿಗಿಂತ ಹೆಚ್ಚು ಸೇರಿ ನಿಲ್ಲಬಾರದು ಎಂದು ಕತರ್ ಅಪಾಯ ನಿವಾರಣಾ ಅಥಾರಿಟಿ ಆಗ್ರಹಿಸಿದೆ.

ಈ ಹಿಂದೆ ಒಂದು ಕಡೆ ಹತ್ತು ಮಂದಿ ಸೇರಬಹುದಾಗಿತ್ತು. ಅದಕ್ಕೆ ಅನುಮತಿ ನೀಡಲಾಗಿತ್ತು. ಜೂನ್ 15ರಲ್ಲಿ ದೇಶದಲ್ಲಿ ಹೆಚ್ಚಿನ ಸಡಿಲಿಕೆಯನ್ನು ಮಾಡಲಾಯಿತು. ಜನರು ಮುನ್ನೆಚ್ಚರಿಕೆಯನ್ನು ಪಾಲಿಸಿಲ್ಲ.ಆದ್ದರಿಂದ ರೋಗ ಹರಡುವಿಕೆ ಹೆಚ್ಚಿತು. ನಿಯಮಗಳ ಉಲ್ಲಂಘನೆಯಿಂದಾಗಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಅಥಾರಿಟಿ ಹೇಳಿದೆ.

ರೋಗ ಹರಡುವಿಕೆಯು ಹೆಚ್ಚಾಗಿದ್ದು, ನಿಯಂತ್ರಣಗಳನ್ನು ಮತ್ತೆ ಹೆಚ್ಚಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ. ಕತರ್‌ನಲ್ಲಿ ರೋಗ ಹರಡುವುದು ಕಡಿಮೆಯಾಗಿದ್ದರೂ ಮುನ್ನೆಚ್ಚರಿಕೆ ವಹಿಸುವುದು ಕೈಬಿಡುವಂತಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.