ತಲೆ ಅಂಟಿ ಹಿಡಿದರೂ ಈ ಬಾರಿ ಪ್ರತ್ಯೇಕ ಮತದಾನ ಮಾಡಿದ ಅವಳಿ ಸಹೋದರಿಯರು

0
2474

ಪಾಟ್ನ,ಮೇ 20: ಸಬಾ- ಫರಾ ಕೊನೆಗೂ ಎರಡು ಮತ ಹಾಕಿದರು. ಒಂದೇ ದೇಹವೆಂದು ಹೇಳಿ ಒಂದೇ ಗುರುತು ಚೀಟಿ, ಒಂದೇ ಮತವನ್ನು ಈ ಸಲ ಇವರಿಗೆ ಹಾಕಬೇಕಾಗಿ ಬರಲಿಲ್ಲ. ತಲೆಗಳು ಅಂಟಿಕೊಂಡಿರುವ ಪಾಟ್ನದ ಸಯಾಮೀಸ್ ಅವಳಿಗಳಾದ ಈ ಇಪ್ಪತ್ತಮೂರು ವರ್ಷದ ಸಯಮೀಸ್ ಅವಳಿಗಳಾದ ಮತದಾರರಿಗೆ ಪಾಟ್ನಾದಲ್ಲಿ ಎರಡು ವೋಟು ಹಾಕುವ ಹಕ್ಕುಗಳನ್ನು ನೀಡಲಾಯಿತು.

2015ರಲ್ಲಿ ಇವರು ಮೊದಲ ಬಾರಿ ಮತಚಲಾಯಿಸಿದ್ದರು. ಆಗ ಇವರಿಗೆ ಒಂದು ಮತ ಹಾಕಲು ಮಾತ್ರ ಅನುಮತಿಯಿತ್ತು. ಒಂದೇ ಗುರುತು ಚೀಟಿಯಲ್ಲಿ ಇಬ್ಬರ ಫೋಟೊ ವಿವರಗಳನ್ನು ದಾಖಲಿಸಿದ್ದು ಇದಕ್ಕೆ ಕಾರಣವಾಗಿತ್ತು. ಆದರೆ ಈ ಸಲ ಇಬ್ಬರಿಗೂ ಚುನಾವಣಾ ಆಯೋಗ ಎರಡು ಗುರುತು ಚೀಟಿಯನ್ನು ನೀಡಿತ್ತು.

ಅಭಿವೃದ್ಧಿಗಾಗಿ ನಾವು ಮತದಾನ ಮಾಡಿದ್ದೇವೆ. ಎಲ್ಲರೂ ಬಂದು ವೋಟು ಹಾಕಬೇಕೆಂದು ನಾವು ಜನರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಸಬಾಫರಾ ಹೇಳಿದರು. ಪಾಟ್ನ ಸಾಹಿಬ್ ಲೋಕಸಭಾ ಕ್ಷೇತ್ರದ ಸಾನ್‍ಪುರ ಪ್ರದೇಶದ ಬೂತ್‍ನಲ್ಲಿ ಮತದಾನ ಮಾಡಿ ಹೊರಬಂದಾಗ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಾ ಹೇಳಿದ್ದಾರೆ. ಪ್ರಕೃತಿ ಇಬ್ಬರನ್ನು ಈ ರೀತಿಯಲ್ಲಿ ಸೃಷ್ಟಿಸಿದ್ದರೂ ಇಬ್ಬರಿಗೂ ಸ್ವಂತ ವ್ಯಕ್ತಿತ್ವ ಮತ್ತು ಅಭಿರುಚಿ ಇರುವುದರಿಂದ ಇವರನ್ನು ಇಬ್ಬರು ಮತದಾರರಾಗಿ ಪರಿಗಣಿಸಲಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.