24 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು; ದೇಶದಲ್ಲಿ ಒಟ್ಟು 5.29 ಲಕ್ಷ ಕೊರೋನ ಸೋಂಕಿತರು!

0
689

ಸನ್ಮಾರ್ಗ ವಾರ್ತೆ

ನವ ದೆಹಲಿ,ಜೂ.28: ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 5 ಲಕ್ಷ 29 ಸಾವಿರದ 577 ಕ್ಕೆ ಏರಿದೆ. ಆದರೆ, ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಶನಿವಾರ, ದಾಖಲೆಯ 20132 ಹೊಸ ಕರೋನಾ ರೋಗಿಗಳು ಕಂಡು ಬಂದಿದ್ದಾರೆ. ಇದು ಒಂದು ದಿನದಲ್ಲಿ ಕಂಡು ಬಂದ ಅತಿ ಹೆಚ್ಚು ಪ್ರಕರಣಗಳಾಗಿವೆ. ಈ ಮೊದಲು, ಕಳೆದ ಎರಡು ದಿನಗಳಲ್ಲಿ, 18 ಸಾವಿರಕ್ಕೂ ಹೆಚ್ಚು ರೋಗಿಗಳು ಕಂಡು ಬಂದಿದ್ದಾರೆ. ಇದಲ್ಲದೆ, 14,229 ಜನರು ಚೇತರಿಸಿಕೊಂಡಿದ್ದಾರೆ. ಅತಿ ಹೆಚ್ಚು ಸೋಂಕಿಗೆ ಒಳಗಾದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದ್ದು, 80 ಸಾವಿರ ಕೊರೋನ ಪ್ರಕರಣಗಳು ವರದಿಯಾಗಿವೆ. ಈ ಅಂಕಿಅಂಶಗಳು covid19india.orgನ್ನು ಆಧರಿಸಿವೆ.

ದೇಶದಲ್ಲಿ ಈವರೆಗೆ 16,103 ಸಾವುಗಳು ಸಂಭವಿಸಿವೆ. ಅತಿ ಹೆಚ್ಚು ಕೊರೋನ ಸಾವುಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, ರಾಜ್ಯದಲ್ಲಿ 7273ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಆದರೆ, ಜನಸಂಖ್ಯೆಯ ಆಧಾರದಲ್ಲಿ, ಹೆಚ್ಚಿನ ಜೀವಹಾನಿಯು ದೆಹಲಿಯಲ್ಲಿ ಸಂಭವಿಸುತ್ತಿದ್ದು, ರಾಜಧಾನಿಯಲ್ಲಿ ತಲಾ ಒಟ್ಟು 10 ಲಕ್ಷ ಜನಸಂಖ್ಯೆಗೆ 129 ಸಾವುಗಳು ಸಂಭವಿಸುತ್ತಿದ್ದು, ಇದು ದೇಶದಲ್ಲಿ ಸಂಭವಿಸುತ್ತಿರುವ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.

ಶುಕ್ರವಾರದಿಂದ ರಾಜಧಾನಿಯಲ್ಲಿ 20 ಸಾವಿರಕ್ಕೂ ಹೆಚ್ಚು ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈವರೆಗೆ 4 ಲಕ್ಷ 78 ಸಾವಿರದ 336 ಜನರ ಕೊರೋನಾ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಮತ್ತೊಂದೆಡೆ, ದೆಹಲಿಯಲ್ಲಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆ 315ಕ್ಕೆ ಏರಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.