ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಜೂ.27: ಕೇರಳದಲ್ಲಿ ಘೋಷಿಸಲಾಗಿದ್ದ ರವಿವಾರಗಳ ಸಂಪೂರ್ಣ ಲಾಕ್ಡೌನ್ ತೆರವು ಗೊಳಿಸಲಾಗಿದೆ. ಇನ್ನು ಮುಂದೆ ಯಾವ ರವಿವಾರವೂ ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ಬಂದ್ ಇರುವುದಿಲ್ಲ. ಇದೇವೇಳೆ, ಜನರು ಸರಕಾರು ಹೇಳಿದ ಸೂಚನೆಗಳನ್ನು ಎಚ್ಚರಿಕೆ ನಿರ್ದೇಶಗಳನ್ನು ಪಾಲಿಸಬೇಕೆಂದು ಸರಕಾರ ಹೇಳಿದೆ.
ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಹಿಂಪಡೆಯಲಾಗಿತ್ತು. ಈ ದಿವಸಗಳಲ್ಲಿ ನೀಡಿದ ಸಡಿಲಿಕೆಗಳನ್ನು ಪರಿಶೀಲಿಸಿ ಇನ್ನು ರವಿವಾರಗಳಲ್ಲಿ ಬಂದ್ ಮಾಡುವುದು ಬೇಡ ಎಂದು ಸರಕಾರ ತೀರ್ಮಾನಿಸಿದೆ.
ಆದರೆ ಕಂಟೈನ್ಮೆಂಟ್ ಝೋನ್ಗಳಲ್ಲಿ ಮತ್ತು ತೀವ್ರನಿಗಾ ಪ್ರದೇಶಗಳಲ್ಲಿ ಎಲ್ಲ ಮುಂಜಾಗ್ರತೆ ನಿರ್ದೇಶಗಳು ಯಥಾ ರೀತಿ ಮುಂದುವರಿಯಲಿದೆ. ಇಲ್ಲಿನ ನಿಯಂತ್ರಣಗಳು ಯಥಾ ರೀತಿ ಮುಂದುವರಿಯಲಿದೆ. ಶೀಘ್ರದಲ್ಲಿ ಇದಕ್ಕೆ ಸಂಬಂಧಿಸಿದ ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












