ಕೊರೊನಾ : ಇಟಲಿಯಲ್ಲಿ 631 ಮಂದಿ ಸಾವು; ರೋಗಿಗಳ ಸಂಖ್ಯೆ 10,000ಕ್ಕೆ: ಜನರಿಗೆ ದಿಗ್ಬಂಧನ

0
910

ಸನ್ಮಾರ್ಗ ವಾರ್ತೆ

ರೋಮ್, ಮಾ. 11: ಇಟಲಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 631ಕ್ಕೇರಿಕೆಯಾಗಿದೆ. ರೋಗ ಪೀಡಿತರಲ್ಲಿ ಮೃತರ ಸಂಖ್ಯೆ ಶೇ.63ಕ್ಕೆ ತಲುಪಿತೆಂದು ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ತಿಳಿಸಿತು. ರೋಗ ತಗಲುವವರ ಸಂಖ್ಯೆಯಲ್ಲಿ ಶೇ. 10.7 ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು 10,149 ಕೊರೊನಾ ಪೀಡಿತರಿದ್ದಾರೆ. 877 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದವಾರ 733 ಮಂದಿ ಈ ವಿಭಾಗಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 20 ಪ್ರಾಂತಗಳಿಗೂ ರೋಗ ಹಬ್ಬಿದೆ.

ಯುರೋಪಿನಲ್ಲಿಯೇ ಕೊರೊನಾ ಅತ್ಯಧಿಕ ಇಟಲಿಯನ್ನು ಬಾಧಿಸಿದೆ. ಚೀನದ ಬಳಿಕ ಅತಿಹೆಚ್ಚು ಸಾವುಗಳು ಇಟಲಿಯಿಂದ ವರದಿಯಾಗಿದೆ. ದೇಶದ ಪ್ರಧಾನ ನಗರಗಳನ್ನು ಮುಚ್ಚಲಾಗಿದೆ. ಆರು ಕೋಟಿ ಜನರಿಗೆ ಇರಾನ್ ಪ್ರಯಾಣ ನಿಷೇಧ ಹೇರಿದೆ.

ಜನರು ಮನೆಯೊಳಗೆ ಇರಬೇಕೆಂದು ಪ್ರಧಾನಿ ಸೂಚನೆ ನೀಡಿದರು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿಯಿಲ್ಲ. ಮದುವೆ, ಮರಣಾ ನಂತರದ ಕಾರ್ಯಕ್ರಮಕ್ಕೆ ನಿಷೇಧವಿದೆ. ಎಪ್ರಿಲ್ ಮೂರರವರೆಗೆ ನಿಯಂತ್ರಣ ಇರಲಿದೆ. ಬಾರ್ ಗಳು ಮತ್ತು ರೆಸ್ಟೊರೆಂಟ್‍ಗಳಿಗೆ ಬೀಗಹಾಕಬೇಕು ಎಂದು ಸೂಚನೆ ನೀಡಲಾಗಿದೆ. ಸರಕಾರಿ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಹೊರಬರುವ ಅನುಮತಿ ನೀಡಲಾಗಿದೆ.