ಅಮೆರಿಕದಲ್ಲಿ ಎ. 30ರವರೆಗೆ ಕೊರೊನಾ ನಿಯಂತ್ರಣ; 1,39,675 ಮಂದಿ ಸೋಂಕಿತರು

0
706

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಮಾ. 30: ಕೊರೊನ ದಾಂಧಲೆಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಎಪ್ರಿಲ್ ಮೂವತ್ತರವರೆಗೆ ನಿಯಂತ್ರಣವನ್ನು ವಿಸ್ತರಿಸಲಾಗಿದೆ. ರವಿವಾರ ಇದನ್ನು ಪತ್ರಿಕಾಗೋಷ್ಠಿ ಕರೆದು ಡೊನಾಲ್ಡ್ ಟ್ರಂಪ್ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಇದರೊಂದಿಗೆ ಸಂಪರ್ಕ ನಿಷೇಧ ಸಹಿತ ಅಮೆರಿಕ ಸರಕಾರ ಹೇರಿದ ನಿಯಂತ್ರಣಗಳು ಎಪ್ರಿಲ್ 30ರವರೆಗೆ ಈಸ್ಟರ್ ನಂತರವೂ ಮುಂದುವರಿಯುವುದು ಖಚಿತಗೊಂಡಿದೆ. ಮುಂದಿನ ಎರಡು ವಾರಕ್ಕೆ ಕೊರೊನಾ ಸಾವುಗಳು ಅಮೆರಿಕದಲ್ಲಿ ಮುಂದುವರಿಯಬಹುದೆಂದು ಟ್ರಂಪ್ ತಿಳಿಸಿದರು.

ಮುಂಚಿತವಾಗಿ ನಿಯಂತ್ರಣ ವಿಧಿಸದಿದ್ದರೆ ಅಮೆರಿಕದಲ್ಲಿ ಎರಡು ಲಕ್ಷ ಜನರು ಕೊರೊನಕ್ಕೆ ಬಲಿಯಾಗುವರು ಎಂದು ಕೊರೊನ ವೈರಸ್ ಟಾಸ್ಕ್ ಪೋರ್ಸ್ ಮುಖ್ಯಸ್ಥ ಡಾ. ಆಂಟರನಿ ಹೌಸಿ ಟ್ರಂಪ್‍ರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ತದನಂತರ ನಿಯಂತ್ರಣವನ್ನು ವಿಸ್ತರಿಸಲು ಟ್ರಂಪ್ ಮುಂದಾಗಿದ್ದಾರೆ. ಈಸ್ಟರ್ ಮೊದಲು ಕೊರೊನ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ವರದಿಯಿತ್ತು. ಆದರೆ ರವಿವಾರದ ಲೆಕ್ಕ ಪ್ರಕಾರ 2, 436 ಮಂದಿ ಅಮೆರಿಕದಲ್ಲಿ ಕೊರೊನದಿಂದ ಮೃತಪಟ್ಟಿದ್ದಾರೆ. 1,39,675 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.