ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ನಾಯಕಿಯಾಗಿ ಭಾರತೀಯ ಮೂಲದ ಅನ್ವಿ ಭೂತಾನಿ ಆಯ್ಕೆ

0
146

ಸನ್ಮಾರ್ಗ ವಾರ್ತೆ

ಲಂಡನ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟಕ್ಕಾಗಿ (ಸ್ಟೂಡೆಂಟ್ ಯೂನಿಯನ್ ) ನಡೆಸಲಾದ ಉಪಚುನಾವಣೆಯಲ್ಲಿ ಮ್ಯಾಗ್ಡಲೀನ್ ಕಾಲೇಜಿನ ಭಾರತೀಯ ಮೂಲದ ಹ್ಯೂಮನ್ ಸೈನ್ಸ್ ನ ವಿದ್ಯಾರ್ಥಿನಿ ಅನ್ವಿ ಭೂತಾನಿ ವಿಜೇತರಾಗಿದ್ದಾರೆ.

ಅನ್ವಿ ಭೂತಾನಿ ಆಯ್ಕೆ ಯಾದ ವಿಚಾರವನ್ನು ಗುರುವಾರ ರಾತ್ರಿ ಘೋಷಣೆ ಮಾಡಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು, ಗುರುವಾರ ರಾತ್ರಿ ಅನ್ವಿ ಭೂತಾನಿಯವರನ್ನು ವಿಜೇತರೆಂದು ಘೋಷಿಸಲಾಯಿತು.

ವಿದ್ಯಾರ್ಥಿ ನಾಯಕಿಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್ ಅವರು ಕಳೆದ ಫೆಬ್ರವರಿಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರಿಂದ ಈ ಉಪಚುನಾವಣೆ ನಡೆಸಲಾಗಿತ್ತು.  ಅವರು ತಮ್ಮ ಹಿಂದಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ಈ ಹುದ್ದೆಗೆ ಆಯ್ಕೆಯಾದ ಕೂಡಲೇ ಕೆಳಗಿಳಿಯಬೇಕಾಗಿತ್ತು.

ಈ ಉಪಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ 11 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಮ್ಯಾಗ್ಡಲೀನ್ ಕಾಲೇಜಿನ ಭಾರತೀಯ ಮೂಲದ ಅನ್ವಿ ಭೂತಾನಿ ವಿಜೇತರಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಸಫಾ ಸಾಡೋಝಯಿ, ಅಲೀನ ವಸೀಮ್, ದೇವಿಕಾ, ಕೈಸಾ ಅಸಾರೆ, ಓಲುವಾಕೆಮಿ ಅಗುಂಬೈದೆ ಆಯ್ಕೆಯಾಗಿದ್ದಾರೆ.