ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್: ಗೂಗಲ್ ಸಹಿತ ಟೆಕ್ ಕಂಪೆನಿಗಳಿಂದ ವಿವರಣೆ ಕೇಳಿದ ದಿಲ್ಲಿ ಪೊಲೀಸ್

0
356

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ಸ್ವೀಡಿಶ್ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ರ ಟೂಲ್‍ ಕಿಟ್ ಕುರಿತ ವಿವರಗಳನ್ನು ನೀಡಬೇಕೆಂದು ದಿಲ್ಲಿ ಪೊಲೀಸರು ಗೂಗಲ್ ಸಹಿತ ಟೆಕ್ ಕಂಪೆನಿಗಳನ್ನು ಆಗ್ರಹಿಸಿದ್ದಾರೆ.

ಪ್ರತಿಭಟನೆ, ಕಾರ್ಯಕ್ರಮ ತಯಾರಿಸಿದ ಖಾತೆಯ ವಿವರಗಳ ಕೆಲವು ಇಮೇಲ್ ಐಡಿಗಳೂ, ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳನ್ನು ಪೊಲೀಸರು ಕೇಳಿದ್ದಾರೆ. ದಿಲ್ಲಿ ಪೊಲೀಸರ ಸೈಬರ್ ಸೆಲ್ ಯುನಿಟ್‍ನ ಡಿಸಿಪಿಯವರು ಅಕೌಂಟು ರೂಪಿಸಿ ಟೂಲ್‍ಕಿಟ್‍ನಲ್ಲಿ ಇಂತಹ ವಿವರಗಳನ್ನು ಅಪ್‍ಲೋಡ್ ಮಾಡಿದವರನ್ನು ಪತ್ತೆಹಚ್ಚಲು ಸಹಾಯ ಮಾಡಬೇಕೆಂದು ಗೂಗಲ್ ಮತ್ತು ಇತರ ಕಂಪೆನಿಗಳಿಗೆ ಪತ್ರ ಬರೆದಿದ್ದಾರೆ.

ಕಂಪೆನಿಗಳ ಉತ್ತರಕ್ಕಾಗಿ ಕಾಯಲಾಗುತ್ತಿದ್ದು ನಂತರ ತನಿಖೆ ವ್ಯಾಪಕಗೊಳಿಸಲಾಗುವುದು ಎಂದು ರಾಯ್ ಹೇಳಿದರು. ಕಂಪೆನಿಗಳಿಂದ ಸಿಗುವ ವಿವರಗಳ ಆಧಾರದಲ್ಲಿ ಟೂಲ್‍ ಕಿಟ್ ಯಾರು ತಯಾರಿಸಿದ್ದು, ಅದನ್ನು ಯಾರು ಪೋಸ್ಟ್ ಮಾಡಿದ್ದೆಂದು ತಿಳಿಯಲು ಸಾಧ್ಯವೆಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಗ್ರೇಟಾ ಹಂಚಿದ ಟೂಲ್‍ ಕಿಟ್‍ನ ಹೇಳಿಕೆ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ದೇಶದ ವಿರುದ್ಧ ಕಾರ್ಯವೆಸಗಿದೆ ಎಂದು ಪೊಲೀಸರು ಹೇಳಿದ್ದಾರೆ. 18 ವರ್ಷದ ಗ್ರೇಟಾರನ್ನು ಎಫ್‍ಐಆರ್‌ನಲ್ಲಿ ಸೇರಿಸಲಾಗಿದೆಯೇ ಎಂಬ ಪ್ರಶ್ನೆಗೆ ಎಫ್‍ಐಆರ್‌ನಲ್ಲಿ ಯಾರ ಹೆಸರು ಇಲ್ಲ ಟೂಲ್ ಕಿಟ್‍ನ ಸ್ಟ್ರಾಗಳ ಮೇಲೆ ಕೇಸು ಹಾಕಲಾಗಿದೆ ಎಂದು ಪೊಲೀಸರು ಹೇಳಿದರು.

ಟೂಲ್ ಕಿಟ್ಟೆಂದರೆ ಭಾರತದಲ್ಲಿ ನಡೆಯುವ ರೈತ ಹೋರಾಟದ ಕುರಿತು ಅರಿಯಲು ಮತ್ತು ಜನರನ್ನು ಸಂಘಟಿಸಲು ಇರುವ ಮಾರ್ಗಸೂಚಕವಾದ ಗೂಗಲ್ ದಾಖಲೆಯಾಗಿದೆ. ಅದರಲ್ಲಿ ರೈತರ ಕಾನೂನಿಗೆ ಸಂಬಂಧಿಸಿದ ಮತ್ತು ಅದರ ವಿರುದ್ಧರೈತರು ಎತ್ತುವ ವಿರೋಧಗಳ ಪರಾಮರ್ಶೆಗಳಿವೆ.

ರೈತ ಹೋರಾಟದಲ್ಲಿ ಭಾಗವಹಿಸುವ ಪ್ರಮುಖ ಸಂಘಟನೆಗಳು, ಪ್ರತಿಭಟನೆಯ ವಿವರಗಳನ್ನು ಹಂಚುವ ಸಾಮಾಜಿಕ ಮಾಧ್ಯಮ ಖಾತೆಗಳು, ಪ್ರತಿಭಟನೆ ಪ್ರಮುಖ ಹ್ಯಾಶ್‍ಟ್ಯಾಗ್‍ಗಳ ಬಗ್ಗೆ ಕಿಟ್‍ನಲ್ಲಿ ವಿವರ ಇರುತ್ತದೆ. ವಿಶ್ವಸಂಸ್ಥೆಗೆ ಸೇರಿದ ಜಗತ್ತಿನ ವಿವಿಧ ಒಕ್ಕೂಟಗಳಿಗೆ ಪ್ರತಿಭಟನೆ ಕುರಿತ ಮನವಿಗಳು, ದೂರುಗಳು ನೀಡಬಹುದಾದ ವಿಧಾನಗಳ ಕುರಿತು ಟೂಲ್ ಕಿಟ್‍ನಲ್ಲಿ ವಿವರಿಸಲಾಗಿದೆ.