ಸನ್ಮಾರ್ಗ ವಾರ್ತೆ
ಇಸ್ರೇಲ್ನ ಸೇನೆಯನ್ನು “ಭಯೋತ್ಪಾದಕ ಸಂಘಟನೆ” ಎಂದು ಹೆಸರಿಸುವಂತೆ ಇಸ್ಲಾಮಿಕ್ ದೇಶಗಳಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರೆ ನೀಡಿದ್ದಾರೆ.
“ಗಾಜಾ ಪಟ್ಟಿಯಲ್ಲಿ ಇಸ್ರೇಲ್ನ ಪ್ರಸ್ತುತ ದಾಳಿಯನ್ನು ಉಲ್ಲೇಖಿಸಿ ಇಸ್ರೇಲ್ನೊಂದಿಗೆ ಸಂಬಂಧವನ್ನು ಕಡಿದು ಹಾಕಲು ಇಸ್ಲಾಮಿಕ್ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ. ಪ್ಯಾಲೆಸ್ತೀನಿಯರಿಗೆ ಹೆಚ್ಚಿನ ಬೆಂಬಲ ನೀಡುವಂತೆ ಅವರು ಸೂಚಿಸಿದ್ದಾರೆ.”
ಸೌದಿ ರಾಜಧಾನಿ ರಿಯಾದ್ನಲ್ಲಿ ಶನಿವಾರ ನಡೆದ ಅರಬ್ ಮತ್ತು ಮುಸ್ಲಿಂ ನಾಯಕರ ಶೃಂಗ ಸಭೆಯಲ್ಲಿ ಇಬ್ರಾಹಿಂ ರೈಸಿ ಮಾತನಾಡಿದರು. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಚರ್ಚಿಸಲು ಉದ್ದೇಶಿಸಿರುವ ಒಐಸಿ ಶೃಂಗ ಸಭೆಯಲ್ಲಿ ಭಾಗವಹಿಸಲು ಅವರು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇಸ್ರೇಲ್ನ ಸೈನ್ಯಕ್ಕೆ ‘ಭಯೋತ್ಪಾದಕ ಗುಂಪು’ ಎಂದು ಹೆಸರಿಸುವಂತೆ ಇಸ್ಲಾಮಿಕ್ ದೇಶಗಳಿಗೆ ರೈಸಿ ರೈಸಿ ಒತ್ತಾಯಿಸಿದ್ದಾರೆ.












