✍️ ಶಾಝಿಲ್ ಉಸ್ಮಾನ್
ಕೆನಡದಲ್ಲಿ ಕಳೆದ ರವಿವಾರ ಲಿಬರಲ್ ಪಾರ್ಟಿಗೆ ಹೊಸ ನಾಯಕನಾಗಿ ಮಾರ್ಕ್ ಕಾರ್ನಿ ಆಯ್ಕೆಯಾದರು. ಹತ್ತು ವರ್ಷ ಜಸ್ಟಿನ್ ಟ್ರುಡೊ ಅಧಿಕಾರದಲ್ಲಿದ್ದರು. ಎರಡು ಬಾರಿ ಅವರು ಪ್ರಧಾನಿಯಾಗಿ ಆಯ್ಕೆಗೊಂಡಿದ್ದರು. ಜಸ್ಟಿನ್ ವಿರುದ್ಧದ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಟ್ರುಡೊ ಕುರ್ಚಿ ಬಿಡ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಮೆರಿಕದಿಂದ ತರಿಸುವ ಸಾಮಾನುಗಳಿಗೆ ತಿರುವೆ ಹೆಚ್ಚಿಸಿದ್ದು ಕೂಡ ಟ್ರುಡೊ ಸರಕಾರಕಕ್ಕೆ ತೊಂದರೆ ಸೃಷ್ಟಿಸಿತು. ಒಂದರ್ಥದಲ್ಲಿ ಅದು ರಾಷ್ಟ್ರೀಯತೆಯ ಭಾವನೆ ಗಟ್ಟಿಗೊಳಿಸಲು ಸಹಕಾರಿಯೇ ಆಗಿತ್ತು.
ಆದರೆ ಟ್ರುಡೊರಿಗೆ ಅದರಿಂದ ಲಾಭ ಎತ್ತಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ ತನ್ನ ಪರ ಜನರ ಭಾವನೆಯನ್ನು ಕ್ರೋಡೀಕರಣಗೊಳ್ಳುವವರೆಗೆ ಅವರು ಕಾಯಲೂ ಇಲ್ಲ. ಮೊದಲೇ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊಸ ನಾಯಕನನ್ನು ಆಯ್ಕೆಮಾಡಲು ಅವಕಾಶ ಮಾಡಿಕೊಟ್ಟು ರಾಜಕಾರಣಿಗಳಿಗೆ ಮಾದರಿ ಹಾಕಿಕೊಟ್ಟರು.
ಈಗ ಅಮೆರಿಕದ ತಿರುವೆ ಮತ್ತು ಕೆನಡದ ಜನರ ಪ್ರೀತಿ ಗಳಿಸುವ ಆಡಳಿತವನ್ನು ಹೊಸ ಪ್ರಧಾನಿಯಾಗಿ ಬಹುಮತದಿಂದ ಆಯ್ಕೆಯಾದ ಕಾರ್ನಿ ನೀಡಬೇಕಾಗುತ್ತದೆ. ಅಂದರೆ ಕಾರ್ನಿ ಪಾರ್ಟಿಯ ಹೊಸ ಮುಖ್ಯಸ್ಥ. ಜೊತೆಗೆ ಕೆನಡಕ್ಕೆ ಪ್ರಧಾನಿ ಈ ಎರಡೂ ಹೊಣೆಗಾರಿಕೆಗಳನ್ನು ಅವರು ನಿಭಾಯಿಸಬೇಕಾಗಿದೆ. ಕಾರ್ನಿ ಕೆನಡದ ಸೆಂಟ್ರಲ್ ಬ್ಯಾಂಕ್ನ ಮುಖ್ಯಸ್ಥರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.
ಬ್ರಿಟಿಷ್ ಪ್ರಜೆಯಲ್ಲದೆಯೇ ಬ್ಯಾಂಕ್ ಆಫ್ ಇಂಗ್ಲೆಂಡಿನ ಗವರ್ನರ್ ಆಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಕಾರ್ನಿ ಪ್ರದರ್ಶಿಸಿದ್ದಾರೆ. ಆರ್ಥಿಕ ರಂಗದಲ್ಲಿ ಕಾರ್ನಿಯವರು ಅನುಭವಿ ವ್ಯಕ್ತಿ. ಅಕ್ಟೋಬರಿನಲ್ಲಿ ಸಾರ್ವತ್ರಿಕ ಚುನಾವಣೆ ಇದೆ. ಅಲ್ಲಿಯವರೆಗೆ ಕಾರ್ನಿಯು ಪಾರ್ಟಿಯ ಮುಖ್ಯಸ್ಥನಾಗಿ ಇದ್ದು ನಂತರ ಚುನಾವಣೆಗೆ ಹೋಗಿ ಗೆದ್ದು ಬರಬೇಕಾಗಿದೆ. ಜೊತೆ ಈ ತಿಂಗಳು 24ಕ್ಕೆ ಪಾರ್ಲಿಮೆಂಟ್ ಸೆಶನ್ಸ್ ನಡೆಯಲಿದೆ. ಅಲ್ಲಿ ವಿಶ್ವಾಸ ಮತ ಕೂಡ ಗೆಲ್ಲಬೇಕಾಗಿದೆ, ಲಿಬರಲ್ ಪಾರ್ಟಿ ಟ್ರಂಪ್ ತಿರುವೆಯ ವಿರುದ್ಧ ಸೆಟೆದೆದ್ದು ನಿಂತದ್ದು ಕೆನಡದ ಜನರಲ್ಲಿ ಅ ನುಕೂಲಕರ ವಾತಾವರಣ ನಿರ್ಮಿಸಿದೆ. ಕೆನಡದಲ್ಲಿ ಇರುವುದು ಎಂಟು ಲಕ್ಷ ಜನರು. ಅದರಲ್ಲಿ ಶೇ. 2ರಷ್ಟು ಇಂಡಿ ಯನ್ ಸಿಖ್ ಸಮುದಾಯ ಇದೆ.
ಇನ್ನೊಂದು ಕಡೆ ಕೆನಡ ಸಹಿತ ತಿರುವೆ ಹೆಚ್ಚಿಸುವ ಬಿಸಿನೆಸ್ ವಾರ್ ಘೋಷಿಸಿರುವ ಟ್ರಂಪ್ ಅಮೆರಿಕದ ಅಧ್ಯಕ್ಷನಾಗಿ ಕರ್ತವ್ಯ ನಿರತನಾಗಿದ್ದ ವೇಳೆ ಹತ್ಯೆಯಾಗಿದ್ದ ಜಾನ್ ಎಫ್ ಕೆನಡಿಯ ಹತ್ಯಾ ಸಂಬಂಧಿ ದಾಖಲೆಗಳನ್ನು ಬಿಡುಗಡೆಗೊಳಿಸುವೆ ಎಂದು ಘೋಷಿಸಿ ಜಗತ್ತಿನ ಮುಂದೆ ಆಶ್ಚರ್ಯ ಸೃಷ್ಟಿಸಿದ್ದಾರೆ. ಜಾನ್ ಎಫ್ ಕೆನಡಿ 1963ರಲ್ಲಿ ಕೊಲೆಯಾಗಿದ್ದರು. 80 ಸಾವಿರ ಪುಟಗಳ ದಾಖಲೆ ಇದು. ಅಮೆರಿಕ ಈ ದಾಖಲೆಯನ್ನು ಗುಟ್ಟಾಗಿ ಇರಿಸಿಕೊಂಡಿತ್ತು. ಅದಕ್ಕೆ ಈಗ ಟ್ರಂಪ್ ಮುಕ್ತಿ ನೀಡಿದ್ದಾರೆ. 57 ವರ್ಷಗಳ ನಂತರ ಈ ದಾಖಲೆ ಬಿಡುಗಡೆ ಮಾಡಿ ಮಾಡಲಿಕ್ಕೇನಿದೆ ಎಂಬುದನ್ನು ಟ್ರಂಪ್ನಲ್ಲಿ ಯಾರೂ ಕೇಳಲು ಹೋಗಬಾರದು. ಅಮೆರಿಕದಲ್ಲಿ ಯಾರೂ ಮಾಡದ್ದನ್ನು ಅವರು ಮಾಡಿದ್ದಾರೆ ಅಷ್ಟೇ.
ಅಮೆರಿಕದ 35ನೇ ಅಧ್ಯಕ್ಷರಾಗಿದ್ದ ಕೆನಡಿಯವರು 1963 ನವೆಂಬರ್ 22ಕ್ಕೆ ಡಲ್ಲಾಸ್ಗೆ ಭೇಟಿ ನೀಡಿದ್ದರು. ತೆರೆದ ಕಾರಿನಲ್ಲಿ ಅವರ ಪ್ರಯಾಣ. ಜೊತೆಯಲ್ಲಿ ಅವರ ಪತ್ನಿ, ಮಕ್ಕಳಿದ್ದರು. ಡಲ್ಲಾಸ್ನ ಡೌನ್ಟೌನ್ನಲ್ಲಿ ಪರೇಡ್ ನಡೆಯುತ್ತಿದ್ದಾಗ ಟೆಕ್ಸಸ್ ಸ್ಕೂಲ್ ಬುಕ್, ಡಿ ಪಾಸಿಟಿ ಕಟ್ಟಡದಿಂದ ಕೆನಡಿಯನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು.
ಕಟ್ಟಡದ ಆರನೆ ಮಹಡಿಯಿಂದ 24 ವರ್ಷದ ಲಿ ಹಾರ್ವಿ ಓಸ್ವಾಲ್ಡ್ರ ನ್ನು ಪೊಲೀಸರು ಬಂಧಿಸಿದರು. ಟೆಕ್ಸಾಸ್ನಿಂದ ಮರಳುವ ಮೊದಲೇ ಸೊವಿ ಯಟ್ ಯೂನಿಯನ್ಗೆ ನಿಷ್ಟಾಂತರ ಮಾಡಿದ ಓರ್ವ ಮಾಜಿ ಮೆರೈನ್ ಆಗಿದ್ದ ಈ ಓಸ್ವಾಲ್ಡ್. ಆದುದರಿಂದ ಕೆಜಿಬಿ ಕೆನಡಿ ಹತ್ಯೆಯಲ್ಲಿ ಭಾಗಿಯಾಗಿದೆ ಎಂಬ ಶಂಕೆಯನ್ನು ಸೃಷ್ಟಿಸಿತ್ತು. 1954ರಿಂದ 1991ರಲ್ಲಿ ಸೋವಿಯತ್ ಯುನಿಯನ್ ಬೇರೆ ಬೇರೆ ಆಗುವವರೆಗೂ ಕೆಜೆಬಿ ಸೋವಿಯತ್ ಯೂನಿಯನ್ನ ಇಂಟಲಿಜೆನ್ಸ್ ಸುರಕ್ಷಾ ಏಜೆನ್ಸಿಯಾಗಿತ್ತು.
ಟ್ರಂಪ್ ಈಗ ಈ ದಾಖಲೆಯ ಕಟ್ಟನ್ನು ಬಿಡುಗಡೆ ಗೊಳಿಸುತ್ತಿದ್ದಾರೆ. ಆದರೆ ಕೆನಡಿಯ ಹತ್ಯೆಯನ್ನು ಸಿಐಎಯ ಒಂದು ಚಿಕ್ಕ ತಂಡ ಮಾಡಿದೆ ಎಂದು ಅದರ ಅಂದಿನ ಮುಖ್ಯಸ್ಥ ಗ್ಯಾರಿ ಅಂಡರ್ ಹಿಲ್ ಹೇಳಿದ್ದು ದಾಖಲೆಯಲ್ಲಿದೆ. ಈ ದಾಖಲೆಗಳಲ್ಲಿ 1960ರ ಕೆಲವು ಫೋಟುಗಳಿವೆ. ಧ್ವನಿ ಮುದ್ರಣಗಳಿವೆ. ಟ್ರಂಪ್ ಚುನಾವಣೆಯ ವೇಳೆಯೇ ಕೆನಡಿ ಹತ್ಯೆಯ ಫೈಲ್ ಬಿಡುಗಡೆಗೊಳಿಸುವೆ ಎಂದಿದ್ದರು. ಟ್ರಂಪ್ ಹೇಳಿದಂತೆ ನಡೆದು ಕೊಂಡಿದ್ದಾರೆ. ಅಮೆರಿಕನ್ನರ ಕೊಲೆ ರಹಸ್ಯದ ಕುತೂಹಲ ಹೊರಟು ಹೋಗಬಹದು! ಆದರೆ ಈಗೇನು ಪ್ರಯೋಜನ? ಟ್ರಂಪ್ಗೆ ಅದು ಬೇಕಿಲ್ಲ.
ಟ್ರಂಪ್ ಹೂತಿಗಳಿಗೆ ನರಕ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಬೆನ್ನಿಗೆ ಅಮೆರಿಕದ ವಿಮಾನಗಳು ಯಮನ್ನ ಮೇಲೆ ಬಾಂಬು ಸುರಿಸಿತು. ಹಲವು ಮಂದಿ ಸಾವಿಗೀಡಾದರು. ಆದರೆ ಟ್ರಂಪ್ರನ್ನು ಒಂಟಿ ಕಾಲಲ್ಲಿ ನಿಲ್ಲಿಸುವಲ್ಲಿ ಹೂತಿಗಳು ನಿಸ್ಸೀಮತೆ ಮೆರೆದಿದ್ದಾರೆ. ಕೆಂಪು ಸಮುದ್ರದಲ್ಲಿ ಅಮೆರಿಕದ ಹ್ಯಾರಿ ಟ್ರೂಮರ್ ಏರ್ ಕ್ರಾಪ್ಟ್ ಹಡಗುಗಳ ಮೇಲೆ ನಾಲ್ಕು ಬಾರಿ ಇದೇ ಹೂತಿಗಳು ಡ್ರೋನ್ ಮತ್ತು ಮಿಸೈಲ್ ದಾಳಿ ಮಾಡಿ ಟ್ರಂಪ್ ಆಡಳಿತವನ್ನು ದಿಕ್ಕೆಡಿಸಿದ್ದು ನಡೆದಿದೆ. ಆದ್ದರಿಂದ ಹೂತಿಗಳು ಸುಮ್ಮನಿರದಿದ್ದರೆ ನಿಮ್ಮ ಮೇಲೆ ಪ್ರತೀಕಾರ ತೀರಿಸುತ್ತೇವೆ ಎಂದು ಇರಾನಿಗೆ ಧಮಕಿ ಹಾಕುತ್ತಿದ್ದಾರೆ.
ಈ ಧಮಕಿಗೆಲ್ಲ ಬಗ್ಗುವವರಿದ್ದಾರಾ? ಹಮಾಸೇ ಜಗ್ಗುವುದಿಲ್ಲ. ಇರಾನ್ ಬಗ್ಗುತ್ತಾ? ಸಾಧ್ಯವಿಲ್ಲ. ಒಟ್ಟಿನಲ್ಲಿ ಟ್ರಂಪ್ ವಿಕ್ಷಿಪ್ತತೆ ಅಂತಹವರ ಅವಸಾನಕ್ಕೆ ಮುನ್ನುಡಿ ಬರೆದರೂ ಅಚ್ಚರಿಯಿಲ್ಲ. ಜಾನ್ ಎಫ್ ಕೆನಡಿ ಬೆಂಬಲಿಗರು ಹೇಗೆ ನಡೆದುಕೊಂಡಾರು ದಾಖಲೆ ಬಹಿರಂಗವಾದ ಮೇಲೆ ಎಂಬ ಒಂದು ಕುತೂಹಲ ಇದ್ದೇ ಇದೆ.












