ಕೃಷಿ ಕಾನೂನುಗಳನ್ನು ರದ್ದು ಪಡಿಸಲು ಕೇಂದ್ರ ಸರಕಾರಕ್ಕೆ ಅಕ್ಟೋಬರ್ 2ರ ವರೆಗೆ ಕಾಲಾವಕಾಶ: ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್

0
383

ಸನ್ಮಾರ್ಗ ವಾರ್ತೆ

ನವದೆಹಲಿ:ನೂತನ ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಲು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೂ ಕಾಲಾವಕಾಶ ನೀಡಿವೆ.

ತಮ್ಮ ಬೇಡಿಕೆ ಈಡೇರದೇ ಮತ್ತು ಮೂರು ಕೃಷಿ ಕಾನೂನುಗಳು ರದ್ದಾಗದೆ ನಮ್ಮ ಮನೆಗಳಿಗೆ ವಾಪಸ್ ಹೋಗಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ಕೃಷಿ ಕಾನೂನುಗಳನ್ನು ರದ್ದುಪಡಿಸಲು ಅಕ್ಟೋಬರ್ 2ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ತದನಂತರ ಮುಂದಿನ ಯೋಜನೆ ಮಾಡುತ್ತೇವೆ. ಒತ್ತಡಕ್ಕೊಳಗಾಗಿ ಸರ್ಕಾರದ ಜೊತೆಗೆ ಮಾತುಕತೆಯನ್ನು ನಡೆಸಲ್ಲ ಎಂದು ಹೇಳಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೂ ಕಾನೂನು ರೂಪಿಸಬೇಕೆಂದು ಅವರು ಒತ್ತಾಯಿಸಿದರು.