ಮದರ್ ಥೆರೆಸಾರ ಮಿಷನರೀಸ್ ಆಫ್ ಚ್ಯಾರಿಟಿ ಸಂಸ್ಥೆಗೆ ವಿದೇಶಿ ದೇಣಿಗೆ ಸ್ವೀಕಾರಕ್ಕೆ ಅನುಮತಿ

0
199

ಸನ್ಮಾರ್ಗ ವಾರ್ತೆ

ಕೊಲ್ಕತಾ: ಮದರ್ ಥೆರೆಸಾರ ಮಿಷನರೀಸ್ ಆಫ್ ಚ್ಯಾರಿಟಿ ಸಂಸ್ಥೆಗೆ ಎಫ್‍ಸಿಇಆರ್‌ಐ ನೋಂದಣಿ ನವೀಕರಿಸಲಾಗಿದ್ದು ಇದರೊಂದಿಗೆ ವಿದೇಶದಿಂದ ಫಂಡ್ ಸ್ವೀಕಾರ ಸಾಧ್ಯವಾಗಲಿದೆ. ಕೇಂದ್ರ ಗೃಹಖಾತೆಯಲ್ಲಿ ಚ್ಯಾರಿಟಿ ಖಾತೆ ನವೀಕರಣದ ಕುರಿತು ಇಂಡಿಯನ್ ಟೈಮ್ಸ್ ವರದಿ ಮಾಡಿದೆ. ಈ ಹಿಂದೆ ಚ್ಯಾರಿಟಿಯ ವಿದೇಶಿ ಫಂಡ್ ಸ್ವೀಕಾರ ಅನುಮತಿಯನ್ನು ಗೃಹ ಸಚಿವಾಲಯ ರದ್ದುಪಡಿಸಿ ನಿಬಂಧನೆಗಳನ್ನು ಪಾಲಿಸಲಾಗಿಲ್ಲ ಎಂದು ಸಬೂಬು ನೀಡಿತ್ತು.

ಈ ಹಿಂದೆ ಕ್ರಿಸ್‍ಮಸ್ ಸಂದರ್ಭದಲ್ಲಿ ಚ್ಯಾರಿಟಿಯ ಬ್ಯಾಂಕ್ ಖಾತೆ ರದ್ದುಪಡಿಸಿದ್ದಕ್ಕೆ ಪ.ಬಂಗಾಳ ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದರು. ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಹಿತ 22,000 ಜನರ ಆಹಾರ ಔಷಧಕ್ಕೆ ಇದು ಅಡಚಣೆಯಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದರು. ನಂತರ ಲೈಸನ್ಸ್ ನವೀಕರಿಸದಿರಲು ತೀರ್ಮಾನಿಸಲಾಗಿದೆ ಎಂದು ಡಿಸೆಂಬರ್ 25ಕ್ಕೆ ಗೃಹ ಸಚಿವಾಲಯ ತಿಳಿಸಿತ್ತು. ಡಿಸೆಂಬರ್ 31ಕ್ಕೆ ಅನುಮತಿಯ ಸಮಯ ಮುಗಿಯುತ್ತಿತ್ತು. ಚ್ಯಾರಿಟಿಯ ಖಾತೆಯನ್ನು ಗೃಹ ಸಚಿವಾಲಯ ಮುಟ್ಟುಗೊಲು ಹಾಕಿತ್ತು.