ಎಲೋನ್ ಮಸ್ಕ್ ರನ್ನು ಗಾಝಕ್ಕೆ ಆಹ್ವಾನಿಸಿದ ಹಮಾಸ್

0
3794

ಸನ್ಮಾರ್ಗ ವಾರ್ತೆ

ಟೆಸ್ಲದ ಸಿಇಒ ಎಲೋನ್ ಮಸ್ಕ್ ರನ್ನು ಗಾಝಕ್ಕೆ ಬನ್ನಿ ಎಂದು ಹಮಾಸ್ ಆಹ್ವಾನಿಸಿದೆ. ಇಸ್ರೇಲ್ ದಾಳಿಯಲ್ಲಿ ನಾಶವಾದ ಗಾಝದ ಪ್ರದೇಶಗಳಿಗೆ ಮಸ್ಕ್ ಭೇಟಿ ನೀಡಬೇಕೆಂದು ಹಮಾಸ್ ಆಗ್ರಹಿಸಿದೆ.

ಎಲೊನ್ ಮಸ್ಕ್ ನಿನ್ನೆ ಇಸ್ರೇಲಿಗೆ ಹೋಗಿದ್ದು, ಇಸ್ರೇಲಿಗೆ ಬೆಂಬಲ ಸೂಚಿಸಿದ್ದರು. ಈ ಸಂದರ್ಭದಲ್ಲಿ ಪೆಲೆಸ್ತೀನ್ ನ ಪ್ರದೇಶಗಳಲ್ಲಿ ಭಯೋತ್ಪಾದನೆ ಇಲ್ಲವಾಗಿಸಬೇಕೆಂದು ಮಸ್ಕ್ ಹೇಳಿದ್ದರು. ಇದರ ನಂತರ ಹಮಾಸ್ ಪ್ರತಿನಿಧಿ ಗಾಝಕ್ಕೆ ಬಂದು ನೋಡಿ ಹೋಗಿ ಎಂದು ಎಲೋನ್ ಮಸ್ಕ್ ರಿಗೆ ಆಹ್ವಾನ ನೀಡಿದ್ದಾರೆ.

ಗಾಝದ ಜನರ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಮಸ್ಕ್ ನೋಡಬೇಕು ಎಂದು ಹಮಾಸ್ ಪ್ರತಿನಿಧಿ ಒಸಾಮಾ ಹಂದಾನ್ ಬೈರೂತ್‍ನಲ್ಲಿ ಹೇಳಿದರು.

ಮೊದಲು ಎಲೋನ್ ಮಸ್ಕ್ ಫೆಲಸ್ತೀನಿಗೆ ಬೆಂಬಲ ಸೂಚಿಸಿದ್ದರು. ಬೃಹತ್ ಕಂಪೆನಿಗಳಾದ ಆಪಲ್ ಸಹಿತ ಹಲವು ಉದ್ಯಮಿಗಳು ಮಸ್ಕ್ ಗೆ ಜಾಹೀರಾತು ಕೊಡುವುದು ನಿಲ್ಲಿಸಿದ್ದರು. X ನಲ್ಲಿ ಯಹೂದಿ ವಿರೋಧಿ ಹೇಳಿಕೆ ನೀಡಿದ್ದು ಮತ್ತು ಮಸ್ಕ್ ಸೆಮೆಟಿಕ್ ವಿರೋಧಿ ಎಂದು ಆರೋಪಿಸಿ ಬೆಂಬಲ ನಿಲ್ಲಿಸಿದ ನಂತರ ಎಲೋನ್ ಮಸ್ಕ್ ಇಸ್ರೇಲನ್ನು ಬೆಂಬಲಿಸಿದ್ದಾರೆ.