ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಈಗ ಹಿಂದೂ ಸನ್ಯಾಸಿಗಳಿಂದಲೂ ಪ್ರತಿಭಟನೆ

0
1967

ಸನ್ಮಾರ್ಗ ವಾರ್ತೆ-
ಕೊಲ್ಕತಾ, ಡಿ. 31: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ದೇಶವನ್ನು ಧರ್ಮಾಧಾರಿತವಾಗಿ ವಿಭಜಿಸುವ ಸಂಚು ಎಂದು ಆರೋಪಿಸಿ ಹಿಂದೂ ಸನ್ಯಾಸಿಗಳೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ . ಪಶ್ಚಿಮ ಬಂಗಾಳದ ಸನಾತನ ಬ್ರಾಹ್ಮಣ ಟ್ರಸ್ಟ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಕೊಲ್ಕತಾ ನಗರದ ಮಯೊ ರಸ್ತೆಯಲ್ಲಿ ಗಾಂಧಿ ಪ್ರತಿಮೆಯ ಮುಂದೆ ನೂರಾರು ಬ್ರಾಹ್ಮಣ ಯತಿಗಳು ಪ್ರತಿಭಟನೆ ನಡೆಸಿ ಪೌರತ್ವ ಕಾನೂನು ವಿರೋಧಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ರಿಜಿಸ್ಟರ್, ಪೌರತ್ವ ತಿದ್ದುಪಡಿ ಕಾನೂನು ದೇಶದಿಂದ ಒಂದು ಧರ್ಮದವರನ್ನು ಹೊರಗೆ ದೂಡುವ ಉದ್ದೇಶ ಹೊಂದಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮಿಶ್ರ ಹೇಳಿದರು. ಇದು ದುರದೃಷ್ಟಕರ ಎಂದ ಅವರು ಧರ್ಮವನ್ನು ಗುರಿಯಾಗಿಟ್ಟು ಕೇಂದ್ರ ಸರಕಾರದ ಕ್ರಮ ಖಂಡನೀಯ ಎಂದು ಹೇಳಿದರು.