ಇಸ್ರೇಲ್: ಸರಕಾರ ರಚಿಸುವುದರಿಂದ ಹಿಂದೆ ಸರಿದ ನೆತನ್ಯಾಹು

0
519

ಸನ್ಮಾರ್ಗ ವಾರ್ತೆ

ಜೆರುಸಲೇಮ್,ಅ.22: ರಾಜಕೀಯ ಪ್ರತಿಸ್ಪರ್ಧಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಏನೂ ನಿರ್ಧಾರವಾಗದೆ ಸಖ್ಯ ಸರಕಾರ ರಚಿಸುವುದರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಂದೆ ಸರಿದಿದ್ದಾರೆ.

ಬೆನ್ನಿ ಗಾಂಟ್ಸ್‍ರ ಬ್ಲೂ ಆಂಡ್ ವೈಟ್ ಪಾರ್ಟಿಯೊಂದಿಗೆ ಸಖ್ಯ ಮಾಡಿಕೊಳ್ಳುವಲ್ಲಿ ಅವರು ವಿಫಲರಾದರು. ಈ ಸಲದ ಇಸ್ರೇಲಿನ ಚುನಾವಣೆಯಲ್ಲಿ ನೆತನ್ಯಾಹುರ ಲಿಕುಡ್ ಪಾರ್ಟಿ ಅಧಿಕಾರಕ್ಕೆ ಬರಲು ವಿಫಲವಾಗಿತ್ತು. ಚರ್ಚೆ ವಿಫಲವಾಗಿದೆ ಸರಕಾರ ರಚಿಸುವುದರಿಂದ ತಾನು ಹಿಂದೆ ಸರಿದಿರುವೆ ಎಂದು ನೆತನ್ಯಾಹು ವೀಡಿಯೊ ಸಂದೇಶದಲ್ಲಿ ತಿಳಿಸಿದರು.

ಇಸ್ರೇಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಕ್ಕಿಲ್ಲ. ಸರಕಾರ ರಚಿಸಲು ಅಧ್ಯಕ್ಷ ರ್ಯೂವನ್ ರಿವ್ಲಿನ್‍ರು 28 ದಿನಗಳ ಅವಕಾಶ ಕಲ್ಪಿಸಿದ್ದರು. ಸಮಯ ಮಿತಿಯಲ್ಲಿ ಯಾರೊಂದಿಗೂ ಸಹಮತ ಏರ್ಪಟ್ಟಿಲ್ಲ ಈ ಹಿನ್ನೆಲೆಯಲ್ಲಿ ತಾನು ಸರಕಾರ ರಚಿಸಲು ಅಸಮರ್ಥನಾಗಿರುವೆ ಎಂದು ಅವರು ತಿಳಿಸಿದ್ದಾರೆ.

ಇನ್ನು ನೆತನ್ಯಾಹು ಪ್ರತಿಸ್ಪರ್ಧಿ ಬೆನ್ನಿ ಗಾಂಟ್ಸ್‍ರ ಪಾರ್ಟಿಗೆ ಸರಕಾರ ರಚಿಸುವ ಅವಕಾಶ ಲಭ್ಯವಾಗಿದೆ. ಅವರಿಗೂ 28 ದಿವಸ ಸಿಗಲಿದೆ. 120 ಸದಸ್ಯರ ಪಾರ್ಲಿಮೆಂಟಿನಲ್ಲಿ ನೆತನ್ಯಾಹು ಪಾರ್ಟಿಗೆ 55 ಮತ್ತು ಗಾಂಟ್ಸ್‍ಗೆ 54 ಮಂದಿಯ ಬೆಂಬಲವಿದೆ. ಗಾಂಟ್ಸ್ ಸಖ್ಯ ಸರಕಾರ ರಚಿಸಲು ಯತ್ನಿಸಿದರೂ ಭ್ರಷ್ಟಾಚಾರದೊಂದಿಗೆ ಸಹಮತಕ್ಕೆ ಅವರು ಸಿದ್ಧರಾಗಿಲ್ಲ. ನೆತನ್ಯಾಹು ವಿರುದ್ಧ ಭ್ರಷ್ಟಾಚಾರ ಆರೋಪ ಇದೆ.