ಕಾಶ್ಮೀರಿ ಪತ್ರಕರ್ತೆ ಮಸ್ರತ್ ಜಹ್ರಾಗೆ 15 ಲಕ್ಷ ರೂ. ಮೊತ್ತದ IWMFನ ಧೀರ ಫೋಟೋ ಜರ್ನಲಿಸಂ ಪ್ರಶಸ್ತಿ

0
968

ಸನ್ಮಾರ್ಗ ವಾರ್ತೆ

ಕಾಶ್ಮೀರ್,ಜೂ.12: ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಮಸ್ರತ್ ಜಹ್ರಾ ಅವರು ಗುರುವಾರ ಇಂಟರ್ನ್ಯಾಷನಲ್ ವುಮೆನ್ಸ್ ಮೀಡಿಯಾ ಫೌಂಡೇಶನ್ (ಐಡಬ್ಲ್ಯುಎಂಎಫ್) ನ ಅಂಜಾ ನೈಡ್ರಿಂಗ್ಹೌಸ್ ಧೈರ್ಯ ಫೋಟೋ ಜರ್ನಲಿಸಂ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕಿ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ವಿಜೇತೆ ಅಂಜಾ ನೈಡ್ರಿಂಗ್‌ಹೌಸ್ (1965-2014) ಅವರ ಜೀವನ ಮತ್ತು ಕಾರ್ಯವನ್ನು ಗೌರವಿಸಲು ಈ ಪ್ರಶಸ್ತಿಯನ್ನು ರಚಿಸಲಾಗಿದೆ.

ವಿಶ್ವಾದ್ಯಂತ 40 ದೇಶಗಳ ಮಹಿಳಾ ಫೋಟೊ ಜರ್ನಲಿಸ್ಟ್‌ಗಳ 100ಕ್ಕೂ ಹೆಚ್ಚು ಅರ್ಜಿಗಳಿಂದ ಕಾಶ್ಮೀರದಲ್ಲಿ ಸಂಘರ್ಷದ ಪೋರ್ಟ್‌ಫೋಲಿಯೋಗಾಗಿ ಜಹ್ರಾರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ.

$20,000 (15,19,021 ಭಾರತೀಯ ರೂಪಾಯಿ)ಮೌಲ್ಯದ ಬಹುಮಾನವನ್ನು ಐಡಬ್ಲ್ಯೂಎಂಎಫ್ ವಾರ್ಷಿಕವಾಗಿ ನೀಡಲಾಗುತ್ತದೆ, ಇದು 1990 ರಿಂದ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಧೈರ್ಯಶಾಲಿ ಮಹಿಳಾ ಪತ್ರಕರ್ತರನ್ನು ಪ್ರೋತ್ಸಾಹಿಸಕು ನೀಡಲಾಗುತ್ತಿದೆ.

ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಜಹ್ರಾ ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಮಾಡಿದ ವರದಿಗಳ ಕಾರಣಕ್ಕಾಗಿ ಭಾರತ ಸರ್ಕಾರಕ್ಕೆ ಬೆದರಿಕೆಯಾಗಿ ಮಾರ್ಪಟ್ಟಿದ್ದಾರೆ. ಅವರು ಜೂನ್ 2020ರ ಒನ್ ಫ್ರೀ ಪ್ರೆಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡರು. ಇದು ವಿಶ್ವದ ಅತ್ಯಂತ ತುರ್ತು ಪತ್ರಿಕಾ ಸ್ವಾತಂತ್ರ್ಯ ಪ್ರಕರಣಗಳನ್ನು ದಾಖಲಿಸುತ್ತದೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಛಾಯಾಚಿತ್ರಗಳ ಮುಕ್ತ ತನಿಖೆಯಿಂದಾಗಿ; ಜಹ್ರಾರಿಗೆ ದಂಡ ಅಥವಾ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು” ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ.

ಈ ವರ್ಷದ ಅವರ ಛಾಯಾಚಿತ್ರಗಳು ಸರ್ಕಾರದ ಕಣ್ಗಾವಲು ಮತ್ತು ಸ್ಥಳೀಯ ಸಮುದಾಯಗಳ ಮೇಲಿನ ರಾಜಕೀಯ ಬೆದರಿಕೆಗಳನ್ನು ಪ್ರತಿಬಿಂಬಿಸುತ್ತವೆ. ಅಪಾಯದ ಮಧ್ಯೆ, ಈ ವರ್ಷ ನಾಗರಿಕ ತ್ಯಾಗ ಮತ್ತು ಪ್ರತಿರೋಧವನ್ನು ದಾಖಲಿಸಲು ತನ್ನದೇ ಸಮುದಾಯದಲ್ಲಿ ಅವರು ಧೈರ್ಯದಿಂದ ಕಾರ್ಯನಿರ್ವಹಿಸಿದ್ದಾರೆ”ಎಂದು ಅದು ಹೇಳಿದೆ.

ಕಾರವಾನ್, ದಿ ವಾಷಿಂಗ್ಟನ್ ಪೋಸ್ಟ್, ಟಿಆರ್‌ಟಿ ವರ್ಲ್ಡ್, ಅಲ್ ಜಝೀರಾ, ದಿ ನ್ಯೂ ಹ್ಯುಮಾನಿಟೇರಿಯನ್, ರಿಲಿಜನ್ ಅನ್ಪ್ಲಗ್ಡ್ ಮತ್ತು ಹಲವಾರು ಇತರ ಮಾಧ್ಯಮಗಳಲ್ಲಿ ಜಹ್ರಾ ಅವರ ವರದಿಗಳು ಕಾಣಿಸಿಕೊಂಡಿವೆ. ಜಹ್ರಾ ಈ ಹಿಂದೆ ನ್ಯೂಯಾರ್ಕ್‌ನಲ್ಲಿ ನಡೆದ ವಾರ್ಷಿಕ ಫೋಟೊ ವಿಲ್ಲೆ ಉತ್ಸವದಲ್ಲಿ ತನ್ನ ಪೋರ್ಟ್‌ಫೋಲಿಯೋವನ್ನು, “ಜರ್ನಲಿಸ್ಟ್ ಅಂಡರ್ ಫಯರ್”ಎಂಬ ಹೆಸರಲ್ಲಿ ಪ್ರದರ್ಶಿಸಿದ್ದರು.

ಪ್ರಶಸ್ತಿ ಲಭಿಸಿರುವುದು ತಿಳಿದಾಗ ಕಾಶ್ಮೀರದಿಂದ ಹರದಯಾಂತರಾಳದ ಕೃತಜ್ಞತೆಯೊಂದಿಗೆ ಜಹ್ರಾರವರು ಹೀಗೆ ಹೇಳಿದರು: “ಐಡಬ್ಲ್ಯೂಎಂಎಫ್‌ನಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುವುದರಿಂದ ಸಣ್ಣ ಸ್ಥಳಗಳಿಂದ ಬರುವ ನನ್ನಂತಹ ಪತ್ರಕರ್ತರ ಕೆಲಸವನ್ನು ಅಂಗೀಕರಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ಗೌರವವು ನನ್ನ ಕೌಶಲ್ಯಗಳನ್ನು ಪರಿಪೂರ್ಣಗೊಳಿಸಲು ಮತ್ತು ನನ್ನ ಕೆಲಸವನ್ನು ಹೆಚ್ಚು ವಿಶ್ವಾಸದಿಂದ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕಷ್ಟಕರ ವಾತಾವರಣದಲ್ಲಿ ಕೆಲಸ ಮಾಡುವ ಇತರ ಮಹಿಳಾ ಛಾಯಾಗ್ರಾಹಕರಿಗೆ ಇದು ಸ್ಫೂರ್ತಿಯಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ಸಂಘರ್ಷ ವಲಯಗಳಲ್ಲಿ ಕೆಲಸ ಮಾಡಲು ಆಯ್ಕೆ ಮಾಡುವ ಎಲ್ಲ ಮಹಿಳೆಯರಿಗೆ ಇದು ಸಂದ ಗೌರವವಾಗಿದೆ. ಅಂತಿಮವಾಗಿ, ಉತ್ತಮ ಕಥೆಗಾರಳಾಗಲು ನನಗೆ ಸಹಾಯ ಮಾಡಿದ್ದಕ್ಕಾಗಿ ನನ್ನ ಮಾರ್ಗದರ್ಶಕ ಶೌಕತ್ ನಂದಾಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.” ಎಂದು ಅವರು ಹೇಳಿದರು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.