ಸನ್ಮಾರ್ಗ ವಾರ್ತೆ
ಮನಾಮ, ಮಾ. 5: ಕೊರೊನಾ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೂಪಾಯಿಯ ಮೌಲ್ಯ ಕುಸಿತವಾಗಿದೆ. ಬುಧವಾರ ಒಂದು ಬಹ್ರೈನ್ ದೀನಾರ್ ಗೆ 194.17 ರೂಪಾಯಿವರೆಗೆ ಬಂದು ತಲುಪಿತ್ತು. ನಂತರ 193.91ಕ್ಕೆ ತಲುಪಿತು. ರೂಪಾಯಿ ಮೌಲ್ಯ ಕಡಿಮೆಯಾದ್ದರಿಂದ ಅನಿವಾಸಿಗಳು ಮನೆಗೆ ಹಣ ಕಳುಹಿಸುವ ಗಡಿಬಿಡಿಯಲ್ಲಿದ್ದಾರೆ. ಇತ್ತೀಚೆಗಿನ ಅತಿಹೆಚ್ಚಿನ ದೀನಾರ್ ದರ ಇದು. ಜನರು ಸಾಮಾನ್ಯವಾಗಿ ಕಳುಹಿಸುವುದಕ್ಕಿಂತ ಹೆಚ್ಚಿನ ದರ ಈ ಗ ಸಿಗುತ್ತಿದೆ ಎಂದು ಪ್ರಮುಖ ಹಣ ವಹಿವಾಟು ಸಂಸ್ಥೆಗಳು ಹೇಳುತ್ತಿದೆ. ಬುಧವಾರ ಬೆಳಗ್ಗೆ ಡಾಲರ್ ನ ವಿರುದ್ಧ ರೂಪಾಯಿಯ ಮೌಲ್ಯ 73.63ಕ್ಕೆ ಕುಸಿದಿತ್ತು. ನಂತರ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಿ 73.21 ರೂಪಾಯಿಗೆ ತಲುಪಿದೆ. ಈ ವರ್ಷ ಈವರೆಗೆ ಶೇ. 2.8 ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಡಾಲರ್ ಮುಂದೆ ರೂಪಾಯಿಯ ಮೌಲ್ಯ 74 ರೂಪಾಯಿಗೆ ತಲುಪಬಹುದು ಎಂದು ಆರ್ಥಿಕ ಜಗತ್ತು ಹೇಳುತ್ತಿದೆ. ಇದರ ನಂತರವೂ ಸ್ವಲ್ಪ ಪ್ರಗತಿಯಾಗಿದ್ದು ಸಮಾಧಾನದ ವಿಷಯವಾಗಿದೆ.
ಭಾರತದಲ್ಲಿ ಕೊರೊನಾ (ಕೋವಿಡ್-19) ಪ್ರಕರಣಗಳು ವರದಿಯಾದ್ದರಿಂದ ರೂಪಾಯಿ ಕುಸಿತವಾಗಿದೆ. ಚೀನದಿಂದ ತರುವ ಹೆಚ್ಚಿನ ವಸ್ತುಗಳು ಬಹುತೇಕ ಸ್ಥಗಿತವಾದ ಸ್ಥಿತಿಯಲ್ಲಿದೆ. ಇದು ಜಾಗತಿಕ ಆರ್ಥಿಕತೆಗೆ ದೊಡ್ಡ ಏಟು ನೀಡಿದೆ. ಬೃಹತ್ ಕಂಪೆನಿಯ ಉತ್ಪಾದನೆಗಳಲ್ಲಿ ಕಡಿಮೆಯಾಗಿದೆ. ಈ ಕಂಪೆನಿಗಳಾಶ್ರಯಿಸಿ ಇದ್ದ ಬೇರೆ ಕಂಪೆನಿಗಳಿಗೆ ಇದು ತಿರುಗೇಟಾಗಿ ಪರಿಣಮಿಸಿದ್ದು ಮಾರಾಟ, ವಿತರಣೆ ಜಾಲ ನಿಶ್ಚಲವಾಗಿದೆ. ವಿದೇಶ ಹೂಡಿಕೆದಾರರು ಶೇರು ಮಾರಿ ಡಾಲರ್ ಮತ್ತು ಚಿನ್ನದಲ್ಲಿ ಆಸಕ್ತಿ ವಹಿಸಿದ್ದು ಕೂಡ ರೂಪಾಯಿ ಮೌಲ್ಯ ಕುಸಿತ ಕಾರಣವಾಗಿದೆ ಎನ್ನಲಾಗುತ್ತಿದೆ.












