ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಮಾ. 5: ಕೊರೊನಾ ವಿವಿಧ ದೇಶಗಳಲ್ಲಿ ಹರಡುವ ಸನ್ನಿವೇಶದಿಂದಾಗಿ ಮಲ್ಟಿ ನ್ಯಾಶನಲ್ ಕಂಪೆನಿಗಳು ಮನೆಯಲ್ಲಿ ಕೂತು ಕೆಲಸ ಮಾಡಲು ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದೆ. ಜಗತ್ತಿನ ಬೃಹತ್ ಬಹುರಾಷ್ಟ್ರ ಕಂಪೆನಿಯಾದ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಅಮೆರಿಕದ ತನ್ನ ಕೆಲಸಗಾರರಿಗೆ ಮನೆಯಲ್ಲಿ ಕೆಲಸ ಮಾಡುವಂತೆ ಬುಧವಾರ ಸೂಚಿಸಿದೆ.
ಸಾನ್ಫ್ರಾನ್ಸಿಸ್ಕೊ ಮೈಕ್ರೊಸಾಫ್ಟ್ ನ ಕೇಂದ್ರ ಕಚೇರಿಯಾಗಿದ್ದು ಸಮೀಪದಲ್ಲಿ ಮತ್ತು ಕ್ಯಾಲಿಪೋರ್ನಿಯದಲ್ಲಿ ಕೊರೊನಾ ವ್ಯಾಪಿಸುತ್ತಿದೆ. ಆದ್ದರಿಂದ ಕಂಪೆನಿ ಈ ನಿರ್ಧಾರಕ್ಕೆ ಬಂದಿದೆ. ಮಾರ್ಚ್ 25ರವರೆಗೆ ಮನೆಯಲ್ಲಿದ್ದು ಕೆಲಸ ಮಾಡಿ ಎಂದು ಕಂಪೆನಿ ತಿಳಿಸಿದೆ. ಉದ್ಯೋಗಿಗಳ ಸುರಕ್ಷಿತತೆ ದೃಢಪಡಿಸುವುದಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಉಪಾಧ್ಯಕ್ಷರು ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಕೆಲಸವನ್ನು ಮನೆಯಲ್ಲಿ ಕೂತು ಮಾಡಲಾಗದ್ದೂ ಇವೆ. ಅದಕ್ಕಾಗಿ ಸರಕಾರದ ನಿರ್ದೇಶದಂತೆ ವೈರಸ್ ಹರಡದ ರೀತಿಯಲ್ಲಿ ಕೆಲಸ ಸೌಕರ್ಯ ಮಾಡಿ ಕೊಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಕಂಪೆನಿಯ ಕೆಲಸಗಾರರು ಅಗ್ಯವಿರುವ ಘಟ್ಟಗಳಲ್ಲದೆ ದೇಶದಿಂದ ಹೊರಗೆ ಮತ್ತು ಇತರೆಡೆಗೆ ಪ್ರಯಾಣಿಸಬಾರದು. ಸುರಕ್ಷೆಯ ಮುನ್ನೆಚ್ಚರಿಕೆ ವಹಿಸದೆ ದೇಶದೊಳಗೆಯೂ ಸಂಚರಿಸಬಾರದೆಂದು ಕಂಪೆನಿ ಮಾರ್ಗದರ್ಶನ ಮಾಡಿದೆ.












