ಸನ್ಮಾರ್ಗ ವಾರ್ತೆ
ತೃಶೂರ್, ಮಾ. 5: ಬ್ಯಾಂಕ್ ಸಿಬ್ಬಂದಿಗಳ ಅತೀ ದೊಡ್ಡ ಸಂಘಟನೆ ಆಲ್ ಇಂಡಿಯ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್ ಮತ್ತು ಆಲ್ ಇಂಡಿಯ ಬ್ಯಾಂಕ್ ಆಫಿಸರ್ಸ್ ಅಸೊಸಿಯೇಶನ್ ಜಂಟಿಯಾಗಿ ಮಾರ್ಚ್ 27ಕ್ಕೆ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ.
ಹತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಮಾಡಿ ಆರು ಬ್ಯಾಂಕುಗಳನ್ನು ಮುಚ್ಚುವ ಕ್ರಮವನ್ನು ನಿಲ್ಲಿಸಬೇಕು. ಐಡಿಬಿಐ ಖಾಸಗೀಕರಣ ನಿಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರವನ್ನು ಹಿಂದೂಡುವ ಸುಧಾರಣಾ ಕಾರ್ಯಗಳನ್ನು ನಿಲ್ಲಿಸಬೇಕು. ಬೃಹತ್ ಪಾವತಿಯಾಗದ ಸಾಲಗಳನ್ನು ವಸೂಲು ಮಾಡಬೇಕು. ಠೇವಣಿದಾರರ ಬಡ್ಡಿದರ ಹೆಚ್ಚಿಸಬೇಕು. ಸೇವಾ ದರ ಕಡಿಮೆಮಾಡಬೇಕೆಂದು ಆಗ್ರಹಿಸಿ ಮುಷ್ಕರ ನಡೆಯಲಿದೆ ಎಂದು ತಿಳಿದು ಬಂದಿದೆ.












