ಜಾರ್ಜ್ ಫ್ಲಾಯ್ಡ್ ಹತ್ಯೆ: ನಗರದ ಪೊಲೀಸ್ ವಿಭಾಗವನ್ನೇ ವಿಸರ್ಜಿಸಲು ಸಿಟಿ ಕೌನ್ಸಿಲ್ ನಿರ್ಣಯ

0
522

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.8: ಜಾರ್ಜ್ ಫ್ಲಾಯ್ಡ್‌ರನ್ನು ಹತ್ಯೆಗೈದ ಮಿನಿಯಪೊಲೀಸ್‌ನ ಪೊಲೀಸರ ಕೃತ್ಯ ದೇಶಾದ್ಯಂತ ಪ್ರತಿಭಟನಾ ಹೋರಾಟಕ್ಕೆ ಕಾರಣವಾಗಿದ್ದು, ಸಾವಿಗೆ ಕಾರಣವಾಗಿರುವ ಮಿನಿಯಪೊಲಿಸ್ ಪೊಲೀಸ್ ವಿಭಾಗವನ್ನೇ ವಜಾಗೊಳಿಸಬೇಕೆಂದು ಮಿನಿಯಪೊಲೀಸ್ ಸಿಟಿ ಕೌನ್ಸಿಲ್ ತೀರ್ಮಾನಿಸಿದ್ದು, ಕೌನ್ಸಿಲ್‌ನ 12ರಲ್ಲಿ ಒಂಬತ್ತು ಸದಸ್ಯರ ಬೆಂಬಲದಿಂದ ಈ ನಿರ್ಣಯ ಪಾಸು ಮಾಡಿದೆ.

ಆದಿತ್ಯವಾರ ಸಿಟಿ ಪಾರ್ಕಿನಲ್ಲಿ ಪ್ರತಿಭಟನೆ ನಡೆದಿತ್ತು. ಇದರಲ್ಲಿ ಕೌನ್ಸಿಲ್‍ನ ಒಂಬತ್ತು ಸದಸ್ಯರು ಭಾಗವಹಿಸಿದರು. ಪೊಲೀಸ್ ವಿಭಾಗವನ್ನು ವಿಸರ್ಜಿಸಬೇಕೆಂದು ಸಿಟಿ ಕೌನ್ಸಿಲ್ ಸದಸ್ಯ ಜೆರಮಿಯ ಎಲಿಸನ್ ಹೇಳಿದರು. ಸಮಾಜವನ್ನು ಸಂರಕ್ಷಿಸಬೇಕಾದ ಪೊಲೀಸರಿಂದ ಅದು ಆಗುತ್ತಿಲ್ಲ. ಎಂದು ಕೌನ್ಸಿಲ್ ಅಧ್ಯಕ್ಸ ಲಿಸಾ ಬೆಂಡರ್ ಹೇಳಿದರು. ಸುಧಾರಣೆಯ ಕ್ರಮಗಳು ಯಶಸ್ವಿಯಾಗಿಲ್ಲ. ಪೊಲೀಸರೊಂದಿಗಿನ ನಗರದ ಸಂಬಂಧ ಕೊನೆಗೊಳಿಸುತ್ತೇವೆ. ಸಮಾಜವನ್ನು ಸುರಕ್ಷಿತವಾಗಿ ಇರಿಸುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಮೇ 25ಕ್ಕೆ ಜಾರ್ಜ್ ಫ್ಲಾಯ್ಡ್‌‌ ರನ್ನು ಪೊಲೀಸರು ಮೊಣಕಾಲಿನಿಂದ ಕೊರಳನ್ನು ಒತ್ತಿ ಕೊಂದು ಹಾಕಿದ್ದರು. ಮುಖ್ಯ ಆರೋಪಿ ಪೊಲೀಸಧಿಕಾರಿ ಡೆರಿಕ್ ಶಾವ್ ವಿರುದ್ಧ ಕೊಲೆ ಆರೋಪದಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. ಫ್ಲಾಯ್ಡ್‌ರ ಸಾವಿನ ನಂತರ ಪೊಲೀಸರ ದೌರ್ಜನ್ಯ ವಿರುದ್ಧ ಹಾಗೂ ವರ್ಣಭೇದ ನೀತಿಯನ್ನು ಕೊನೆಗೊಳಿಸಬೇಕೆಂದು ಅಮೆರಿಕದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ‌.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.